‘ಸೋಲಿನ ಭಯದಿಂದ ಕೋಳಿವಾಡ ಏನೇನೋ ಹೇಳುತ್ತಿದ್ದಾರೆ’

ಜಾತಿಗಳ‌ ನಡುವೆ ವಿಷ ಬೀಜ ಬಿತ್ತೋ ಕೆಲಸವನ್ನು ಪ್ರಕಾಶ್ ಕೋಳಿವಾಡ ಮಾಡಿದ್ದಾರೆ| ಅದು ಸಾಧ್ಯವಾಗದ್ದಕ್ಕೆ ಏನೇನೋ ಆರೋಪ ಮಾಡುತ್ತಿದ್ದಾರೆ| ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ| ಐಟಿ ದಾಳಿಯಿಂದ ಅನುಕಂಪ ಗಿಟ್ಟಿಸಲು ಯತ್ನಿಸಬೇಡಿ| ಅದರಿಂದ ಲಾಭ ಆಗುತ್ತೆ ಅನ್ನೋದು ನಿಮ್ಮ ಭ್ರಮೆ ಎಂದ ಅರುಣಕುಮಾರ್|

Ranibennur BJP Candidate Arunkumar Talks Over Prakash Koliwada

ಹಾವೇರಿ[.ಡಿ04]: ಸೋಲಿನ ಭಯದಿಂದ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಅವರು ಏನೇನೋ ಹೇಳುತ್ತಿದ್ದಾರೆ. ಕೋಳಿವಾಡರು ಏನು ಅನ್ನೋದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ.ನಮ್ಮ ನಾಯಕರ ಎಲ್ಲ ವಾಹನಗಳನ್ನು ಚೆಕ್ ಮಾಡಲಾಗಿದೆ.ನಮಗೆ ಯಾವುದೇ ಭಯವಿಲ್ಲ. ಆದರೆ ಐಟಿ ರೇಡ್ ಆಗಿದ್ದಕ್ಕೆ ಬಿಜೆಪಿ ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡೋದು ಯಾಕೆ ಎಂದು ರಾಣಿಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಅವರು ಹೇಳಿದ್ದಾರೆ. 

‘ಕೋಳಿವಾಡ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಹಳೆ ಚಪ್ಪಲಿ ಸಿಕ್ಕಿವೆ’

ಬುಧವಾರ ಜಿಲ್ಲೆಯ ರಾಣಿಬೆನ್ನೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಳ‌ ನಡುವೆ ವಿಷ ಬೀಜ ಬಿತ್ತೋ ಕೆಲಸವನ್ನು ಪ್ರಕಾಶ್ ಕೋಳಿವಾಡ ಮಾಡಿದ್ದಾರೆ. ಅದು ಸಾಧ್ಯವಾಗದ್ದಕ್ಕೆ ಏನೇನೋ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಐಟಿ ದಾಳಿಯಿಂದ ಅನುಕಂಪ ಗಿಟ್ಟಿಸಲು ಯತ್ನಿಸಬೇಡಿ. ಅದರಿಂದ ಲಾಭ ಆಗುತ್ತೆ ಅನ್ನೋದು ನಿಮ್ಮ ಭ್ರಮೆಯಾಗಿದೆ. ಕ್ಷೇತ್ರದಲ್ಲಿ ಜನರು ಬೇಸತ್ತು ಹೋಗಿದ್ದಾರೆ. ಕೆ. ಬಿ. ಕೋಳಿವಾಡ ಅವರು ಅಧಿಕಾರದಲ್ಲಿದ್ದಾಗ ಹೊಳೆ ದಂಡೆ ಲೂಟಿ ಮಾಡಿದ್ದಾರೆ. ಮರಳು ಲೂಟಿ ಮಾಡಿದ್ದು ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Latest Videos
Follow Us:
Download App:
  • android
  • ios