ಬಳ್ಳಾರಿಯಲ್ಲಿ ಮತ್ತೊಮ್ಮೆ ಜೋರಾದ ರೆಡ್ಡಿ ವರ್ಸಸ್ ರೆಡ್ಡಿ ಫೈಟ್: ಸ್ಥಳದಲ್ಲಿ ಬಿಗುವಿನ ವಾತಾವರಣ
ಎರಡು ಬಣಗಳ ಮಧ್ಯೆ ಒಂದಷ್ಟು ವಾಗ್ವಾದವಾಯ್ತು. ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರು ಯಾರ ಬಳಿ ವರ್ಕ್ ಆರ್ಡರ್ ಇದೆಯೋ ಅವರು ಕೆಲಸ ಮಾಡಿ ಎಂದು ಸೂಚನೆ ನೀಡಿದ ಬಳಿಕ ಒಂದಷ್ಟು ಪರಿಸ್ಥಿತಿ ತಿಳಿಯಾಯ್ತು.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಸೆ.21): ಬಳ್ಳಾರಿಯಲ್ಲಿ ಮತ್ತೊಮ್ಮೆ ರೆಡ್ಡಿ ವರ್ಸಸ್ ರೆಡ್ಡಿ ಫೈಟ್ ಜೋರಾಗಿದೆ. ಕಳೆದ ತಿಂಗಳು ಬಳ್ಳಾರಿ ಶಾಸಕ ಭರತ್ ರೆಡ್ಡಿ ಮತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪರಸ್ಪರ ನಿಂದಿಸಿಕೊಂಡಿದ್ದಾಯ್ತು. ನಂತರ ಅವರವರ ಬೆಂಬಲಿಗರು ಬೈದಾಡಿಕೊಂಡಿದ್ದಾಯ್ತು. ಇದೀಗ ಇಬ್ಬರು ಬೆಂಬಲಿತ ಗುತ್ತಿಗೆದಾರರ ಮಧ್ಯೆ ಪೈಟ್ ಜೋರಾಗಿದೆ. ಬಳ್ಳಾರಿಯಲ್ಲಿಗ ಆಂಧ್ರ ಶೈಲಿಯ ರಾಜಕೀಯಕ್ಕೆ ನಾಂದಿ ಹಾಡಲಾಗುತ್ತದೆ ಅನ್ನೋದಕ್ಕೆ ಈ ಲೇಔಟ್ ನಿರ್ಮಾಣ ಸ್ಥಳ ಸಾಕ್ಷಿಯಾಗಿದೆ. ಅಷ್ಟಕ್ಕೂ ಗುತ್ತಿಗೆದಾರರ ಮಧ್ಯೆ ಇರೋ ಮುಸುಕಿನ ಗುದ್ದಾಟವಾದ್ರೂ ಏನು..? ಇದಕ್ಕೆ ಈ ಇಬ್ಬರು ರೆಡ್ಡಿಗಳು ಯಾಕೆ ಕಾರಣ ಅಂತೀರಾ ಹಾಗಂದ್ರೇ ಈ ಸ್ಟೋರಿ ನೋಡಿ..
ಕಾಮಗಾರಿ ನಡೆಯುತ್ತಿರೋ ಸ್ಥಳದಲ್ಲಿ ಎರಡು ಬಣಗಳ ವಾಗ್ವಾದ
ಸರ್ಕಾರಿ ಸ್ಥಳವನ್ನು ಡೆವಲಪ್ಮೆಂಟ್ ಮಾಡಲು ಗುತ್ತಿಗೆದಾರನೊಬ್ಬನಿಗೆ ಕೆಲಸ ನೀಡಲಾಯ್ತು. ಆದ್ರೇ, ಇದೀಗ ಸರ್ಕಾರ ಬದಲಾಗಿದೆಯೆಂದು ಬೇರೊಬ್ಬರಿಗೆ ಗುತ್ತಿಗೆ ನೀಡಲಾಗಿದೆಯಂತೆ,.. ಬಿಜೆಪಿ ಸರ್ಕಾರ ಇದ್ಧಾಗ ಒಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಮಾಡಲಾಗಿದೆಯಂತೆ.. ಮೂಲ ಗುತ್ತಿಗೆದಾರರನ ದ್ವಂದ್ವ ನಿಲುವು ಸ್ಥಳದಲ್ಲಿ ಬಿಗುವಿನ ವಾತವರಣ ಸೃಷ್ಟಿ..
ಇಂಗ್ಲಿಷ್ ಬೋಧಕರ ಕೊರತೆ ಹಳ್ಳಿಮಕ್ಕಳ ಭವಿಷ್ಯಕ್ಕೆ ಪೆಟ್ಟು..!
ಹೌದು, ಬಳ್ಳಾರಿ ಹೊರವಲಯದಲ್ಲಿರೋ 104 ಎಕರೆ ಸ್ಥಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲೇಔಟ್ ನಿರ್ಮಾಣ ಮಾಡಲು ಬೆಂಗಳೂರು ಮೂಲದ ಬಾಲಾಜಿ ಇನ್ಫ್ರಾಸ್ಟಕ್ಟರ್ ಎನ್ನುವ ಕಂಪನಿ ಮಾಲೀಕ ಶೇಖರ ಅವರಿಗೆ (44 ಕೋಟಿ ಮೊತ್ತಕ್ಕೆ ) ಗುತ್ತಿಗೆ ಕೆಲಸ ನೀಡಲಾಗಿತ್ತು. ಗುತ್ತಿಗೆ ಪಡೆದ ಶೇಖರ್ ಬಳ್ಳಾರಿಯ ಜನಾರ್ದನ ರೆಡ್ಡಿ ಬೆಂಬಲಿಗ ಸುಬ್ಬರೆಡ್ಡಿಗೆ ಉಪಗುತ್ತಿಗೆ ನೀಡಿದ್ರು. ಒಂದಷ್ಟು ಕೆಲಸ ಮಾಡೋದ್ರೊಳಗೆ ಸರ್ಕಾರ ಬದಲಾಗಿದೆ. ಹೀಗಾಗಿ ಇದೀಗ ಶಾಸಕ ಭರತ್ ರೆಡ್ಡಿ ಮೂಲ ಗುತ್ತಿಗೆದಾರನ ಮೇಲೆ ಒತ್ತಡ ತಂದು ಸುಬ್ಬಾರೆಡ್ಡಿ ಅವರಿಂದ ಕೆಲಸ ವಾಪಸ್ ಪಡೆದು ಬೇರೊಬ್ಬರಿಗೆ ನೀಡಿದ್ಧಾರೆಂದು ಆರೋಪಸಿದ್ದಾರೆ. ಕೇವಲ ಲೇಔಟ್ ನಿರ್ಮಾಣ ಮಾಡದಷ್ಟೇ ಅಲ್ಲದೇ ಡ್ರೈನೇಜ್ ಮತ್ತು ಕುಡಿಯುವ ನೀರಿನ ಅಭಿವೃದ್ದಿಗೆಂದು ನೀಡಿದ ಗುತ್ತಿಗೆ ಯನ್ನು ವಾಪಸ್ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಬಳ್ಳಾರಿ: ಗಂಟಲಲ್ಲಿ ಸಿಲುಕಿದ ವಿಸಿಲ್ ತೆಗೆಯದೆ ಹಾಗೆ ಬಿಟ್ಟ ವಿಮ್ಸ್ ವೈದ್ಯರು, ಸಾವಿನ ಕದ ತಟ್ಟಿ ಬದುಕುಳಿದ ಬಾಲಕ..!
ಮೂಲ ಗುತ್ತಿಗೆದಾರನ ದ್ವಂದ್ವ ನಿಲುವು ಸ್ಥಳದಲ್ಲಿ ಬಿಗುವಿನ ವಾತಾವರಣ
ಮತ್ತೊಬ್ಬರಿಗೆ ಕೆಲಸ ನೀಡಿದ ಹಿನ್ನೆಲೆಯಲ್ಲಿ ಸುಬ್ಬರೆಡ್ಡಿ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದು ತಮಗೆ ಅನ್ಯಾವಾಗಿದೆ ಎಂದು ವಾದ ಮಾಡಿದ್ದಾರೆ. ಎರಡು ಬಣಗಳ ಮಧ್ಯೆ ವಾಗ್ವಾದ ವಿಕೋಪಕ್ಕೆ ಹೋಗುತ್ತಿದ್ದಂತೆ ಮೂಲ ಗುತ್ತಿಗೆದಾರ ಶೇಖರ ಪೋನ್ ಮೂಲಕ ಮಾತನಾಡಿ ಯಾರಿಗೂ (ಸುಬ್ಬಾರೆಡ್ಡಿ) ಉಪ ಗುತ್ತಿಗೆ ನೀಡಿಲ್ಲ ನಾವೇ ಕೆಲಸ ಮಾಡಿಸುತ್ತಿದ್ದೇವೆ ಎಂದು ಹೇಳಿದರು. ಈ ವೇಳೆ ಎರಡು ಬಣಗಳ ಮಧ್ಯೆ ಒಂದಷ್ಟು ವಾಗ್ವಾದವಾಯ್ತು. ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರು ಯಾರ ಬಳಿ ವರ್ಕ್ ಆರ್ಡರ್ ಇದೆಯೋ ಅವರು ಕೆಲಸ ಮಾಡಿ ಎಂದು ಸೂಚನೆ ನೀಡಿದ ಬಳಿಕ ಒಂದಷ್ಟು ಪರಿಸ್ಥಿತಿ ತಿಳಿಯಾಯ್ತು.
ಸರ್ಕಾರ ಬದಲಾದ್ರೇ ವರ್ಕ್ ಮಾಡೋರು ಬದಲಾಗ್ತಾರಾ..?
ಮೇಲ್ನೋಟಕ್ಕೆ ಇಬ್ಬರು ಗುತ್ತಿಗೆದಾರರ ಮಧ್ಯೆ ಗುದ್ದಾಟವೆಂದ್ರು ಇಲ್ಲಿ ನೇರವಾಗಿ ಫೈಟ್ ಮಾಡ್ತಿರೋದು ಮಾತ್ರ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೇ ಈ ಇಬ್ಬರ ಗುದ್ದಾಟದ ಮಧ್ಯೆ ಈಗಾಗಲೇ ಎರಡು ವರ್ಷ ವಿಳಂಬವಾಗಿರೋ ಲೇಔಟ್ ಡೆವಲಪ್ಮಂಟ್ ವರ್ಕ್ ಮತ್ತಷ್ಟು ವಿಳಂಬವಾಗೋದ್ರಲ್ಲಿ ಎರಡು ಮಾತಿಲ್ಲ ಎನ್ನಲಾಗುತ್ತಿದೆ.