Asianet Suvarna News Asianet Suvarna News

Smart Card ಕೊರತೆ: ಆರ್‌ಸಿ, ಡಿಎಲ್‌ಗೆ ಸವಾರರ ಪರದಾಟ!

*ಆರ್‌ಸಿ, ಡಿಎಲ್‌ ಮಂಜೂರಾದರೂ ಕಾರ್ಡ್‌ಗೆ 2 ತಿಂಗಳು ಕಾಯಬೇಕು
*ಕಾರ್ಡ್‌ ಪಡೆಯಲು ಇದ್ದ ಅ.31ರ ಗಡುವು ಮುಕ್ತಾಯ
*2 ತಿಂಗಳ ಕಳೆದೂ ಬಾರದ ಡಿಎಲ್‌ ; ನವೀಕರಣ ಅವಧಿ ವಿಸ್ತರಿಸಿದ್ದ ಕೇಂದ್ರ

RC Dl getting delayed due to Smart Card Shortage in Karnataka transports department mnj
Author
Bengaluru, First Published Nov 9, 2021, 12:49 AM IST
  • Facebook
  • Twitter
  • Whatsapp

ಬೆಂಗಳೂರು(ನ.9) : ಕಳೆದ ಎರಡು ತಿಂಗಳಿಂದ ರಾಜ್ಯ ಸಾರಿಗೆ ಇಲಾಖೆಯಲ್ಲಿ (State Transportation Department) ಸ್ಮಾರ್ಟ್‌ ಕಾರ್ಡ್‌ಗಳ (Smart Card) ಕೊರತೆ ಎದುರಾಗಿದ್ದು, ಚಾಲನಾ ಪರವಾನಿಗೆ (Driving Licence) ಮತ್ತು ಹೊಸ ವಾಹನ ಖರೀದಿ ಮಾಡುವ ಗ್ರಾಹಕರು ತೀವ್ರ ತರದ ತೊಂದರೆ ಅನುಭವಿಸುವಂತಾಗಿದೆ. ಸ್ಮಾರ್ಟ್‌ ಕಾರ್ಡ್‌ ಉತ್ಪಾದನೆಯಲ್ಲಿ ಕೊರತೆಯಿಂಟಾಗಿದ್ದು ಸಾರಿಗೆ ಇಲಾಖೆಗೆ (Transport Department) ಅಗತ್ಯವಿರುವ ಪ್ರಮಾಣದಲ್ಲಿ ಸ್ಮಾರ್ಟ್‌ಕಾರ್ಡ್‌ಗಳ ಪೂರೈಕೆಯಾಗುತ್ತಿಲ್ಲ. ಪರಿಣಾಮ ರಾಜ್ಯದಲ್ಲಿ ವಾಹನ (Vehicle) ಖರೀದಿ ಮಾಡುವವರು ನೋಂದಣಿ ಪ್ರಮಾಣ ಪತ್ರ(Registration Card), ಚಾಲನೆ ಪರೀಕ್ಷೆ ಮುಗಿಸಿದ ಬಳಿಕ(ಡಿಎಲ್‌)ಗಳನ್ನು ಪಡೆದುಕೊಳ್ಳುವುದಕ್ಕೆ ಎರಡು ತಿಂಗಳಿಗೂ ಹೆಚ್ಚು ಕಾಲ ಕಾಯುವಂತಾಗಿದೆ.

ನವೀಕರಣ ಅವಧಿ ವಿಸ್ತರಿಸದ್ದ ಕೇಂದ್ರ:

ಸ್ಮಾರ್ಟ್‌ ಕಾರ್ಡ್‌ಗಳ ಕೊರತೆ ಮತ್ತು ಕೊರೋನಾ (Corona) ಕಾರಣದಿಂದ ವಾಹನ ಪರವಾನಗಿ ಪಡೆದುಕೊಳ್ಳುವುದು, ದಾಖಲೆಗಳ ನವೀಕರಣ ಮಾಡುವ ಪ್ರಕ್ರಿಯೆಯಗೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ (Ministry of Road Transport & Highways) 2021ರ ಅ.31ರ ವರೆಗೂ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿತ್ತು. ಆದರೆ, ಇದೀಗ ಅವಧಿ ಮುಕ್ತಾಯವಾಗಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಅದು ತಿಳಿಸಿದೆ. ಆದರೆ, ರಾಜ್ಯ ಸರ್ಕಾರ ನವೀಕರಣದ ಅವಧಿ ವಿಸ್ತರಣೆ ಮಾಡುವ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಾಹನ ಸವಾರರು ಸಂಚಾರಿ ಪೊಲೀಸರೊಂದಿಗೆ (Police) ಕಿರಿಕಿರಿ ಅನುಭವಿಸಬೇಕಾಗಿದೆ.

