Asianet Suvarna News Asianet Suvarna News

ವಿಶ್ವಮಾನ್ಯತೆ ಪಡೆದ ರಂಗನತಿಟ್ಟು, ಕೊಕ್ಕರೆ ಬೆಳ್ಳೂರು

ಜಿಲ್ಲೆಯ ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರು ಎರಡು ಪಕ್ಷಿಧಾಮಗಳು ವಿಶ್ವಮಾನ್ಯತೆ ಪಡೆದುಕೊಂಡಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್‌ ತಿಳಿಸಿದರು.

Ranganathittu  Kokkare Belloor, which has received world recognition snr
Author
First Published Mar 19, 2023, 6:12 AM IST

  ಭಾರತೀನಗರ :  ಜಿಲ್ಲೆಯ ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರು ಎರಡು ಪಕ್ಷಿಧಾಮಗಳು ವಿಶ್ವಮಾನ್ಯತೆ ಪಡೆದುಕೊಂಡಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್‌ ತಿಳಿಸಿದರು.

ಮದ್ದೂರು ತಾಲೂಕು ಕೊಕ್ಕರೆಬೆಳ್ಳೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಭಾರತೀಯ ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು, ಡಬ್ಯೂ$್ಲಡಬ್ಯ್ಲೂಎಫ್‌ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ಹಕ್ಕಿ ಹಬ್ಬ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀರಂಗಪಟ್ಟಣ ರಂಗನತಿಟ್ಟು ಪಕ್ಷಿಧಾಮ ವಿಶ್ವಮಾನ್ಯ ಪ್ರವಾಸಿ ಕೇಂದ್ರವಾದರೆ, ಕೊಕ್ಕರೆ ಬೆಳ್ಳೂರು ಸಮುದಾಯ ಸಂರಕ್ಷಿತ ಪಕ್ಷಿಧಾಮವಾಗಿ ವಿಶ್ವವಿಖ್ಯಾತಿ ಹೊಂದಿದೆ. ಈ ಎರಡು ತಾಣಗಳು ಜಿಲ್ಲೆಯ ಹೆಮ್ಮೆಯ ಪ್ರವಾಸಿತಾಣಗಳಾಗಿವೆ ಎಂದು ಬಣ್ಣಿಸಿದರು.

ಮುಂದಿನ ದಿನಗಳಲ್ಲಿ ಪಕ್ಷಿ ಕೇಂದ್ರಗಳಿಗೆ ಪ್ರವಾಸಿಗರು ಸುಲಭವಾಗಿ ಬಂದುಹೋಗಲು ಅನುಕೂಲವಾಗುವಂತೆ ಕ್ಯೂಆರ್‌ ರ್ಕೋಡ್‌ ಮತ್ತು ಮಂಡ್ಯ ಟೂರಿಸಂ ಮ್ಯಾಪ್‌ ಅಭಿವೃದ್ಧಿಸಲಾಗಿದೆ. ಇದನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಆರ್‌.ಐಶ್ವರ್ಯ ಮಾತನಾಡಿ, ಮಂಡ್ಯ ಜಿಲ್ಲೆ ಉತ್ತಮ ಪ್ರವಾಸಿ ತಾಣವಾಗಿದೆ. ಜಿಲ್ಲೆಯಲ್ಲಿರುವಷ್ಟುಪ್ರವಾಸಿ ತಾಣಗಳು ಬೇರೆಲ್ಲೂ ಇಲ್ಲ. ಮೇಲುಕೋಟೆ, ಆದಿಚುಂಚನಗಿರಿ, ಅರೆತಿಪ್ಪೂರು ಬೆಟ್ಟ, ಕೃಷ್ಣರಾಜಸಾಗರ ವೇಣುಗೋಪಾಲಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ಆಧ್ಯಾತ್ಮಿಕ ಕೇಂದ್ರಗಳು ಜಿಲ್ಲೆಯಲ್ಲಿ ವಿಶ್ವವಿಖ್ಯಾತಿ ಪಡೆದಿದೆ ಎಂದು ಹೇಳಿ ರಂಗನತಿಟ್ಟು, ಕೊಕ್ಕರೆಬೆಳ್ಳೂರು, ಚುಂಚನಗಿರಿಯ ನವಿಲುಧಾಮ, ಗೆಂಡೆಹೊಸಹಳ್ಳಿ ಪಕ್ಷಿಧಾಮ ಇವೆಲ್ಲವೂ ವನ್ಯ ಪ್ರವಾಸಿ ತಾಣಗಳಾಗಿ ಪ್ರವಾಸಿಗರನ್ನು ಗಮನ ಸೆಳೆದಿವೆ ಎಂದು ಬಣ್ಣಿಸಿದರು.

ಸಂಶೋಧಕ ತೈಲೂರು ವೆಂಕಟಕೃಷ್ಣ ಮಾತನಾಡಿ, ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ ಪಕ್ಷಿಗಳು ಮತ್ತು ಗಿಡಗಳನ್ನು ಪೋಷಿಸುವಂತೆ ಮಾಡಬೇಕು. ನಮ್ಮ ಪೂರ್ವಿಕರು, ರಾಜಮಹಾರಾಜರು ಬಹಳಷ್ಟುಕೆರೆಗಳನ್ನು ಸಂರಕ್ಷಣೆ ಮಾಡಿ ಜನರಿಗೆ ಪಕ್ಷಿಗಳು ಸೇರಿದಂತೆ ಜೀವಸಂಕುಲಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಇದೇ ವೇಳೆ ಕೊಕ್ಕರೆಬೆಳ್ಳೂರು ಪರಿಸರವನ್ನು ಸಂರಕ್ಷಿಸಲು ಕೊಕ್ಕರೆ ಬೆಳ್ಳೂರು ಗ್ರಾಮದ ಸುತ್ತ-ಮುತ್ತಲು 1 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೆಜ್ಜೆರ್ಲೆ ಬಳಗದ ಅಧ್ಯಕ್ಷ ನಿಂಗೇಗೌಡ, ಸಾಹಿತಿ ತೈಲೂರು ವೆಂಕಟಕೃಷ್ಣ, ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಿ.ದೇವರಾಜು ಕೊಪ್ಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಬ್ಯ್ಲೂಡಬ್ಯ್ಲೂ ಎಫ್‌ ಇಂಡಿಯಾ ಹಿರಿಯ ಯೋಜನಾಧಿಕಾರಿ ವೈ.ಟಿ.ಲೋಹಿತ್‌, ಗ್ರಾಪಂ ಅಧ್ಯಕ್ಷೆ ಸುಂದ್ರಮ್ಮ, ಉಪಾಧ್ಯಕ್ಷ ನಟರಾಜು, ಸದಸ್ಯೆ ದಿವ್ಯ ರಾಮಚಂದ್ರಶೆಟ್ಟಿ, ಹೆಜ್ಜೆರ್ಲೆ ಬಳಗದ ಅಧ್ಯಕ್ಷ ನಿಂಗೇಗೌಡ, ಸಾಹಿತಿ ತೈಲೂರು ವೆಂಕಟಕೃಷ್ಣ, ಅರಣ್ಯ ಇಲಾಖೆ ಅಧಿಕಾರಿ ಗೋಪಾಲ… ಸೇರಿದಂತೆ ಹಲವರಿದ್ದರು.

ವಿದ್ಯಾರ್ಥಿಗಳು, ಪಕ್ಷಿ ಪ್ರಿಯರು ಭಾಗಿ

ಬೆಳಗ್ಗೆ 7 ಗಂಟೆಗೆ ಪ್ರವಾಸಿ ವಿದ್ಯಾರ್ಥಿಗಳು ಹಾಗೂ ಪಕ್ಷಿ ಪ್ರಿಯರು ಕೊಕ್ಕರೆ ಬೆಳ್ಳೂರು ಹಾಗೂ ಶಿಂಷಾನದಿ ಪಾತ್ರದಲ್ಲಿ ವಿಹರಿಸಿ ಪಕ್ಷಿ ವೀಕ್ಷಣೆ ಮಾಡಿದರು. ಹಕ್ಕಿಗಳ ಬಗ್ಗೆ ಸಂಶೋಧನೆ ನಡೆಸಿರುವ 250 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅರಣ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಹಿಳೆಯರು ಉತ್ಪನ್ನ ಮಾಡಿದ ಪದಾರ್ಥಗಳನ್ನು ಮಾರಾಟ ಮಾಡಲು ಮಳಿಗೆಯನ್ನು ನಿರ್ಮಿಸಿಕೊಂಡಿದ್ದರು. ಇನ್ನು ಕೆಲವರು ವನ್ಯಜೀವಿ ಭಾವಚಿತ್ರವನ್ನು ವಸ್ತು ಪ್ರದರ್ಶನದಲ್ಲಿ ಮಾರಾಟ ಮಾಡಿದರು. ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಬಗ್ಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ವನ್ಯಜೀವಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪರಸ್ಪರ ತಂಡದ ಕಲಾವಿದರಾದ ಹನಿಯಂಬಾಡಿ ಶೇಖರ್‌, ಸಿದ್ದರಾಮು, ಎಚ….ಪಿ.ರಾಮಕೃಷ್ಣ ಪರಿಸರದ ಬಗ್ಗೆ ಗೀತಗಾಯನ ನಡೆಸಿಕೊಟ್ಟರು. 

Follow Us:
Download App:
  • android
  • ios