ರಾಯಚೂರು(ಜು.06): ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಶಾಢ ಗುರುಪೂರ್ಣಿಮಾ ನಿಮಿತ್ತ ಮೃತ್ತಿಕಾ ಸಂಗ್ರಹಣಾ ಮಹೋತ್ಸವನ್ನು ಭಾನುವಾರ ನಡೆಸಲಾಯಿತು.

ದೇಶಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಶ್ರೀಮಠದ ಪಂಡಿತರು, ವಿದ್ಯಾಂಸರು, ಸಿಬ್ಬಂದಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸಿ ಮಹೋತ್ಸವ ಆಚರಿಸಿದರು. ಬೆಳಗ್ಗೆ ಶ್ರೀಮಠದ ತುಳಸಿ ವನದಲ್ಲಿ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತುಳಸಿಗೆ ವಿಶೇಷ ಪೂಜೆ ನರವೇರಿಸಿ ಮೃತ್ತಿಕೆಯನ್ನು ಸಂಗ್ರಹಿಸಿದರು. ಬಳಿಕ ಸುವರ್ಣ ಪಲ್ಲಕ್ಕಿಯಲ್ಲಿ ಸಂಗ್ರಹಿಸಿದ ಮೃತ್ತಿಕಾವನ್ನಿಟ್ಟು ಸುಕ್ಷೇತ್ರದ ರಸ್ತೆಗಳ ಮೂಲಕ ಶ್ರೀಗುರುರಾಯರ ಬೃಂದಾವನದ ವರೆಗೆ ಮೆರವಣಿಗೆ ಮಾಡಲಾಯಿತು. ನಂತರ ಶ್ರೀಗಳು ಮೃತ್ತಿಕೆಯನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಿದರು.

ರಾಯರ ದರ್ಶನಕ್ಕೆ ನೀಡಿದ ಅವಕಾಶ ರದ್ದು, ಮತ್ತೊಂದು ಡೇಟ್ ಫೀಕ್ಸ್

ಮೃತ್ತಿಕಾ ಮಹೋತ್ಸವದಲ್ಲಿ ಶ್ರೀಮಠದ ವಿದ್ಯಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.