2 ತಿಂಗಳ ಕಳೆದೂ ಬಾರದ ಡಿಎಲ್‌:

ಕಳೆದ ಸೆ.8ರಂದು ಚಾಲನಾ ಪರವಾನಿಗ  ಪರೀಕ್ಷೆಗೆ (Exam) ಹಾಜರಾಗಿ ಉತ್ತೀರ್ಣರಾಗಿದ್ದೇನೆ. ಎರಡು ತಿಂಗಳು ಕಳೆದರೂ ಸ್ಮಾರ್ಟ್‌ ಕಾರ್ಡ್‌ ಬಂದಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು(Regional Transport officers) ಪ್ರಶ್ನೆ ಮಾಡಿದರೆ ಸ್ಮಾರ್ಟ್‌ ಕಾರ್ಡ್‌ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವಾಹನ ಚಲಾಯಿಸುವಾಗ ಸಂಚಾರಿ ಪೊಲೀಸರಿಗೆ ಈ ಅಂಶ ತಿಳಿಸಿದರೆ ಒಪ್ಪುತ್ತಿಲ್ಲ ಪ್ರತಿ ದಿನ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ವಿಜಯನಗರದ ನಿವಾಸಿ ಮನೋಜ್‌ ಎಂಬುವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಯಲಹಂಕ (Yelahanka) ನಿವಾಸಿ ಮುರಳಿ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ಚಾಲನಾ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಈವರೆಗೂ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ (Technical Problem) ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸುತ್ತಿದ್ದಾರೆ. ಆದರೆ, ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದಲ್ಲಿ 5 ಸಾವಿರ ರು.ಗಳನ್ನು ಪಾವತಿ ಮಾಡಬೇಕಾಗಿದ್ದು, ಕರ್ತವ್ಯಕ್ಕೆ ತೆರಳುವುದಕ್ಕೆ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ. ಸ್ಮಾರ್ಟ್‌ ಲಭ್ಯವಿಲ್ಲದೇ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸ್ಮಾರ್ಟ್‌ ಕಾರ್ಡ್‌ ಉತ್ಪಾದನೆಯಲ್ಲಿ ಕೊರತೆಯಿಂಟಾಗಿದ್ದು ಸಾರಿಗೆ ಇಲಾಖೆಗೆ  ಅಗತ್ಯವಿರುವ ಪ್ರಮಾಣದಲ್ಲಿ ಸ್ಮಾರ್ಟ್‌ಕಾರ್ಡ್‌ಗಳ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲೇ ಹೊಸದಾಗಿ ನೋಂದಾವಣಿಯಾಗುವ (Registartion) ಲೈಸೆನ್ಸ್‌ ಹಾಗೂ ಆರ್‌ಸಿ ಪ್ರತಿಗಳು ಜನರ ಕೈ ಸೇರುತ್ತಿಲ್ಲ

ಪ್ರತಿಕ್ರಿಯೆ ನೀಡದ ಅಧಿಕಾರಿಗಳು:

ಸ್ಮಾರ್ಟ್‌ ಕಾರ್ಡ್‌ ಕೊರತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಮುಂದಾಗುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ ಕೊರತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಸಾರಿಗೆ ಇಲಾಖೆಯ ಆಯುಕ್ತ ಎನ್‌.ಶಿವಕುಮಾರ್‌, ಹೆಚ್ಚುವರಿ ಆಯುಕ್ತ ಜೆ.ಪುರುಷೋತ್ತಮ ಅವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ.

Follow Us:
Download App:
  • android
  • ios