ಪ್ರಾದೇಶಿಕ ಪಕ್ಷ ಪ್ರೈವೇಟ್ ಲಿಮಿಟೆಡ್ ಆಗಿದೆ: ದೇವೇಗೌಡರಿಗೆ ತಿರುಗೇಟು
ಪ್ರಾದೇಶಿಕ ಪಕ್ಷಗಳು ಈ ದೇಶಕ್ಕೆ ದೊಡ್ಡ ಶಾಪ. ಅವುಗಳು ಕುಟುಂಬದ ಪ್ರೈವೇಟ್ ಪ್ರಾಪರ್ಟಿಯಾಗಿದೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಮಾಜಿ ಪ್ರಧಾನಿ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ(ನ.30): ಪ್ರಾದೇಶಿಕ ಪಕ್ಷಗಳು ಈ ದೇಶಕ್ಕೆ ದೊಡ್ಡ ಶಾಪ. ಅವುಗಳು ಕುಟುಂಬದ ಪ್ರೈವೇಟ್ ಪ್ರಾಪರ್ಟಿಯಾಗಿದೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಮಾಜಿ ಪ್ರಧಾನಿ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೆ ತಿರುಗೇಟು ನೀಡಿದ್ದಾರೆ. ಈ ದೇಶಕ್ಕೆ ದೊಡ್ಡ ಶಾಪ ಪ್ರಾದೇಶಿಕ ಪಕ್ಷಗಳು. ಪ್ರಾದೇಶಿಕ ಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿವೆ ಎಂದಿದ್ದಾರೆ.
'ತಂದೆ ಮಗ ಸೋತು ಎಚ್‌ಡಿಕೆಗೆ ತಲೆ ಕೆಟ್ಟಿದೆ'..!
ರಾಜ್ಯದ ಹಿತಕ್ಕಲ್ಲ, ಕುಟುಂಬದ ಲಾಭಕ್ಕೆ ಸೀಮಿತವಾಗಿದೆ. ಎಲ್ಲಾ ರಾಜ್ಯಗಳಲ್ಲು ಕುಟುಂಬಗಳು ಪ್ರಾದೇಶಿಕ ಪಕ್ಷಗಳನ್ನು ಪ್ರೈವೇಟ್ ಲಿಮಿಟೆಡ್ ಎಂದು ಮಾಡಿಕೊಂಡಿವೆ. ಕರ್ನಾಟಕವು ಕೂಡ ಇದರಿಂದ ಹೊರತಾಗಿಲ್ಲ. ತಮಿಳುನಾಡು, ಆಂಧ್ರಪ್ರದೇಶವು ಹೊರತಾಗಿಲ್ಲ ಎಂದು ಹೇಳಿದ್ದಾರೆ.
BJP ನೋಟು, ಕಾಂಗ್ರೆಸ್‌ಗೆ ಓಟು: ಡಿಕೆಶಿ ಭರ್ಜರಿ ಪ್ರಚಾರ
ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಬಗ್ಗೆ ಅಪಾರ ಗೌರವವಿದೆ.. ಮಾಹಿತಿಯ ಕೊರತೆಯಿಂದ ದೇವೇಗೌಡರು ಮಾತನಾಡುತ್ತಿದ್ದಾರೆ.. ವಾಸ್ತವತೆಯನ್ನು ತಿಳಿದುಕೊಂಡು ಮಾತನಾಡಬೇಕು. ಮಾಜಿ ಪ್ರಧಾನಿಗಳಿಗೆ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದಾರೆ.
ಕಾಡಿಬೇಡಿ ಟಿಕೆಟ್ ಪಡೆದು ಗೆದ್ದು ಕೈಕೊಟ್ಟ ಅನರ್ಹ ಶಾಸಕ..!.
"