Asianet Suvarna News Asianet Suvarna News

ಸರ್ಕಾರ ಉಳಿಸೋಕೆ ಸಚಿವ ಸ್ಥಾನ ತ್ಯಾಗಕ್ಕೆ ಮುಂದಾದ್ರಾ ಮಾಧುಸ್ವಾಮಿ..?

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದ್ದು, ಅನರ್ಹರು ಸಚಿವ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರೆ, ಸಚಿವರು ಎಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುತ್ತೇವೋ ಎಂಬ ಭಯದಲ್ಲಿದ್ದಾರೆ. ಈ ನಡುವೆ ಸಚಿವ ಮಾಧುಸ್ವಾಮಿ ಅವರು ಸರ್ಕಾರ ಉಳಿಸೋಕೆ ಸಚಿವ ಸ್ಥಾನ ಬಿಡೋಕೆ ಸಿದ್ಧ ಎಂದು ಹೇಳಿದ್ದಾರೆ.

Ready to leave minister post says jc madhu swamy in tumakur
Author
Bangalore, First Published Jan 26, 2020, 1:35 PM IST
  • Facebook
  • Twitter
  • Whatsapp

ತುಮಕೂರು(ಜ.26): ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದ್ದು, ಅನರ್ಹರು ಸಚಿವ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರೆ, ಸಚಿವರು ಎಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುತ್ತೇವೋ ಎಂಬ ಭಯದಲ್ಲಿದ್ದಾರೆ. ಈ ನಡುವೆ ಸಚಿವ ಮಾಧುಸ್ವಾಮಿ ಅವರು ಸರ್ಕಾರ ಉಳಿಸೋಕೆ ಸಚಿವ ಸ್ಥಾನ ಬಿಡೋಕೆ ಸಿದ್ಧ ಎಂದು ಹೇಳಿದ್ದಾರೆ.

"

ಸರ್ಕಾರ ಉಳಿಸೋದಕ್ಕೆ ಸಚಿವ ಸ್ಥಾನ ತ್ಯಾಗಕ್ಕೆ ಮುಂದಾಗಿದ್ದಾರಾ ಮಾಧುಸ್ವಾಮಿ ಹೀಗೊಂದು ಪ್ರಶ್ನೆ ಮೂಡುವಂತಹ ಹೇಳಿಕೆ ಕೊಟ್ಟಿದ್ದಾರೆ ಸಚಿವ ಮಾಧುಸ್ವಾಮಿ. ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೇಳಿದ್ರೆ ಖುಷಿಯಿಂದ ಬಿಡಲು ಸಿದ್ಧ. ಪಕ್ಷಕ್ಕೆ ಒಳ್ಳೆಯದಾಗುತ್ತೆ ಅಂದ್ರೆ ಶಾಸಕ ಸ್ಥಾನವನ್ನೂ ಕೂಡ ಬಿಡಲು ಸಿದ್ಧ ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನದಂದೇ ಅಂಬೇಡ್ಕರ್‌ಗೆ ಕಿಡಿಗೇಡಿಗಳಿಂದ ಅವಮಾನ

ನಮಗೆ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆಯಿದೆ. ಬಹಳ ಸಂತೋಷದಿಂದ ಸಚಿವ ಸ್ಥಾನ ಬಿಟ್ಟುಕೊಡ್ತಿನಿ ಎಂದು ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ‌ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

Follow Us:
Download App:
  • android
  • ios