ಪತ್ನಿಯ ಹೆರಿಗೆಗಾಗಿ ತಾಯಿ ಮನೆಗೆ ಹೋದಾಗ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿ ಚಿಕ್ಕಪ್ಪನಿಗೆ 20 ವರ್ಷ ಜೈಲು ಶಿಕ್ಷೆ ವಿ​ಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಮಂಗಳೂರು (ಜೂ.22) : ಪತ್ನಿಯ ಹೆರಿಗೆಗಾಗಿ ತಾಯಿ ಮನೆಗೆ ಹೋದಾಗ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿ ಚಿಕ್ಕಪ್ಪನಿಗೆ 20 ವರ್ಷ ಜೈಲು ಶಿಕ್ಷೆ ವಿ​ಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿ ಅಶ್ವತ್‌್ಥ (35) ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾ​ಧಿ.

Mangaluru crimes: ಪತ್ನಿ ಕೊಲೆಗೈದ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತು

ಮಹಿಳೆಯೊಬ್ಬರ ಮೊದಲನೇ ಗಂಡನಿಗೆ ಪುತ್ರಿ ಜನಿಸಿದ್ದಳು. ಇದಾದ ಕೆಲವು ವರ್ಷದ ಬಳಿಕ ಮಹಿಳೆ ಅಶ್ವತ್ಥ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು. 2022ರ ಜು.26ರಂದು ಮಹಿಳೆ ಹೆರಿಗೆಗೆ ಹೋದ ಸಮಯ ಮೊದಲ ಪತಿಗೆ ಜನಿಸಿದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಅಶ್ವತ್‌್ಥ ಅತ್ಯಾಚಾರವೆಸಗಿದ್ದ. ಇದಾದ ನಂತರ ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ್ದು, ವಿಷಯ ತಿಳಿದ ಬಾಲಕಿ ದೊಡ್ಡಮ್ಮ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮಹಿಳಾ ಠಾಣಾ ಪೊಲೀಸ್‌ ನಿರೀಕ್ಷಕ ಲೋಕೇಶ್‌ ಅವರು ಸಾಕ್ಷಿದಾರರನ್ನು ವಿಚಾರಣೆ ನಡೆಸಿ ನೊಂದ ಅಪ್ರಾಪ್ತ ಬಾಲಕಿಯ ಮೆಡಿಕಲ್‌ ವರದಿ ಹಾಗೂ ಆರೋಪಿಯ ಮೆಡಿಕಲ್‌ ವರದಿಯನ್ನು ಎಫ್‌ಎಸ್‌ಎಲ್‌ ವರದಿ ಪಡೆದು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ನ್ಯಾಯಾಲಯ ಸಮಗ್ರ ವಿಚಾರಣೆ ನಡೆಸಿ ಜೂ.21ರಂದು ತೀರ್ಪು ನೀಡಿದೆ. ಸಾಕ್ಷಾಧಾರ ಮತ್ತು ಸಾಕ್ಷಿದಾರರ ಹೇಳಿಕೆ ಮೇರೆಗೆ ಅಪರಾಧ ಸಾಬೀತಾಗಿದ್ದು, ಆತನಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿ​ಸಿ ತೀರ್ಪು ನೀಡಿದೆ.

ಸೌಜನ್ಯ ರೇಪ್‌ & ಮರ್ಡರ್: ಸಂತೋಷ್‌ ರಾವ್‌ ನಿರ್ದೋಷಿ, ಸಿಬಿಐ ಕೋರ್ಟ್‌ ತೀರ್ಪು