Asianet Suvarna News Asianet Suvarna News

Rani Chennamma Statue: ವಿಜಯಪುರ ಜಿಲ್ಲೆ ಮೊಟ್ಟ ಮೊದಲ ರಾಣಿ ಚೆನ್ನಮ್ಮ ಮೂರ್ತಿ ಅನಾವರಣ!

⦁ ಸ್ವಾತಂತ್ರಕ್ಕೆ ಕಿಚ್ಚು ಹೊತ್ತಿಸಿದ ಗ್ರಾಮದಲ್ಲೆ ಚೆನ್ನಮ್ಮ ಮೂರ್ತಿ ಸ್ಥಾಪನೆ.
⦁ ಪಂಚಮಸಾಲಿ ಜಗದ್ಗುರು, ಇಂಚಗೇರಿ ಮಠದ ಶ್ರೀಗಳು ಭಾಗಿ.
⦁ ಮೂರ್ತಿ ಉದ್ಘಾಟನೆ ಬಳಿ ನಡೆದ ಪಂಚಮಸಾಲಿ ಸಮಾವೇಶ.

Rani Chennamma statue unveiled in Vijayapura district gvd
Author
Bangalore, First Published Apr 10, 2022, 6:35 PM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯಪುರ

ವಿಜಯಪುರ (ಏ.10): ವಿಜಯಪುರ (Vijayapura) ಜಿಲ್ಲೆಯ ಮೊಟ್ಟ ಮೊದಲ ರಾಣಿ ಚೆನ್ನಮ್ಮ ಮೂರ್ತಿ (Rani Chennamma Statue) ಸ್ಥಾಪನೆಯಾಗಿದೆ. ಚಡಚಣ ತಾಲೂಕಿನ ಸ್ವಾತಂತ್ರ ಹೋರಾಟಕ್ಕೆ ಕಿಚ್ಚು ಹಚ್ಚಿದ್ದ ಇಂಚಗೇರಿ ಗ್ರಾಮದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji), ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು, ಶಾಸಕ ಬಸನಗೌಡ ಯತ್ನಾಳ್‌ (Basanagouda Yatnal) ಮೂರ್ತಿ ಉದ್ಘಾಟನೆಗೊಳಿಸಿದರು.

ವಿಜಯಪುರ ಜಿಲ್ಲೆಯ ಮೊದಲ ಚೆನ್ನಮ್ಮ ಮೂರ್ತಿ ಇದು: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರಾಣಿ ಚೆನ್ನಮ್ಮ ಮೂರ್ತಿ, ವೃತ್ತಗಳು ಇದ್ದೆ ಇರುತ್ವೇ. ಆದ್ರೆ ಅದೇಷ್ಟೊ ವರ್ಷಗಳಿಂದ ವಿಜಯಪುರ ನಗರದಲ್ಲೆ ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಬೇಕು ಅಂತಾ ಪ್ರಯತ್ನಿಸಲಾಗಿತ್ತು. ಕೆಲ ಕಾರಣಾಂತರಗಳಿಂದ ಮುಂದುಡಲ್ಪಟ್ಟಿದೆ. ಆದ್ರೀಗ 1945ರ ಸಮಯದಲ್ಲಿ ಸ್ವಾತಂತ್ರ ಹೋರಾಟಕ್ಕೆ ಕಿಚ್ಚು ಹಚ್ಚಿದ್ದ ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆಗೊಂಡಿದೆ.

