ಕೋಲಾರ(ಆ.10): ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾಣಸಿಕೊಂಡಿರುವ ಮಳೆಗೆ ಬಲಿಯಾಗುತ್ತಿರುವ ಸಂತ್ರಸ್ತರಿಗೆ ಮಾಲೂರು ಸ್ಥಳೀಯ ಬಿಜೆಪಿ ಘಟಕವು ಪರಿಹಾರ ಸಂಗ್ರಹ ಕಾರ್ಯಕ್ಕೆ ತೊಡಗಿಸಿಕೊಂಡಿದೆ.

ಪಟ್ಟಣದ ಮಹಾರಾಜ ವೃತ್ತದಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಸಂಗ್ರಹ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿ.ಆರ್‌.ವೆಂಕಟೇಶ್‌, ಪ್ರಸ್ತುತ ಉತ್ತರ ಕರ್ನಾಟಕ ,ಉತ್ತರ ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಕೊಡಗು ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಮಳೆಗೆ ಸಾವಿರಾರು ಕುಟುಂಬಗಳು ಬೀದಿ ಬಂದಿವೆ. ಹತ್ತಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದಾರೆ. ಬಿಜೆಪಿ ಪಕ್ಷವು ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲು ಸಿದ್ಧವಾಗಿದ್ದು, ಅವರಿಗೆ ಪರಿಹಾರ ಒದಗಿಸಲು ಪಟ್ಟಣದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಮನೆ ಮನೆಗೆ ತೆರಳಿ ಪರಿಹಾರ ಸಂಗ್ರಹ:

ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ನೆರೆ ಸಂತ್ರಸ್ತರಿಗೆ ಸಹಕಾರ ನೀಡುವಂತೆ ಮನವೊಲಿಸುವ ಕೆಲಸ ಮಾಡಲಿದೆ ಎಂದ ಬಿ.ಆರ್‌.ವೆಂಕಟೇಶ್‌ ಅವರು ಆಸಕ್ತಿ ಉಳ್ಳವರು ಮೂರು ದಿನದೊಳಗೆ ಪಟ್ಟಣದ ಮಹಾರಾಜ ವೃತ್ತದಲ್ಲಿರುವ ಪರಿಹಾರ ಕೇಂದ್ರಕ್ಕೆ ಯಾವುದೇ ರೀತಿಯ (ಕೆಡದಿರುವ)ಆಹಾರ ಪದಾರ್ಥಗಳನ್ನು, ಹಾಲಿನ ಪೌಡರ್‌, ನೀರು,ನ್ಯಾಪ್‌ಕಿನ್‌ ಸೇರದಂತೆ ಹೊಸ ಬಟ್ಟೆಗಳನ್ನು ನೀಡಬಹುದಾಗಿದೆ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಪಾಧ್ಯಕ್ಷ ತಿಮ್ಮನಾಕನಹಳ್ಳಿ ನಾರಾಯಣಸ್ವಾಮಿ ,ಪುರಸಭೆ ಸದಸ್ಯ ಭಾನುತೇಜಾ ಮಾತನಾಡಿದರು.ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ನಾಗರಾಜ್‌ ,ಅಶ್ವಥ ನಾಯ್ದು,ರವಿ,ಸೂಸೈಟಿ ವೆಂಕಟೇಶ್‌ ಇದ್ದರು.

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