Religious Conversion: ಮತಾಂತರ ಕಾಯ್ದೆ ವಿರೋಧಿಸಿದರೆ ಕಾಂಗ್ರೆಸ್‌ ಭವಿಷ್ಯಕ್ಕೇ ಪೆಟ್ಟು:ರಂಭಾಪುರಿ ಶ್ರೀ

*  ಮತಾಂತರ ಎನ್ನುವುದು ​ಇ​ತ್ತೀ​ಚೆಗೆ ಮಿತಿ ಮೀರಿದೆ
*  ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ?
*  ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡುತ್ತಿರುವುದು ಸ್ವಾಗತಾರ್ಹ
 

Rambhapuri Swamiji React on Congress Oppose Conversion Prohibition Act grg

ಹರಪನಹಳ್ಳಿ(ಡಿ.18):  ಮತಾಂತರ ತಡೆಗೆ ಕಠಿಣ ಕಾಯ್ದೆ ಜಾರಿಗೆ ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ(Government of Karnataka) ಕ್ರಮವನ್ನು ವಿರೋಧಿಸಿದರೆ ಕಾಂಗ್ರೆಸ್(Congress) ಪಕ್ಷ​ದ ಭವಿಷ್ಯಕ್ಕೆ ಪೆಟ್ಟು ಬೀಳ​ಲಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ(Dr Veerasomeshwara Shivacharya Swamiji) ಹೇಳಿದ್ದಾರೆ.  ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವ​ರು, ಮತಾಂತರ(Conversion) ಎನ್ನುವುದು ​ಇ​ತ್ತೀ​ಚೆಗೆ ಮಿತಿ ಮೀರಿದೆ. ಶಾಸಕ ಗೂಳಿಹಟ್ಟಿಶೇಖರ ಅವರ ತಾಯಿಯನ್ನೇ ಮತಾಂತರ ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂಬುದು ಭಯಾನಕ ಎಂದರು.

ಯಾರೇ ಆಗಲಿ ಓಟಿಗಾಗಿ(Vote) ಬೆಂಬಲಿಸಬೇಕು ಎನ್ನುವುದು ಬರಬಾರದು. ಕಾಯ್ದೆಗೆ ವಿರೋಧ ಮಾಡುವುದರ ಬದಲು ರೈತರ(Farmers) ಹಿತ ಕಾಪಾಡುವ ಹಾಗೂ ನಾಡಿನ ಜಲ್ವಂತ ಸಮಸ್ಯೆಗಳ ನಿವಾರಣೆಗೆ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು. ಮತಾಂತರದಿಂದ ಜಾತಿ ಸಂಘರ್ಷ ವ್ಯಾಪಕವಾಗುತ್ತದೆ. ಮತಾಂತರ ಮಾಡುವವರು, ಅದಕ್ಕೆ ಪ್ರೋತ್ಸಾಹ ನೀಡುವವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

Anti Conversion Bill : ಸದ್ಯಕ್ಕಿಲ್ಲ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

ರಾಜ್ಯ ಬಿಜೆಪಿ ಸರ್ಕಾರ(BJP Government) ಮತಾಂತರ ತಡೆಗೆ ಕಠಿಣ ಕಾನೂನು ತರಲು ವಿಧಾನಸಭಾ ಅಧಿವೇಶನದಲ್ಲಿ(Assembly Session) ವಿಧೇಯಕ ಮಂಡನೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಯಾವ ರೀತಿ ಕಾಯ್ದೆ ತರಲಾಗುತ್ತದೆ ಎಂಬ ರೂಪುರೇಷೆಯನ್ನು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

ಶಾಲಾ ಮಕ್ಕಳಿಗೆ(School Children) ಮೊಟ್ಟೆ(Eggs) ವಿತರಣೆ ತಪ್ಪು ಎಂದ ಅವರು ವಿದ್ಯಾರ್ಥಿಗಳಿಗೆ(Students) ಸಾತ್ವಿಕ ಮನೋಭಾವನೆ ಬೆಳೆಸಬೇಕು. ಮೊಟ್ಟೆಯಿಂದಲೇ ಪೌಷ್ಟಿಕ ಆಹಾರ ಸಿಗುತ್ತದೆ ಎಂಬುದು ಒಪ್ಪಲು ಆಗು​ವು​ದಿಲ್ಲ. ಅದರ ಬದಲಿಗೆ ಮೊಟ್ಟೆಗೆ ಸಮಾನಂತರ ಆಹಾರ ಕೊಡಬೇ​ಕು. ಇಲ್ಲದಿದ್ದ​ರೆ ಹಣದ ರೂಪದಲ್ಲಿ ಕೊಡಬಹುದು. ಮೊಟ್ಟೆವಿತರಣೆ ಕೂಡಲೇ ನಿಲ್ಲಿಸಬೇಕು. ಈ ಸಂಬಂಧ ಕೆಲವೊಂದು ಮಠಾಧೀಶರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದರು.

ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ?

ಮತಾಂತರ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲೇ ಮಂಡನೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

Karnataka Land Conversion : ಎಸ್‌ಸಿ, ಎಸ್ಟಿ ಜಮೀನು ಪರಿವರ್ತನೆ ಇಲ್ಲ: ಅಶೋಕ್‌

ಆದರೆ ಬಿಜೆಪಿ ನಾಯಕರು ಸರ್ಕಾರದ ಸಮರ್ಥನೆಗೆ ಇಳಿದಿದ್ದಾರೆ. ಈ ನಡುವೆ, ಕ್ರೈಸ್ತ ಸಮುದಾಯದ ಮುಖಂಡ ರೊನಾಲ್ಡ್ಕೊಲಾಸೋ ನೇತೃತ್ವದ ಕೈಸ್ತ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಮನವಿ ಮಾಡಿದೆ. ಕೆಲ ಮುಸ್ಲಿಂ ಸಂಘಟನೆಗಳು(Muslim organizations) ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಮಂಗಳೂರಿನಲ್ಲಿ(Mangaluru Suicide) ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ಮುತಾಲಿಕ್(Pramod Mutalik) ಕೂಡ ಮತಾಂತರ ನಿಷೇಧ (ಕಾಯ್ದೆ) ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಒಂದು ವೇಳೆ ಮತಾಂತರ ನಿಷೇಧ ಕಾಯ್ದೆ ಜಾರಿಯಾಗದೇ ಹೋದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರಲು ಬದ್ಧವಿದೆ. ಬೆಳಗಾವಿ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಮಾಡಲಾಗುವುದು. ವೋಟಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತಾಂತರದ ಪರ ನಿಲ್ಲುತ್ತಾರೆ. ಇವರ ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ? ಎಂದು ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಪ್ರಶ್ನಿಸಿದ್ದಾರೆ. 
 

Latest Videos
Follow Us:
Download App:
  • android
  • ios