ಸ್ವಾತಂತ್ರ ಹೋರಾಟಕ್ಕೆ ಕಿಚ್ಚು ಹಚ್ಚಿದ್ದ ಇಂಚಗೇರಿ: ಇನ್ನು ಸ್ವಾತಂತ್ರ ಹೋರಾಟ ವೇಳೆ ಬ್ರಿಟಿಷರ ವಿರುದ್ಧ ಉತ್ತರ ಕರ್ನಾಟಕ ಭಾಗದಿಂದ ಉಗ್ರ ಹೋರಾಟದ ಕಿಡಿ ಹೊತ್ತಿದ್ದೆ ಇಂಚಗೇರಿ ಗ್ರಾಮದಿಂದ ಅನ್ನೋದು ವಿಶೇಷ. 1942ರ ಸಮಯದಲ್ಲಿ ಇಂಚಗೇರಿ ಮಠದ ಪೀಠಕ್ಕಿದ್ದ ಮಾಧವಾನಂದ ಪ್ರಭುಜಿಗಳು ಸ್ವಾತಂತ್ರಕ್ಕಾಗಿ ಉಗ್ರ ಸ್ವರೂಪದಲ್ಲಿ ಹೋರಾಟ ಮಾಡಿದ್ದರು. ಇಂಚಗೇರಿ ಮಠದ 20 ಸಾವಿರಕ್ಕು ಅಧಿಕ ಅನುಯಾಯಿಗಳೊಂದಿಗೆ ಎರೆಡು ಬಂದೂಕಿನ ಕಾರ್ಖಾನೆಗಳನ್ನೆ ತೆರೆದು ಬ್ರಿಟೀಷ ಅಧಿಕಾರಿಗಳ ಹುಟ್ಟಡಗಿಸಿದ್ದು ಇಂದು ಇತಿಹಾಸ. ಇಂಥ ಸ್ವಾತಂತ್ರದ ಕಿಚ್ಚು ಹೊತ್ತಿದ ಗ್ರಾಮದಲ್ಲಿ ವಿಜಯಪುರ ಜಿಲ್ಲೆಯ ಮೊದಲ ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆಯಾಗಿರೋದು ಐತಿಹಾಸಿಕ ಕಾರ್ಯಕ್ರಮವೇ ಸರಿ ಎನ್ನಲಾಗುತ್ತಿದೆ.

Vijayapura: ಭಲೇ ಬಸವ: ರೈತನಿಗೆ ಚಿನ್ನ ಗೆದ್ದುಕೊಟ್ಟ ಬಂಗಾರದಂತ ಎತ್ತುಗಳು..!

ಪೂರ್ಣಕುಂಭದ ಮೂಲಕ ಶ್ರೀಗಳಿಗೆ, ಮುಖಂಡರಿಗೆ ಸ್ವಾಗತ: ಜಿಲ್ಲೆಯಲ್ಲೆ ಮೊಟ್ಟ ಮೊದಲು ಸ್ಥಾಪನೆಗೊಂಡ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಟಾಪನೆಗೆ ಇಡೀ ಇಂಚಗೇರಿ ಗ್ರಾಮ ಮಧುವನಗಿತ್ತಿಯಂತೆ ಸಿಂಗಾರಗೊಂಡಿತ್ತು. ಅಪರೂಪದಲ್ಲೆ ಅಪರೂಪ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳು, ಮುಖಂಡರನ್ನ ಅದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಿಕೊಳ್ಳಲಾಯಿತು. ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಸುಮಂಗಲೆಯರು ಪಂಚಮಸಾಲಿ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ಇಂಚಗೇರಿ ಮಠದ ರೇವಣಸಿದ್ದೇಶ್ವ ಮಹಾರಾಜರನ್ನ ಹಾಗೂ ಪಂಚಮಸಾಲಿ ಸಮುದಾಯ ಶಾಸಕ ಬಸನಗೌಡ ಯತ್ನಾಳ್‌, ಶಾಸಕ ರವಿಕಾಂತ ಪಾಟೀಲರನ್ನ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಗ್ರಾಮದ ಹೃದಯಭಾಗದಲ್ಲಿ ರಾಣಿ ಚೆನ್ನಮ್ಮ ಮೂರ್ತಿಯನ್ನ ಅನಾವರಣಗೊಳಿಸಲಾಯಿತು.

ಮೂರ್ತಿ ಅನಾವರಣ ಬಳಿಕ ಪಂಚಮಸಾಲಿ ಸಮಾವೇಶ: ಗ್ರಾಮದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಬಳಿಕ ಗ್ರಾಮದ ಹೊರವಲಯದಲ್ಲಿ ಪಂಚಮಸಾಲಿ ಸಮುದಾಯದ ಸಮಾವೇಶವನ್ನು ನಡೆಸಲಾಯಿತು. ಸಮಾವೇಶದಲ್ಲಿ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಸಮುದಾಯದ ಶಾಸಕ, ಮಾಜಿ ಶಾಸಕರು, ಮುಖಂಡರು ಪಾಲ್ಗೊಂಡರು.  ವೇದಿಕೆಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿಯ ಮುಂದಿನ ಹೋರಾಟ ಬಗ್ಗೆ ಚರ್ಚಿಸಲಾಯಿತು.

