Asianet Suvarna News Asianet Suvarna News

ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

*   ಪೆರಿಪೆರಲ್‌ ರಸ್ತೆ ಆಗುತ್ತದೆ ಎಂದು ಸಾಕಷ್ಟುಬಂಡವಾಳ ಹೂಡಿಕೆ
*   ರಸ್ತೆ ಶುರುವಾಗದ ಹಿನ್ನಲೆ ಪಾರ್ಕ್ ನಿರ್ಮಾಣಕ್ಕೆ ಒತ್ತಡ: ಆರೋಪ
*   ಕಾಡು ಬೆಳೆಸುವುದು ಅಸಾಧ್ಯ
 

Real Estate lobby for Convert Jarkabandi Reserve Forest into Garden in Bengaluru grg
Author
Bengaluru, First Published Oct 18, 2021, 8:08 AM IST

ಬೆಂಗಳೂರು(ಅ.18): ನಗರದ ಜಾರಕ ಬಂಡೆ(ಜೆ.ಬಿ.ಕಾವಲ್‌) ಅರಣ್ಯಪ್ರದೇಶದ ಹೊರ ಭಾಗದಲ್ಲಿ ರಿಯಲ್‌ ಎಸ್ಟೇಟ್‌(Real Estate) ಸಂಸ್ಥೆಗಳು ಬಂಡವಾಳ ಹೂಡಿದ್ದು ತಮ್ಮ ಆದಾಯ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ(Government) ಮೇಲೆ ಒತ್ತಡ ತಂದು ಮೀಸಲು ಅರಣ್ಯವನ್ನು ಉದ್ಯಾನವನ್ನಾಗಿ(Garden) ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಬೆಂಗಳೂರು(Bengaluru) ಪೆರಿಪೆರಲ್‌ ವರ್ತುಲ ರಸ್ತೆ ಜೆ.ಬಿ.ಕಾವಲ್‌ನ ಹೊರ ಭಾಗದಲ್ಲಿ ಹಾದು ಹೋಗಲಿದೆ ಎಂಬುದಾಗಿ ಬಿಡಿಎ(BDA) ಬಿಡುಗಡೆ ಮಾಡಿದ್ದ ನಕ್ಷೆಯಲ್ಲಿ ತಿಳಿಸಲಾಗಿತ್ತು. ಇದಾದ ಬಳಿಕ ಸದರಿ ಅರಣ್ಯ ಪ್ರದೇಶದ ಸುತ್ತಮುತ್ತ ರಿಯಲ್‌ ಎಸ್ಟೇಟ್‌ ಉದ್ದಿಮೆಗಳು ಕೋಟ್ಯಂತರ ರು. ಬಂಡವಾಳ(Invest) ಹೂಡಿಕೆ ಮಾಡಿದ್ದಾರೆ. ಆದರೆ, ಉದ್ದೇಶಿತ ಪೆರಿಪೆರಲ್‌ ವರ್ತುಲ ರಸ್ತೆಯ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಬಂಡವಾಳ ಹೂಡಿರುವ ಬಿಲ್ಡರ್‌ಗಳು(Builders) ತಮ್ಮ ಆದಾಯ ಹೆಚ್ಚಳ ಮಾಡಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಿ, ಜೆ.ಬಿ.ಕಾವಲ್‌ ಸುತ್ತಮುತ್ತಲ ಭಾಗಗಳ ಅಭಿವೃದ್ಧಿ ಪಡಿಸುವಂತೆ ಪಟ್ಟು ಹಿಡಿಯುತ್ತಿದ್ದಾರೆ. ಹೀಗಾಗಿ ಅರಣ್ಯ(Forest) ಪ್ರದೇಶದಲ್ಲಿ ಸಾರ್ವಜನಿಕರ ಬಳಕೆಗೆ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿದೆ ಎಂದು ಜಾಲಹಳ್ಳಿ ಮತ್ತು ಯಲಹಂಕದ ಸುತ್ತಮುತ್ತಲಿನ ಜನ ದೂರಿದ್ದಾರೆ.

