ಬೆಂಗಳೂರು (ಏ.22):  ಕೋವಿಡ್‌ ಸೋಂಕಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್‌ ಚಿಕಿತ್ಸಾ ವೆಚ್ಚ ಮರುಪಾವತಿಗೆ ನಿರ್ಧರಿಸಿರುವ ಸರ್ಕಾರ, ಈ ಸಂಬಂಧ ಪ್ಯಾಕೇಜ್‌ ದರ ಪ್ರಕಟಿಸಿ ಆದೇಶ ಮಾಡಿದೆ.

 ಸಾಮಾನ್ಯ ವಾರ್ಡ್‌ಗೆ ದಿನಕ್ಕೆ 10 ಸಾವಿರ ರು., ಹೆಚ್ಚು ಅವಲಂಬಿತ ಘಟಕಕ್ಕೆ (ಹೈ ಡಿಪೆನ್ಡೆನ್ಸಿ ಯೂನಿಟ್‌) 12 ಸಾವಿರ ರು., ವೆಂಟಿಲೇಟರ್‌ ರಹಿತ ಐಸಿಯು ವಾರ್ಡ್‌ಗೆ 15 ಸಾವಿರ ರು., ವೆಂಟಿಲೇಟರ್‌ ಸಹಿತ ಐಸಿಯು ವಾರ್ಡ್‌ಗೆ 25 ಸಾವಿರ ರು. ನಿಗದಿ ಮಾಡಿದೆ.

3 ಲಕ್ಷ ಸಮೀಪಕ್ಕೆ ದೈನಂದಿನ ಸೋಂಕು, 2023 ಸಾವು! .

 ಈ ಪ್ಯಾಕೇಜ್‌ ದರದಲ್ಲಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ ಮರುಪಾವತಿಸಲು ಸೂಚಿಸಿದೆ. ಒಂದು ವೇಳೆ ಚಿಕಿತ್ಸಾ ದರವು ಸರ್ಕಾರ ನಿಗದಿಪಡಿಸಿರುವ ಪ್ಯಾಕೇಜ್‌ ದರಕ್ಕಿಂತ ಕಡಿಮೆ ಇದ್ದರೆ ಯಾವುದು ಕಡಿಮೆಯೋ ಅದರ ಆಧಾರದಲ್ಲಿ ಚಿಕಿತ್ಸಾ ವೆಚ್ಚ ಮರುಪಾವತಿಸಲು ಸೂಚಿಸಿದೆ.