ಸಮಾವೇಶದಲ್ಲಿ ಸಿಎಂ  ಬೊಮ್ಮಾಯಿಗೆ ಶಾಸಕ ಯತ್ನಾಳ ಎಚ್ಚರಿಕೆ: ಸಮಾವೇಶಕ್ಕು ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್‌ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆಯನ್ನ ಸಿಎಂ ನೀಡಿದ್ದಾರೆ. ಈ ಕುರಿತು ಸಮಗ್ರ ವರದಿ ತರಿಸಿಕೊಂಡು ಸರ್ವ ಪಕ್ಷಗಳ ಸಭೆ ಕರೆದು ನಿರ್ಣಯ ಮಾಡೋದಾಗಿ ತಿಳಿಸಿದ್ದಾಗಿ ಹೇಳಿದರು. ಸಿಎಂ ಸದನದಲ್ಲಿ ಭರವಸೆ ನೀಡಿದ ಕಾರಣ ಕಾಯುತ್ತಿದ್ದೇವೆ ಎಂದಿದ್ದಾರೆ. ಬಳಿಕ ನಡೆದ ಸಮಾವೇಶದ ವೇದಿಕೆ ಮೇಲೆ ಮಾತನಾಡಿದ ಯತ್ನಾಳ್‌ ಅವರು ಪಂಚಮಸಾಲಿ ಸಮುದಾಯದ ಹೋರಾಟ ಬಳಿಕ ಸಮಾಜದಲ್ಲಿ ಬದಲಾವಣೆಗಳು ಆಗಿವೆ. ಪಂಚಸಾಲಿ ಸಮುದಾಯಕ್ಕೆ ಮೀಸಲಾತಿ ಕೇಳಿದ ಬಳಿಕ, ಬೇರೆ ಸಮಾಜಗಳಲ್ಲು ಮೀಸಲಾತಿ ಬದಲಾವಣೆ ಬಗ್ಗೆ ಚರ್ಚೆ ನಡೆದಿವೆ. ಸಿಎಂ ತಮ್ಮ ಭಾಷಣದ ವೇಳೆ ಸಿಎಂ ಬೊಮ್ಮಾಯಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಶಾಸಕ ಯತ್ನಾಳ್‌ ಶಿಗ್ಗಾವಿ ಕ್ಷೇತ್ರದಲ್ಲಿ 50ಸಾವಿರ ಪಂಚಮಸಾಲಿಗಳಿದ್ದಾರೆ. ಆ ಸ್ವಾಮಿ ಬೆನ್ನುಹತ್ತಿದ್ರೆ ನಿಮಗೆ ಸೋಲು ಕಾಣಬೇಕಾಗುತ್ತೆ. ಸೋಲಿಸುವ ತಾಕತ್ತು ನಮ್ಮ ಸಮಾಜಕ್ಕಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಪಂಚನದಿಗಳ ಬೀಡು ವಿಜಯಪುರದಲ್ಲಿ ನೀರಿಗಾಗಿ ಶುರುವಾಗಿದೆ ರೈತರ ಪರದಾಟ.!

ಶಾಸಕ ಯತ್ನಾಳ್‌ ಹೊಸ ಬಾಂಬ್: ಇನ್ನು ಕೆಲ ಸ್ವಾಮೀಜಿಗಳ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಯತ್ನಾಳ್‌ ಕೆಲ ಸ್ವಾಮೀಜಿಗಳು ಪಂಚಮಸಾಲಿ ಪಾದಯಾತ್ರೆಯಲ್ಲಿ ನಾಟಕೀಯವಾಗಿ ಪಾಲ್ಗೊಂಡರು ಎಂದ್ರು. ಯಾರನ್ನೊ ಮಂತ್ರಿ ಮಾಡೋಕೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಕತ್ತಲಾಗ್ತಿದ್ದಂತೆ ಕಾರಲ್ಲಿ ಕೂರ್ತಿದ್ದರು ಎಂದು ಆರೋಪ ಮಾಡಿದ್ರು. ಮೀಸಲಾತಿ ವಿಚಾರದಲ್ಲಿ ಕೂಡಲಸಂಗಮ ಸ್ವಾಮೀಜಿಗಳು ಹೊಂದಾಣಿಕೆ ಆಗಿಲ್ಲ, ಆಗಿದ್ರೆ 10 ಕೋಟಿ ಕೊಡ್ತಿದ್ರು ಅಂತಾ ಹೊಸ ಬಾಂಬ್‌ ಹಾಕಿದ್ರು.. ಇತ್ತ ಮಾತನಾಡಿದ ಪಂಚಮಸಾಲಿ ಜಗದ್ಗುರುಗಳು ಮೀಸಲಾತಿ ಸಿಗುವ ಭರವಸೆ ಇದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios