ರಾಮನಗರದ 5 ರು. ವೈದ್ಯ ನಿಧನ!
ರಾಮನಗರದ 5 ರು. ವೈದ್ಯ ಎಸ್.ಎಲ್. ತಿಮ್ಮಯ್ಯ ನಿಧನ| ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕ
ರಾಮನಗರ[ಸೆ.17]: ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕರಾಗಿದ್ದ ಡಾ.ಎಸ್.ಎಲ್.ತಿಮ್ಮಯ್ಯ(92) ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ ಪತ್ನಿ ಸರಸ್ವತಮ್ಮ, ಪುತ್ರ ಒಕ್ಕಲಿಗರ ಸಂಘದ ನಿರ್ದೇಶಕ ನಂದೀಶ್, ನಾಲ್ವರು ಪುತ್ರಿಯರು ಇದ್ದಾರೆ.
ವೃತ್ತಿ ಬದುಕಿನ ಕೊನೆಯ ದಿನಗಳವರೆಗೂ ಕೇವಲ ಐದು ರುಪಾಯಿ ಸಂಭಾವನೆ ಪಡೆದು ರೋಗಿಗಳಿಗೆ ವೈದ್ಯ ಸೇವೆ ನೀಡುವ ಮೂಲಕ ಅವರು ಜನಮಾನಸದಲ್ಲಿ ಹೆಸರು ಗಳಿಸಿದ್ದರು.
ಮೃತರ ಅಂತ್ಯಕ್ರಿಯೆ ಅವರ ಸ್ವ-ಗ್ರಾಮ ಶ್ಯಾನುಭೋನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆಯಲಿದೆ.