ಸತತ 10ನೇ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧೆಗಿಳಿದ ಶ್ರೀರಾಮನಗರದ ರೆಡ್ಡಿ ವೀರರಾಜು| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಗ್ರಾಮ ಪಂಚಾಯಿತಿ| ಆಂಧ್ರ ಮೂಲದವರಾಗಿದ್ದರೂ ಕನ್ನಡವನ್ನು ಅಪ್ಪಿಕೊಂಡ ರೆಡ್ಡಿ ವೀರರಾಜು|
ರಾಮಮೂರ್ತಿ ನವಲಿ
ಗಂಗಾವತಿ(ಡಿ.18): ವಿಧಾನಸಭಾ ಚುನಾವಣೆಯಲ್ಲಿ ಐದಾರು ಬಾರಿ ಗೆದ್ದವರನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬರು ಗ್ರಾಪಂ ಚುನಾವಣೆಗೆ 9 ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅಲ್ಲದೇ ಈ ಬಾರಿ 10ನೇ ಸಲ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಗಂಗಾವತಿ ತಾಲೂಕಿನ ಶ್ರೀರಾಮನಗರದ ರೆಡ್ಡಿ ವೀರರಾಜು ಎಂಬವರೇ ಸತತ 10ನೇ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧೆಗಿಳಿದಿದ್ದಾರೆ. ರೆಡ್ಡಿ ವೀರರಾಜು ತಮ್ಮ 78ನೇ ಇಳಿ ವಯಸ್ಸಿನಲ್ಲಿ ಉತ್ಸಾಹದಿಂದ ಕಣಕ್ಕೆ ಇಳಿದಿದ್ದಾರೆ. ಯುವಕರು ಹುಬ್ಬೇರಿಸುವಂತೆ ಮಾಡಿದೆ.
ಗಂಗಾವತಿ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
1975- 76ರಲ್ಲಿ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ಇದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ರೆಡ್ಡಿ ವೀರರಾಜು ಅವರು ಸದಸ್ಯರಾಗಿದ್ದರು. ನಂತರ 1985ರಲ್ಲಿ ಶ್ರೀರಾಮನಗರವನ್ನು ಮಂಡಲ ಪಂಚಾಯಿತಿಯಾಗಿ ಪರಿವರ್ತನೆಯಾಗಿದ್ದ ಸಂದರ್ಭದಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ.
ಶ್ರೀರಾಮನಗರದ ಗ್ರಾಮ ಪಂಚಾಯಿತಿಗೆ 7ನೇ ವಾರ್ಡ್‌ನಿಂದ ರೆಡ್ಡಿ ವೀರರಾಜು ಈ ಬಾರಿ ಸ್ಪರ್ಧೆಗಿಳಿದಿದ್ದಾರೆ. ಆಂಧ್ರ ಮೂಲದವರಾಗಿದ್ದರೂ ಕನ್ನಡವನ್ನು ಅಪ್ಪಿಕೊಂಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ನಿರ್ಗತಿಕರಿಗೆ ನಿವೇಶನ, ಮನೆ, ಭೂಮಿ, ವಿದ್ಯುತ್ ಸಂಪರ್ಕ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ ಹೆಗ್ಗಳಿಕೆ ಇವರದ್ದು. ಈ ಹಿಂದೆ ಒಂದು ಬಾರಿ ಹಂಗಾಮಿ ಅಧ್ಯಕ್ಷರಾಗಿರುವ ರೆಡ್ಡಿ ವೀರರಾಜು ಎರಡು ಬಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನಸಂಖ್ಯೆ ಒಟ್ಟು 12000 ಇದ್ದು, 24 ಸದಸ್ಯರು ಇದ್ದಾರೆ. 7600 ಮತದಾರರು ಮತದಾರರಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 18, 2020, 2:46 PM IST