ಮಳೆ ಕಡಿಮೆಯಾದರೂ ನಿಲ್ಲದ ನೆರೆಹಾವಳಿ: ಉಡುಪಿಯಲ್ಲಿ ರೆಡ್ ಅಲರ್ಟ್

*  ಮಳೆ ಇಳಿಮುಖವಾದರೂ ನೆರೆ ಮಾತ್ರ ನಿಂತಿಲ್ಲ 
*  ನಿರಂತರ ಮಳೆಯಿಂದ 11 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ
*  ಕಡಲ ತೀರದಲ್ಲಿ ಬಂದು ಬಿದ್ದಿದೆ ಕಸದ ರಾಶಿ
 

Red Alert in Udupi District Due to Heavy Rain grg

ಉಡುಪಿ(ಜು.06): ಉಡುಪಿಯಲ್ಲಿ ಬುಧವಾರ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದ್ದರೂ ನೆರೆಯ ಹಾನಿ ಮಾತ್ರ ಅಪಾರವಾಗಿತ್ತು. ಜಿಲ್ಲೆಯ ಕೋಟ ಪ್ರದೇಶದಲ್ಲಿ ನಲವತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಹಲವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದೆ.

ಮಳೆಗಾಲ ಬರುತ್ತಿದ್ದಂತೆ ಹಳ್ಳ ತೋಡುಗಳ ಹೋಳೆತ್ತ ಬೇಕಿರುವುದು  ಸ್ಥಳೀಯ ಆಡಳಿತಗಳ ಜವಾಬ್ದಾರಿ.  ನದಿ ಪಾತ್ರದ ಹೂಳು ಎತ್ತದ ಪರಿಣಾಮ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಸ್ಥಳೀಯ ಜನರು ಪ್ರತಿಭಟನೆ ನಡೆಸಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆ: ರಜೆ ಗೊಂದಲದಿಂದ ಪೋಷಕರಿಗೆ ಸಂಕಷ್ಟ

ಕರಾವಳಿ ಭಾಗದಲ್ಲಿ ಈಗ ಕೃಷಿ ಮಾಡುವವರ ಸಂಖ್ಯೆಯೇ ವಿರಳ ಯಾರಾದರೂ ಹುಮ್ಮಸ್ಸಿನಿಂದ ಮಾಡಲು ಮುಂದಾದರೆ ಅವರಿಗೆ ನೂರಾರು ಸಮಸ್ಯೆಗಳು. ಇದೀಗ ಕುಂದಾಪುರ ತಾಲೂಕಿನ ಗಿಳಿಯಾರು,  ಮಣೂರು, ಚಿತ್ರಪಾಡಿ, ಬೇಲೂರು ಮತ್ತು ಬನ್ನಾಡಿ ಭಾಗದ ಕೃಷಿಕರು ಕಂಗಾಲಾಗಿದ್ದಾರೆ . ಮಳೆಗಾಲದಲ್ಲಿ ಗದ್ದೆಯಲ್ಲಿ ಇರಬೇಕಾದ ಈ ಕೃಷಿಕರು ಈಗ ರಸ್ತೆಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಮಳೆಗಾಲಕ್ಕೆ ಪೂರ್ವ ಭಾವಿಯಾಗಿ ನದಿ ತೋಡು ಚರಂಡಿಗಳ ಹೂಳು ಎತ್ತದ ಪರಿಣಾಮ ಈ ಭಾಗದಲ್ಲಿ ಕೃತಕ ನೆರೆ ಉಂಟಾಗಿ  ನೂರಾರು ಎಕರೆ ಭತ್ತದ  ಕೃಷಿ ನೀರು ಪಾಲಾಗಿದೆ.

ನಾಟಿ ಮಾಡಲಾದ ಗದ್ದೆಯಲ್ಲಿ ಹೂಳು ತುಂಬಿದೆ. ಇದಲ್ಲದೆ ಅಂತರಗಂಗೆ ಎಂಬ  ಕಳೆ ಗಿಡ ಊರಿಡಿ ಹಬ್ಬಿದ್ದು  ಗದ್ದೆಗಳಲ್ಲಿರುವ  ಭತ್ತದ ಕೃಷಿಯನ್ನು ಅಪೋಷಣ ಪಡೆದಿದೆ. ಪ್ರತಿ ವರ್ಷ ಈ ಸಮಸ್ಯೆ  ಎದುರಾಗುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಕೃಷಿಕರು ಪ್ರತಿಭಟನೆಗಿಳಿದಿದ್ದಾರೆ. ಕೂಡಲೇ  ಹೂಳೆತ್ತುವ ಕಾಮಗಾರಿ ಆರಂಭವಾಗದಿದ್ದರೆ 13ನೇ ತಾರೀಕಿಗೆ ಹೆದ್ದಾರಿ ತಡೆದು ಪ್ರತಿಪಡಿಸುವ ಎಚ್ಚರಿಕೆ ನೀಡಿದ್ದಾರೆ.
ಕೋಟ ಸಮೀಪದ ಉಪ್ಲಾಡಿ, ಬನ್ನಾಡಿ,ಬೆಟ್ಲಕ್ಕಿ ಮೊದಲಾದ ಪರಿಸರದ ಮೂವತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕೃತಕ ನೆರೆಯಿಂದಾಗಿ ಇಲ್ಲಿನ ಜನರು ದಿಗ್ಬಂದನಕ್ಕೆ ಒಳಗಾಗಿದ್ದರು. ಇಲ್ಲಿನ ಎರಡು ಕುಟುಂಬದ 15 ಜನರನ್ನು ದೋಣಿಯ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.  ಓರ್ವ ಹಿರಿಯ ನಾಗರಿಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೆಗಲ ಮೇಲೆ ಹೊತ್ತು ತಂದು ರಕ್ಷಣೆ ಮಾಡಿದರು. 

ಉಡುಪಿ: ಬಣ್ಣದ ಬಲೆಗಳೇ ಮೀನುಗಾರರಿಗೆ ಮಳೆಗಾಲದ ಬದುಕು..!

ನೆರೆಯಿಂದಾಗಿ ರಾತ್ರಿಯಿಡಿ ಪರಿಸರದ ಜನರು ಆತಂಕದಲ್ಲೇ ಬದುಕುವಂತಾಯಿತು.  ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಕುಂದಾಪುರ ಎಸಿ ರಾಜು ಅವರು ಆಗಮಿಸಿ ಅಹವಾಲು ಸ್ವೀಕರಿಸಿದ್ದಾರೆ.

ಮಳೆಯ ಅಬ್ಬರಕ್ಕೆ ಕಡಲು ಪ್ರಕ್ಶುಬ್ತಗೊಂಡಿದ್ದು ಕಾಪು ಮೂಳೂರು, ಮರವಂತೆ ಕೋಡಿ ಮೊದಲಾದ ಕಡೆ ಕಡಲ ಕೊರೆತ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇಂದು ಇಡೀ ದಿನ ಮೋಡ ಮೋಸುಕಿದ ವಾತಾವರಣವಿದ್ದು ರಾತ್ರಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನದಿಂದ  ನಾಳೆ ಮುಂಜಾನೆಯವರಿಗೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 28 ಮನೆಗಳಿಗೆ ಹಾನಿ ಸಂಭವಿಸಿದ್ದು ಅಂದಾಜು 11 ಲಕ್ಷ ರೂಪಾಯಿ ನಷ್ಟ ವಾಗಿದೆ. ಹೆಬ್ರಿ ಪರಿಸರದಲ್ಲಿ ಭತ್ತದ ಕೃಷಿಗೆ ಅಪಾರ ಹಾನಿಯಾಗಿದೆ.
 

Latest Videos
Follow Us:
Download App:
  • android
  • ios