ಗ್ರಾಮ ವಾಸ್ತವ್ಯದಿಂದ ಜನರ ಸಂಕಷ್ಟಪರಿಹಾರ: ಎಂ.ಪಿ.ರೇಣುಕಾಚಾರ್ಯ
ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಸೇವೆ ನನ್ನ ಮೂಲಮಂತ್ರವಾಗಿದ್ದು, ಬೆನಕನಹಳ್ಳಿ ಗ್ರಾಮವೊಂದಕ್ಕೆ 12 ಕೋಟಿ ರು. ಅನುದಾನ ತಂದು ಅಂಬೇಡ್ಕರ್ ಭವನ, ಹೊಳೆಮೆಟ್ಟಿಲು ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳ ಮಾಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಡಿ.11) : ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಸೇವೆ ನನ್ನ ಮೂಲಮಂತ್ರವಾಗಿದ್ದು, ಬೆನಕನಹಳ್ಳಿ ಗ್ರಾಮವೊಂದಕ್ಕೆ 12 ಕೋಟಿ ರು. ಅನುದಾನ ತಂದು ಅಂಬೇಡ್ಕರ್ ಭವನ, ಹೊಳೆಮೆಟ್ಟಿಲು ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳ ಮಾಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕಿನಲ್ಲಿ ಪ್ರತಿ ತಿಂಗಳು ತಪ್ಪದೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ನಿರಂತರ ಆಯೋಜಿಸಿ ಸಾಮಾನ್ಯರ ಸಂಕಷ್ಟಗಳ ಪರಿಹರಿಸಲಾಗಿದೆ ಎಂದರು. ಅತಿ ಮಳೆಯಿಂದÜ ಹಾನಿಯಾದ ಮನೆಗಳಿಗೆ ಪಕ್ಷಬೇಧವಿಲ್ಲದೆ ಪರಿಹಾರ ವಿತರಿಸಲಾಗಿದೆ. ಕೀಳು ಮಟ್ಟದ ರಾಜಕಾರಣ ನನಗೆ ತಿಳಿದಿಲ್ಲ ಎಂದರು.
ಜನಪರ ಯೋಜನೆಗಳ ಕಾಂಗ್ರೆಸ್ ಏಕೆ ತಂದಿಲ್ಲ: ಶಾಸಕ ರೇಣುಕಾಚಾರ್ಯ
ಅಭಿವೃದ್ಧಿ ನನ್ನ ಸಾಧನೆಯಲ್ಲವೇ?
ಸಾಧನೆ ನನ್ನ ಮೂಲಮಂತ್ರ ಹೊನ್ನಾಳಿ ಪಟ್ಟಣದ ಸಮೀಪವಿರುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ, ಭದ್ರಾ ಮತ್ತು ತುಂಗಾ ನಾಲಾ ಆಧುನೀಕರಣ, ತಾಲೂಕು ಕೇಂದ್ರದಲ್ಲಿ 100 ಹಾಸಿಗೆ ಆಸ್ಪತ್ರೆ, ಪ್ರೌಢಶಾಲೆಗಳು, ಪಿಯು ಕಾಲೇಜುಗಳು, ಪದವಿ ಕಾಲೇಜುಗಳು, ಡಿಪ್ಲೋಮೊ, ಐಟಿಐ ಕಾಲೇಜುಗಳ ನನ್ನ ಅವಧಿಯಲ್ಲಿ ಮಂಜೂರು ಮಾಡಿಸಲಾಗಿದೆ. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಿಸಿ ರಸ್ತೆ ಮಾಡಿಸಿರುವುದು ನನ್ನ ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು.
ಗ್ರಾಮ ವಾಸ್ತವ್ಯದಲ್ಲಿ 27 ಸಂಧ್ಯಾಸುರಕ್ಷಾ ಯೋಜನೆ, 4 ವಿಧವಾ ವೇತನ, 4 ಅಂಗವಿಕಲ ಪೋಷಣಾ ವೇತನ, 31 ಇಂದಿರಾಗಾಂಧಿ ವೃದ್ಧಾಪ್ಯ ವೇತನ, 2 ಬಗರ್‌ಹುಕುಂ ಸಾಗುವಳಿ ಪಹಣಿ, 94ಸಿ ಅಡಿ 8 ಹಕ್ಕುಪತ್ರ ಮಂಜೂರಾತಿ, 50 ಆಧಾರ ನೋಂದಣಿ ಸೇರಿ ಒಟ್ಟು 125 ಮಂದಿಗೆ ಆದೇಶ ಪತ್ರ ವಿತರಿಸಲಾಯಿತು.
ಗ್ರಾ.ಪಂ ಸದಸ್ಯ ಎ.ಜಿ.ಮಹೇಂದ್ರಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲೇಶ್ ಮಾತನಡಿದರು. ಬಗರ್‌ಹುಕುಂ ತಾಲೂಕು ಅಧ್ಯಕ್ಷ ಕೆ.ಇ.ನಾಗರಾಜ್, ಸದಸ್ಯರಾದ ಶಾಂತರಾಜ್, ಮಹಾಂತೇಶ್, ಕೆಎಸ್‌ಡಿಎಲ್ ನಿರ್ದೇಶಕ ಶಿವುಹುಡೇದ್, ಬಂಜಾರ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ದೀಪಾ ಸದಸ್ಯರು, ಗ್ರಾಮದ ಮುಖಂಡ ಬಂಗಾರಿ ಬಸಣ್ಣ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು. ತಾಪಂ ಇಒ ರಾಮಭೋವಿ ಸ್ವಾಗತಿಸಿದರು. ತಹಸೀಲ್ದಾರ್ ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊರೋನಾ ವೇಳೆ ಮನೆಯಲ್ಲಿ ಮಲಗಿದ್ರು
ಕೊರೋನಾ ಅವಧಿಯಲ್ಲಿ ಕೇಂದ್ರಗಳಲ್ಲಿ ವಸತಿ ಮಾಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದಲ್ಲದೆ ಸೋಂಕಿತರಿಗೆ ಉಪಹಾರ, ಊಟ ಬಡಿಸಿದ್ದೇನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾದಾಗ ಸಿಬ್ಬಂದಿಯೊಂದಿಗೆ ತೆರಳಿ ಆಮ್ಲಜನಕ ಸಿಲಿಂಡರ್‌ಗಳ ಆಸ್ಪತ್ರೆಗೆ ಪೂರೈಸಿದ್ದೇನೆ. ಟೀಕಿಸುವ ವ್ಯಕ್ತಿಗಳು ಕೊರೊನಾ ಸಮಯದಲ್ಲಿ ಮನೆಯಲ್ಲಿ ಮಲಗಿ ಈಗ ದಿಢೀರನೆ ಚುನಾವಣೆ ಬಂತೆಂದು ಹಳ್ಳಿ ಸುತ್ತುವ ನಾಟಕ ಮಾಡಿದರೆ ಜನರು ಯಾವ ಕಾರಣಕ್ಕೂ ನಂಬುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
Grama Vastavya: ಡಿ.17ರಂದು ಸ್ವಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ವಾಸ್ತವ್ಯ?
ವಿಪಕ್ಷದವರಿಗೆ ಕೆಲಸವಿಲ್ಲದೆ ವೃಥಾ ಆರೋಪಗಳ ಮಾಡುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್‌ನವರು ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ ಅವರ ಕನಸು ನನಸಾಗುವುದಿಲ್ಲ.
ಎಂ.ಪಿ.ರೇಣುಕಾಚಾರ್ಯ, ಶಾಸಕ