ವಿಜಯಪುರದಲ್ಲಿದೆ ಅಪರೂಪದ ಆಲೆಮನೆ..!ಆರೋಗ್ಯ ವೃದ್ಧಿಗೆ ಸಹಕಾರಿ ಇಲ್ಲಿ ರೆಡಿಯಾಗೋ ಗುಣಮಟ್ಟದ ಬೆಲ್ಲ..!ಇಲ್ಲಿ ತಯಾರಾಗುವ ದೇಶಿ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ..!

ವರದಿ- ಷಡಕ್ಷರಿ ಏಷ್ಯಾನೆಟ್‌ ಸುವರ್ಣ ನ್ಯೂಸ್ 

ವಿಜಯಪುರ (ಡಿ.22): ಹಿಂದೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗ್ತಿದ್ದ ಆಲೆ ಮನೆಗಳು ಈಗ ಮಾಯವಾಗಿವೆ. ಅಲ್ಲೊಂದು ಇಲ್ಲೊಂದು ಕಾಣಿಸ್ತಿವೆ. ಕಬ್ಬು ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲು ಈಗ ಆಲೆ ಮನೆಗಳು ಅಪರೂಪ. ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಇರುವ ಆಲೆ ಮನೆ ದೇಶಿ ಬೆಲ್ಲವನ್ನ ತಯಾರಿಸುವ ಮೂಲಕ ಹೊಸ ಟ್ರೆಂಡ್‌ ಹುಟ್ಟು ಹಾಕಿದೆ. ಯಾವುದೇ ಕೆಮಿಕಲ್‌ ಬಳಕೆ ಮಾಡದೆ ಬೆಲ್ಲದ ಜೊತೆಗೆ ಉಪ ಉತ್ಪನ್ನಗಳನ್ನ ತಯಾರಿಸುತ್ತ ಮನೆಮಾತಾಗಿದೆ.

ಈಗಷ್ಟೇ ಹೊಲದಿಂದ ಕಟಾವು ಮಾಡಿ ತಂದಿರೋ ಕಬ್ಬು. ದೊಡ್ಡ ಪಾತ್ರೆಯಲ್ಲಿ ಕುದಿಯುತ್ತಿರೋ ಕಬ್ಬಿಣ ರಸ.. ರಸ್ತೆಯ ಮೇಲೆ ದೇಶಿ ಬೆಲ್ಲ, ಕಾಕಂಬಿ ಖರೀದಿಗೆ ಮುಗಿಬಿದ್ದಿರುವ ಜನ.. ಈ ದೃಶ್ಯಗಳು ಕಂಡು ಬಂದಿದ್ದು ಚಡಚಣ ತಾಲೂಕಿನ ಕನ್ನೂರ್‌ ಗ್ರಾಮದ ಹೊರ ವಲಯದಲ್ಲಿ. ಇದೆ ಗ್ರಾಮದ ರೈತ ಮಾನಿಂಗ್‌ ಅನ್ನೋರು ಈ ಆಲೆಮನೆಯನ್ನ ನಡೆಸುತ್ತಿದ್ದಾರೆ. ತಮ್ಮದೆ 30 ಏಕರೆ ಜಮೀನಿನಲ್ಲಿ ಬೆಳೆದ ಕಬ್ಬನ್ನ ಇಲ್ಲಿ ಗಾಣ ಮಾಡುತ್ತಾರೆ. ಸುಣ್ಣವನ್ನ ಬಿಟ್ಟರೇ ಮತ್ಯಾವುದೆ ಕೆಮಿಕಲ್‌ ಬಳಕೆ ಮಾಡದೆ ಇಲ್ಲಿ ಬೆಲ್ಲವನ್ನ ತಯಾರಿಸುತ್ತಾರೆ. 

ವಿಜಯಪುರ: ಸೂಸೈಡ್‌ ಸ್ಪಾಟ್‌ ಆಗ್ತಿದೆಯಾ ವಿಶ್ವ ವಿಖ್ಯಾತ ಗೋಳಗುಮ್ಮಟ..!

ಕಪ್ಪು ಬೆಲ್ಲಕ್ಕೆ ಕೆ.ಜಿ ಗೆ 45 ರೂಪಾಯಿ: ಗುಣಮಟ್ಟದ ಕಪ್ಪು ಬೆಲ್ಲಕ್ಕೆ ಕೆ.ಜಿ ಗೆ 45 ರೂಪಾಯಿ, ಹಾಗೂ ಬಿಳಿ ಬೆಲ್ಲಕ್ಕೆ 40 ರೂಪಾಯಿಗೆ ಕೆ.ಜಿ ಯಂತೆ ಮಾರಾಟ ಮಾಡುತ್ತಾರೆ. ಇಲ್ಲಿ ತಯಾರಾಗುವ ಬೆಲ್ಲಕ್ಕು ಮೊದಲು ದ್ರವರೂಪದಲ್ಲಿ ಸಿಗುವ ಕಾಕಿಂಬೆಗು ಬಾರಿ ಬೇಡಿಕೆ ಇದೆ. ಲೀಟರ್‌ 100 ರೂಪಾಯಿಯಂತೆ ಕಾಕಿಂಬೆ ದ್ರವ ಬೆಲ್ಲವನ್ನ ಮಾರಾಟ ಮಾಡ್ತಾರೆ. ಇಲ್ಲಿ ತಯಾರಾಗುವ ಗುಣಮಟ್ಟದ ಬೆಲ್ಲದಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ. ಕಾಕಿಂಬೆ ನಿಯಮಿತ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಹೀಗಾಗಿ ಭಾರೀ ಬೇಡಿಕೆ ಇದೆ. 

ಶಾಪಿಂಗ್‌ ಮಾಲ್‌ಗಳಿಗೂ ಮಾರಾಟ: ಕೆಮಿಕಲ್‌ ರಹಿತವಾಗಿ ತಯಾರಾಗುವ ಬೆಲ್ಲ ಹಾಗೂ ಕಾಕಂಬೆ ಆರೋಗ್ಯಕ್ಕೆ ಉತ್ತಮ ಎನ್ನುವ ಕಾರಣಕ್ಕೆ ಜನರು ಖರೀದಿಗೆ ಮುಗಿಬೀಳ್ತಾರೆ. ಅದ್ರಲ್ಲು ಕೆಮಿಕಲ್‌ ಬಳಕೆ ಮಾಡದೆ ತಯಾರಿಸಿದ ಕಪ್ಪು ಬೆಲ್ಲವನ್ನ ಕೊಳ್ಳುವುದಕ್ಕೆ ಹತ್ತಿರದ ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಸೇರಿದಂತೆ ವಿಜಯಪುರ ಜಿಲ್ಲೆಯ ನಾನಾಕಡೆಗಳಿಂದ ಜನರು ಬರ್ತಾರೆ. ಇನ್ನು ಉತ್ತರ ಕರ್ನಾಟಕದ ಪ್ರಸಿದ್ಧ ಇಂಚಗೇರಿ ಮಠ ಸಮೀಪದಲ್ಲೆ ಇರೋದ್ರಿಂದ ನಿತ್ಯ ಮಠಕ್ಕೆ ಆಗಮಿಸುವ ನೂರಾರು ಜನರು ಇಲ್ಲಿ ಬೆಲ್ಲವನ್ನ ಖರೀದಿ ಮಾಡಿಕೊಂಡು ಹೋಗ್ತಾರೆ. ಇಲ್ಲಿ ತಯಾರಾಗುವ ಅರ್ಧದಷ್ಟು ಬೆಲ್ಲ, ಚಿಕ್ಕ ಬೆಲ್ಲದಚ್ಚು ಸೇರಿ ಕಾಕಿಂಬೆ ಪ್ರಾಡಕ್ಟ್‌ ರಸ್ತೆಯಲ್ಲೆ ಸೇಲ್‌ ಆಗುತ್ತೆ. ಚಡಚಣ, ವಿಜಯಪುರ ಸೇರಿ ಸುತ್ತಮುತ್ತಲ ಬಿಗ್‌ ಬಜಾರ್‌ ಗಳಿಗು ಸೇಲ್‌ ಆಗುತ್ತೆ.

ಸುವರ್ಣ‌ಸೌಧದಲ್ಲಿ ಗಮನ ಸೆಳೆಯುತ್ತಿರುವ ವಿಜಯಪುರದ ಕಡೇಮನಿ ಬಿಡಿಸಿದ ವಿಶ್ವಗುರು ವರ್ಣಚಿತ್ರ

ಸಕ್ಕರೆ ಸೇವನೆಗಿಂದ ಬೆಲ್ಲ ಸೇವನೆ ಆರೋಗ್ಯಕ್ಕೆ ಉತ್ತಮ. ಇಲ್ಲಿ ತಯಾರಾಗುವ ಕೆಮಿಕಲ್‌ ರಹಿತ ಬೆಲ್ಲದಿಂದ ಆರೋಗ್ಯಕ್ಕೆ ಇನ್ನಿಲ್ಲದ ಲಾಭಗಳುಂಟು. ಹೆಚ್ಚಿನ ಲಾಭದ ನಿರೀಕ್ಷೆ ಇಲ್ಲದೆ ಕನ್ನೂರಿನ ಆಲೆ ಮನೆಯಲ್ಲಿ ರೈತರೇ ಬೆಲ್ಲ ತಯಾರಿಸಿ ಮಾರ್ತಿರೋದು ವಿಶೇಷವೇ ಸರಿ.