Asianet Suvarna News Asianet Suvarna News

ಗಣರಾಜ್ಯೋತ್ಸವ ದಿನದಂದೇ ಅಂಬೇಡ್ಕರ್‌ಗೆ ಕಿಡಿಗೇಡಿಗಳಿಂದ ಅವಮಾನ

ಗಣರಾಜ್ಯೋತ್ಸವ ದಿನದಂದೇ ಬಿ.ಆರ್‌. ಅಂಬೇಡ್ಕರ್‌ಗೆ ಕಿಡಿಗೇಡಿಗಳಿಂದ ಅವಮಾನ| ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಿತ್ತಲಶಿರೂರು ಗ್ರಾಮದಲ್ಲಿ ನಡೆದ ಘಟನೆ| ಅಂಬೇಡ್ಕರ್‌ ನಾಮಫಲಕಕ್ಕೆ ಸಗಣಿ‌ ಎರಚಿ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ದುಷ್ಕರ್ಮಿಗಳು|

Insult to Dr B R Ambedkar Photo in Aland in Kalaburagi District
Author
Bengaluru, First Published Jan 26, 2020, 12:07 PM IST

ಕಲಬುರಗಿ(ಜ.26): ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ಗೆ ಕಿಡಿಗೇಡಿಗಳು  ಅವಮಾನ ಮಾಡಿದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲಶಿರೂರು ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಗ್ರಾಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ನಾಮಫಲಕಕ್ಕೆ ದುಷ್ಕರ್ಮಿಗಳು ಸಗಣಿ‌ ಎರಚಿ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದಾರೆ. ನಾಮಫಲಕಕ್ಕೆ ಸಗಣಿ ಎರಚಿ ಧ್ವಜ ಸ್ತಂಭದ ಧ್ವಜ ಕಿತ್ತು ಬಿಸಾಕಿ ಅದಕ್ಕೂ ಸಗಣಿ ಎರಚಿದ್ದಾರೆ. 

ದುಷ್ಕರ್ಮಿಗಳು ಕೃತ್ಯಕ್ಕೆ ದಲಿತ ಸಂಘಟನೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಪೊಲೀಸರ ದೌಡಾಯಿಸಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios