Asianet Suvarna News Asianet Suvarna News

ಬೆಂಗಳೂರಲ್ಲಿ ಬೆಚ್ಚಿ ಬೀಳಿಸಿದ ಕೊರೋನಾ : ದಾಖಲೆಯ ಸಾವು

ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಕೊರೋನಾ ಸಾವಿನ ಪ್ರಕರಣಗಳು ವರದಿಯಾಗಿದೆ. ಇದರಿಂದ ಇನ್ನಷ್ಟು ಆತಂಕ ಭುಗಿಲೆದ್ದಿದೆ. 

Record number Of Covid Death in Bengaluru snr
Author
Bengaluru, First Published Apr 20, 2021, 7:15 AM IST

ಬೆಂಗಳೂರು (ಏ.20):  ನಗರದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಜೋರಾಗಿದ್ದು, ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕ ಇಮ್ಮಡಿಗೊಳಿಸಿದೆ. 

ಸೋಮವಾರ ಒಂದೇ ದಿನ ಸಾರ್ವಕಾಲಿಕ ದಾಖಲೆಯ 97 ಸೋಂಕಿತರ ಸಾವಿನ ಪ್ರಕರಣ ವರದಿಯಾಗಿವೆ. ಜೊತೆಗೆ ಹೊಸದಾಗಿ 9618 ಪ್ರಕರಣ ದಾಖಲಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ.

ಕೊರೋನಾ ಮೊದಲ ಅಲೆಯಲ್ಲಿ ದಿನವೊಂದರ ಅತಿಹೆಚ್ಚು ಸೋಂಕಿತರ ಸಾವಿನ ಸಂಖ್ಯೆ ಸೆ.29ರಂದು 67 ವರದಿಯಾಗಿತ್ತು. ಇದಾದ ಬಳಿಕ ಅತಿಹೆಚ್ಚಿನ ಸಾವು ಪ್ರಕರಣ ಸೋಮವಾರ ವರದಿಯಾಗಿವೆ. ಇದರೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 5,220ಕ್ಕೆ ಏರಿಕೆಯಾಗಿದೆ.

ಸೋಮವಾರ ಪತ್ತೆಯಾದ 9,618 ಹೊಸ ಪ್ರಕರಣಗಳು ಸೇರಿದಂತೆ ಈವರೆಗೆ ನಗರದಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 5,56,253ಕ್ಕೆ ಏರಿಕೆಯಾಗಿದೆ. ಸೋಮವಾರ 4,240 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 4,47,854ಕ್ಕೆ ಏರಿಕೆಯಾಗಿದೆ. ಪ್ರಸ್ತುತ ನಗರದಲ್ಲಿ 1.03,178 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 166 ಮಂದಿ ಸೋಂಕಿತರಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್ ಇಲ್ಲ; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ಸರ್ಕಾರ!

ವಾರದಲ್ಲಿ 365 ಮಂದಿ ಬಲಿ :  ನಗರದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಇದರೊಂದಿಗೆ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಏಳು ದಿನಗಳಲ್ಲಿ ಬರೋಬ್ಬರಿ 365 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಏ.13ರಂದು 55, ಏ.14ಕ್ಕೆ 23, ಏ.15ಕ್ಕೆ30, ಏ.16ಕ್ಕೆ 57, ಏ.17ಕ್ಕೆ43, ಏ.18ಕ್ಕೆ 60 ಹಾಗೂ ಏ.19ಕ್ಕೆ 97 ಮಂದಿ ಬಲಿಯಾಗಿದ್ದಾರೆ. ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಸೋಂಕಿತರ ಸಾವಿನ ಸಂಖ್ಯೆ ಮತ್ತಷ್ಟುಹೆಚ್ಚಳವಾಗುವ ಸಾಧ್ಯತೆಯಿದೆ.

7 ದಿನದಲ್ಲಿ 67884 ಮಂದಿಗೆ ಸೋಂಕು :  ಇನ್ನು ನಗರದಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ದಿಢೀರ್‌ ಹೆಚ್ಚಳವಾಗಿದೆ. ಕಳೆದ ಏಳು ದಿನಗಳಲ್ಲಿ 67,884 ಹೊಸ ಪ್ರಕರಣ ವರದಿಯಾಗಿವೆ. ಏ.13ರಂದು 5,500, ಏ.14ಕ್ಕೆ 8,155, ಏ.15ಕ್ಕೆ 10,497, ಏ.16ಕ್ಕೆ 9,917, ಏ.17ಕ್ಕೆ 11,404, ಏ.18ಕ್ಕೆ 12,793 ಹಾಗೂ ಏ.19ರಂದು 9,618 ಹೊಸ ಪ್ರಕರಣ ಪತ್ತೆಯಾಗಿವೆ.

Follow Us:
Download App:
  • android
  • ios