ಬೆಳಗಾವಿ (ನ.16): ನಾನು ಬಿಜೆಪಿ ಸೇರುವ ಹಿಂದಿನ ದಿನದ ರಾತ್ರಿ ಒಂದು ನಿಮಿಷವೂ ಕೂಡ ನಿದ್ದೆ ಮಾಡಿಲ್ಲ ಎಂದು ರಮೇಶ್ ಜಾರಕಿಹೊಳಿ  ಹೇಳಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ನಾನು ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಕಟ್ಟಾ ಅಭಿಮಾನಿ, ನನ್ನ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು. 

ನನ್ನ ನೋವನ್ನು ನುಂಗಿಕೊಳ್ಳುವ ಅನಿವಾರ್ಯತೆ ಇದೆ. ಒಂದು ವೇಳೆ ನಾನು ಕಾಂಗ್ರೆಸಿನಲ್ಲೇ ಉಳಿದಿದ್ದರೆ ನಿರ್ನಾಮ ಮಾಡಿ ಬಿಡುತ್ತಿದ್ದರು ಎಂದು ಕಾಂಗ್ರೆಸ್ ಜೊತೆಗಿನ ನಂಟು ನೆನೆದು ರಮೇಶ್ ಜಾರಕಿಹೊಳಿ ಭಾವುಕರಾದರು. 

ಕಾಂಗ್ರೆಸ್ ನಲ್ಲಿ ಬ್ಯಾಗ್ ಹಿಡಿದು ಬಾಗಿಲು ಕಾಯುವವರು ಮಾತ್ರವೇ ಲೀಡರ್ ಆಗ್ತಾರೆ. ಪಕ್ಷದಲ್ಲಿ ಮಾಸ್ ಲೀಡರ್ ಗಳಿಗೆ ಯಾವುದೇ ಬೆಲೆ ಇಲ್ಲ. ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಕ್ಷದಲ್ಲಿ ಏನೇ ಆದರೂ ಕೂಡ ಮಲ್ಲಿಕಾರ್ಜುನ ಖರ್ಗೆ ನೋಡುವುದಿಲ್ಲ. ಸಿದ್ದರಾಮಯ್ಯ ದರ್ಪದ, ಡಿಕೆಶಿ ಪೋಸ್ ಕೋಡೋ ಲೀಡರ್ ಮಾತ್ರ.

ಮಲ್ಲಿಕಾರ್ಜುನ ಖರ್ಗೆ ಬ್ಲ್ಯಾಕ್ ಮೆಲ್ ಮಾಡಲ್ಲ ಧೈರ್ಯನು ಮಾಡಲ್ಲ. ಸಿದ್ದರಾಮಯ್ಯ ಎರಡನ್ನು ಮಾಡಿ ಕಾಂಗ್ರೆಸ್ ನಲ್ಲಿ ಸಿಎಂ ಆದವರು.

ನಿಷ್ಠಾವಂತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ. ಗೋಕಾಕ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಹೇಳಿದರು.

"