ಗದಗ: ಪಡಿತರ ಬರುವ ಅಕ್ಕಿ ಪ್ಲಾಸ್ಟಿಕ್ ಅಲ್ಲ; ಸಾರವರ್ಧಿತ ಕಾಳು
ಅನ್ನಭಾಗ್ಯ ಯೋಜನೆಯಡಿ ಅಪೌಷ್ಟಿಕತೆ ಹೋಗಲಾಡಿಸಲು ಪ್ರತಿ ಮಾಹೆಯಲ್ಲಿ ಸರ್ಕಾರದ ಆದೇಶದಂತೆ ಪ್ರತಿ 1 ಕ್ವಿಂಟಲ್ ಪಡಿತರ ಅಕ್ಕಿಯಲ್ಲಿ 1ಕೆಜಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ಪೂರೈಸಲಾಗುತ್ತಿದೆ. ಸಾರ್ವಜನಿಕರು, ಪಡಿತರ ಫಲಾನುಭವಿಗಳು ಮಿಶ್ರಣವಾದ ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಭಾವಿಸಿ ಗೊಂದಲಕ್ಕೀಡಾಗುತ್ತಿರುವುದು ತಿಳಿದುಬಂದಿದೆ.
ಗದಗ (ಜೂ.15) : ಅನ್ನಭಾಗ್ಯ ಯೋಜನೆಯಡಿ ಅಪೌಷ್ಟಿಕತೆ ಹೋಗಲಾಡಿಸಲು ಪ್ರತಿ ಮಾಹೆಯಲ್ಲಿ ಸರ್ಕಾರದ ಆದೇಶದಂತೆ ಪ್ರತಿ 1 ಕ್ವಿಂಟಲ್ ಪಡಿತರ ಅಕ್ಕಿಯಲ್ಲಿ 1ಕೆಜಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ಪೂರೈಸಲಾಗುತ್ತಿದೆ. ಸಾರ್ವಜನಿಕರು, ಪಡಿತರ ಫಲಾನುಭವಿಗಳು ಮಿಶ್ರಣವಾದ ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಭಾವಿಸಿ ಗೊಂದಲಕ್ಕೀಡಾಗುತ್ತಿರುವುದು ತಿಳಿದುಬಂದಿದೆ.
ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ. (ಕೃತಕ ಕಾಳು- ಇದು ನಿಜವಾದ ಅಕ್ಕಿ ಅಲ್ಲ. ಅಕ್ಕಿ ರೂಪದಲ್ಲಿ ವಿನ್ಯಾಸಗೊಳಿಸಲಾದ ಸಾರವರ್ಧಿತ ಕಾಳು. ಕಬ್ಬಿಣಾಂಶ, ಸತು, ಪೋಲಿಕ್ ಆ್ಯಸಿಡ್, ವಿಟಮಿನ್ ಎ, ವಿಟಮಿನ್ ಬಿ 12 ಮೊದಲಾದ ಅಂಶಗಳ್ನು ಬೆರೆಸಿ ಅದಕ್ಕೆ ಅಕ್ಕಿಯ ಕಾಳಿನ ರೂಪ ಕೊಡಲಾಗಿದೆ). ಈ ಸಾರವರ್ಧಿತ ಅಕ್ಕಿಯು ಪಡಿತರ ಅಕ್ಕಿಗಿಂತ ನೋಡಲು ಸ್ವಲ್ಪ ದಪ್ಪ, ಉದ್ದ ಇದ್ದು ಅಕ್ಕಿಯನ್ನು ತೊಳೆಯುವ ಸಮಯದಲ್ಲಿ ನೀರಿನಲ್ಲಿ ಸ್ವಲ್ಪ ಹೊತ್ತು ತೇಲುವುದರಿಂದ ಇದನ್ನು ಪ್ಲಾಸ್ಟಿಕ್ ಅಕ್ಕಿ ಎಂದು ತಿಳಿದುಕೊಂಡು ಗೊಂದಲ ಮಾಡಿಕೊಳ್ಳಬಾರದು.
ಪ್ಲಾಸ್ಟಿಕ್ ಅಕ್ಕಿ ಎಂದು ಸಾರವರ್ಧಿತ ಅಕ್ಕಿ ಪಡೆಯಲು ಗ್ರಾಮಸ್ಥರು ಹಿಂದೇಟು
ಈ ಅಕ್ಕಿಯ ಕಾಳು ಉತ್ಕೃಷ್ಟಮಟ್ಟದ ಪೌಷ್ಟಿಕಾಂಶಗಳನ್ನು ಹೊಂದಿದೆ. ಈ ಸಾರವರ್ಧಿತ ಅಕ್ಕಿಯ ಕಾಳು ಗರ್ಭಿಣಿಯರು, ಬಾಣಂತಿಯರು, ಅಪೌಷ್ಟಿಕ ಮಕ್ಕಳು, ಅಶಕ್ತ ವ್ಯಕ್ತಿಗಳಿಗೆ ಉಪಯುಕ್ತವಾಗುತ್ತದೆ. ಪಡಿತರ ಫಲಾನುಭವಿಗಳು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ ತಿಂಗಳ ಪಡಿತರ ಬಿಡುಗಡೆ
ಧಾರವಾಡ: ಜಿಲ್ಲೆಯಲ್ಲಿನ ಪಡಿತರ ಫಲಾನುಭವಿಗಳಿಗೆ ಜೂನ್ ತಿಂಗಳ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಎನ್‌ಎಫ್‌ಎಸ್‌ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 6 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯದ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಬಹುದು.
ಅನ್ನಭಾಗ್ಯ ಯೋಜನೆಯ 450 ಅಕ್ಕಿ ಮೂಟೆ ತುಂಬಿದ್ದ ಲಾರಿಯೇ ನಾಪತ್ತೆ!
ಸರ್ಕಾರದ ಆದೇಶದಂತೆ ಜುಲೈ ತಿಂಗಳಿಂದ ಆಹಾರಧಾನ್ಯ ವಿತರಣೆ ಪ್ರಮಾಣ ಹೆಚ್ಚಿಸುತ್ತಿರುವುದರಿಂದ ಇಲಾಖೆಯ ಸಾಫ್‌್ಟವೇರ್‌ನಲ್ಲಿ ಸೂಕ್ತ ಬದಲಾವಣೆ ಕಾರ್ಯವನ್ನು ಜೂನ್ 28, 2023ರಿಂದ ಜರುಗಿಸುತ್ತಿರುವುದರಿಂದ ಕಾರ್ಡುದಾರರು ತಮಗೆ ಹಂಚಿಕೆಯಾದ ಆಹಾರಧಾನ್ಯವನ್ನು ಜೂನ್ 27ರೊಳಗಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಿಂದ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.