ಬಹುದಿನಗಳ ಬೇಡಿಕೆಯಾಗಿದ್ದ ವಿಜಯಪುರ- ಹುಬ್ಬಳ್ಳಿ ರೈಲಿಗೆ ಚಾಲನೆ: ಇಂತಿದೆ ವೇಳಾಪಟ್ಟಿ

 ಜನರ ಬಹುದಿನಗಳ ಬೇಡಿಕೆಯಾಗಿದ್ದ ವಿಜಯಪುರ- ಹುಬ್ಬಳ್ಳಿ ಇಂಟರ್ ಸಿಟಿ ಎಕ್ಸ್‌ಪ್ರೆಸ್‌ ಹಸಿರು ನಿಶಾನೆ ತೋರಿಸಿದ್ದು, ಬಹುದಿನಗಳ ಕನಸು ನನಸಾಗಿದೆ. ಹಾಗಾದ್ರೆ ರೈಲಿನ ವೇಳಾಪಟ್ಟಿಯ ವಿವರ ಈ ಕೆಳಗಿನಂತಿದೆ.

ramesh jigajinagi flag off To vijayapura hubballi intercity Train

ವಿಜಯಪುರ, (ಫೆ.17): ವಿಜಯಪುರ-ಹುಬ್ಬಳ್ಳಿ ನಡುವಿನ ಇಂಟರ್ ಸಿಟಿ ರೈಲಿಗೆ ಚಾಲನೆ ಸಿಕ್ಕಿದೆ. ಇಂದು (ಸೋಮವಾರ) ವಿಜಯಪುರ ರೈಲು ನಿಲ್ದಾಣದಲ್ಲಿ ಸಂಸದ ರಮೇಶ ಜಿಗಜಿಣಗಿ ರೈಲು ಸೇವೆಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಎಫ್.ಚೌವ್ಹಾಣ, ವೀರಣ್ಣ ಪಿ.ಚರಂತಿಮಠ, ಲೋಕಸಭಾ ಸದಸ್ಯರಾದ ರಮೇಶ ಜಿಗಜಿಗಣಗಿ, ಪಿ.ಸಿ.ಗದ್ದಿಗೌಡರ,ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ, ವಿಧಾನಪರಿಷತ್ ಸದಸ್ಯರಾದ ಸುನೀಲಗೌಡ ವಿ. ಪಾಟೀಲ, ಹನಮಂತ ನಿರಾಣಿ, ಅರುಣ ಶಹಾಪೂರ, ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಹಾಗೂ ಮುಖಂಡರು, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ರೈಲ್ವೆ ಸಚಿವರ ತವರು ಜಿಲ್ಲೆಯಲ್ಲೇ ರೈಲ್ವೆ ಪ್ರಯಾಣಿಕರ ಜೀವಕ್ಕಿಲ್ಲ ರಕ್ಷಣೆ! 

 07330 ನಂಬರಿನ ರೈಲುಗಾಡಿ ಸಂಖ್ಯೆ ಪ್ರತಿದಿನ ಬೆಳಗ್ಗೆ 5.30ಕ್ಕೆ ವಿಜಯಪುರದಿಂದ ಹೊರಡುವ ರೈಲು 11.05ಕ್ಕೆ ಹುಬ್ಬಳ್ಳಿ ತಲುಪಲಿದೆ. ಅಂದೇ ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ರಾತ್ರಿ 11.40ಕ್ಕೆ ವಿಜಯಪುರ ತಲುಪಲಿದೆ.

ಈ ರೈಲು ವಿಜಯಪುರದಿಂದ ಹೊರಡುವ ರೈಲು ಬಸವನಬಾಗೇವಾಡಿ, ಆಮಲಟ್ಟಿ, ಬಾಗಲಕೋಟೆ, ಬಾದಾಮಿ, ಮಲ್ಲಾಪುರ, ಗದಗ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡು ಹುಬ್ಬಳ್ಳಿಯನ್ನು ತಲುಪಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಹಲವು ವರ್ಷಗಳಿಂದ ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲಿಗೆ ಬೇಡಿಕೆ ಇತ್ತು. ಈ ಸಂಬಂಧ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ನೈಋತ್ಯ ರೈಲ್ವೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊನೆಗೂ ರೈಲು ಓಡಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos
Follow Us:
Download App:
  • android
  • ios