ಸಮುದಾಯಕ್ಕೆ ಹಬ್ಬಿತಾ ಮಹಾಮಾರಿ ಕೊರೋನಾ? ರ‌್ಯಾಂಡಮ್ ಟೆಸ್ಟ್ ಆರಂಭ
25 ರಿಂದ 50 ವರ್ಷದೊಳಗಿನ, 50 ವರ್ಷದ ನಂತರದ ವಿವಿಧ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ರ‌್ಯಾಂಡಮ್ ಟೆಸ್ಟ್| ವಿಶೇಷವಾಗಿ ತರಕಾರಿ, ಹಣ್ಣಿನ ವ್ಯಾಪಾರಸ್ಥರು, ಕ್ಷೌರಿಕರು, ಮಡಿವಾಳರು, ಟೇಲರ್‌ಗಳನ್ನು ಟೆಸ್ಟ್‌ಗೆ ಗುರಿಪಡಿಸಲಾಗುವುದು|
ಸಿಂಧನೂರು(ಜು.06): ತಾಲೂಕಿನಾದ್ಯಂತ ಕೊರೋನಾ ಸಮುದಾಯದತ್ತ ಹಬ್ಬುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ ಎಂಬ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು, ಬಳ್ಳಾರಿ ಮಾದರಿಯಲ್ಲಿ ರ‍್ಯಾಪಿಡ್ ಕಿಟ್ ಮೂಲಕ ರ‌್ಯಾಂಡಮ್ ಟೆಸ್ಟ್‌ಗಳನ್ನು ಇಂದಿನಿಂದ(ಜು.6)ರಿಂದ ಆರಂಭಿಸಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಭಾನುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ ಒಟ್ಟು 30 ಜನರಿಗೆ ಸೋಂಕು ತಗುಲಿದೆ. ಎಲ್ಲರನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಟೆಸ್ಟ್‌ಗಳ ಫಲಿತಾಂಶ ಒಂದು ವಾರ ತಡವಾಗಿ ಬರುತ್ತಿರುವುದರಿಂದ ಸೋಂಕಿನ ಲಕ್ಷಣ ಇರುವವರು ಎಲ್ಲೆಂದರಲ್ಲಿ ತಿರುಗಾಡುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ರಾಯಚೂರು ಡಿಸಿ ಹಾಗೂ ಎಸ್‌ಪಿಯೊಂದಿಗೆ ಮಾತನಾಡಿದ್ದು, ಕ್ವಾರಂಟೈನ್‌ಲ್ಲಿ ಇರುವವರ ನಿಗಾವಹಿಸಬೇಕು. ಸೀಲ್‌ಡೌನ್ ಪ್ರದೇಶಗಳಿಗೆ ಪಿಡಿಒ, ನಗರಸಭೆ, ಕಂದಾಯ, ಆರೋಗ್ಯ, ಪೊಲೀಸರನ್ನು ನೇಮಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.
ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ಗುರುಪೂರ್ಣಿಮಾ
25 ರಿಂದ 50 ವರ್ಷದೊಳಗಿನ, 50 ವರ್ಷದ ನಂತರದ ವಿವಿಧ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ರ‌್ಯಾಂಡಮ್ ಟೆಸ್ಟ್‌ಗೆ ಅಳವಡಿಸಲಾಗುವುದು. ವಿಶೇಷವಾಗಿ ತರಕಾರಿ, ಹಣ್ಣಿನ ವ್ಯಾಪಾರಸ್ಥರು, ಕ್ಷೌರಿಕರು, ಮಡಿವಾಳರು, ಟೇಲರ್‌ಗಳನ್ನು ಟೆಸ್ಟ್‌ಗೆ ಗುರಿಪಡಿಸಲಾಗುವುದು. ಬಳ್ಳಾರಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ರ‍್ಯಾಪಿಡ್ ಕಿಟ್‌ನ್ನು ಜಿಲ್ಲಾಧಿಕಾರಿಗಳ ಮೂಲಕ ತರಿಸಿ ಸಿಂಧನೂರಿನಲ್ಲಿ ಪ್ರಯೋಗಿಸಲಾಗುವುದು. ಸಾರ್ವಜನಿಕರು ಸಹ ವಿನಾಃ ಕಾರಣ ಮನೆಬಿಟ್ಟು ಹೊರಗೆ ಬರಬಾರದು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಜೆಡಿಎಸ್ ಮುಖಂಡ ನಾಗೇಶ ಹಂಚಿನಾಳ ಕ್ಯಾಂಪ್ ಇದ್ದರು.