ಉದ್ಯಾನದ ಬಳಿಕ ಬಡಾವಣೆ:

ಜೆ.ಬಿ.ಕಾವಲ್‌ ಮೀಸಲು ಅರಣ್ಯಪ್ರದೇಶದಲ್ಲಿ(Jarkabandi Reserve Forest) ಅನೇಕ ಜಾತಿಯ ಕೀಟಗಳು, ಹಾವು, ಮೊಲ ಮತ್ತು ಅಳಿಲುಗಳು ಸೇರಿದಂತೆ ಸಣ್ಣ ಪ್ರಮಾಣದ ಹಲವು ಜಾತಿಯ ಜೀವ ವೈವಿದ್ಯತೆ ಅಡಗಿದೆ. ಇವುಗಳು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುತ್ತಿವೆ. ಅಲ್ಲದೆ, ನರಿಗಳು, ನವಿಲುಗಳು, ಕಾಡು ಹಂದಿಗಳು, ಪ್ಯಾಂಗೋಲಿನ್‌ ಮತ್ತು ಜಿಂಕೆಗಳು ಕಾಣಿಸಿಕೊಳ್ಳುತ್ತವೆ. ಈ ಕಾಡಿನಲ್ಲಿ ಮಾನವ ಪ್ರವೇಶಕ್ಕೆ ಅವಕಾಶ ನೀಡಿದಲ್ಲಿ ಈ ಪ್ರಾಣಿಸಂಕುಲಕ್ಕೆ(Animals) ತೀವ್ರ ತೊಂದರೆಯಾಗಲಿದ್ದು, ಮತ್ತೊಂದು ಕಾಡು ಹುಡುಕಿಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಬೆಂಗಳೂರು: ಜಾರಕ ಬಂಡೆ ಮೇಲೆ ಗುತ್ತಿಗೆದಾರರ ಕಣ್ಣು..!

ಇಂತಹ ಕಾಡಿನಲ್ಲಿ ಉದ್ಯಾನ ನಿರ್ಮಾಣವಾದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಲಭ್ಯವಾಗಲಿದೆ. ಜೊತೆಗೆ, ಕಚೇರಿಗಳ ನಿರ್ಮಾಣವಾಗಬೇಕಾಗುತ್ತದೆ. ಉದ್ಯಾನದ ಸುತ್ತಲು ಬಡಾವಣೆಗಳು ತಲೆ ಎತ್ತಲಿವೆ. ಇದರಿಂದ ಸಣ್ಣ ಜೀವಿಗಳ ಮತ್ತೊಂದು ಕಾಡು ಹುಡುಕಲಾಗದೆ ಸಂತತಿ ನಾಶವಾಗುವುದಕ್ಕೆ ಕಾರಣವಾಗಲಿದೆ ಎಂದು ನಗರ ಯೋಜನಾ ತಜ್ಞರಾದ ಶ್ರೀರಾಮ ಶ್ರೀವಾಸ್ತವ್‌ ಅಭಿಪ್ರಾಯಪಡುತ್ತಾರೆ.

ಕಾಡು ಬೆಳೆಸುವುದು ಅಸಾಧ್ಯ:

ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದ ನೂರಾರು ಎಕರೆ ಅರಣ್ಯ ಭೂಮಿಯನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಪರ್ಯಾಯವಾಗಿ ಮತ್ತೆ ಅರಣ್ಯ ಬೆಳೆಸಲು ಸರ್ಕಾರ ಮುಂದಾಗಿಲ್ಲ. ಈಗಾಗಲೇ ನಗರದಲ್ಲಿ ಹಸಿರು ಹೊದಿಕೆ ಪ್ರಮಾಣ ಕಡಿಮೆಯಾಗಿದೆ. ಇದೀಗ ಮತ್ತೆ ಜೆ.ಬಿ.ಕಾವಲ್‌ನ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ಯೋಜನೆಯನ್ನು ರೂಪಿಸಲಾಗುತ್ತಿದೆ. ಇದೇ ರೀತಿ ಅರಣ್ಯ ನಾಶ ಪಡಿಸುತ್ತಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಅರಣ್ಯ ಬೆಳೆಸಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಉದ್ಯಾನ ನಿರ್ಮಾಣಕ್ಕೆ ಅವಕಾಶ ನೀಡಿದಲ್ಲಿ ಅದಕ್ಕೆ ಸಂಬಂಧಿಸಿದ ಕಚೇರಿಗಳು ಬರಲಿವೆ. ಉದ್ಯಾನದ ಪಕ್ಕದಲ್ಲಿಯೇ ಬಡಾವಣೆಗಳು ನಿರ್ಮಾಣವಾಗಲಿದ್ದು, ಅರಣ್ಯದಲ್ಲಿದ್ದ ಜೀವ ಸಂಕುಲದ ಸಂತಿ ನಾಶಕ್ಕೆ ನಾಂದಿ ಹಾಡಿದಂತಾಗಲಿದೆ ಎಂದು ನಗರ ಯೋಜನಾ ತಜ್ಞರು ಮತ್ತು ಪರಿಸರವಾದಿ ಶ್ರೀರಾಮ್‌ ಶ್ರೀವಾಸ್ತವ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios