Asianet Suvarna News Asianet Suvarna News

ರಾಮನಗರ : ಸಂಸ​ದರು ಸೂಚನೆ ನೀಡಿ​ದರು ಬಾರದ ಎಸ್ಪಿ!

ಸಂಸದ ಡಿ.ಕೆ.​ ಸು​ರೇಶ್‌  ರಾಮನಗರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ದಿಶಾ ಸಭೆಗೆ ಆಗ​ಮಿ​ಸು​ವಂತೆ ಸೂಚನೆ ನೀಡಿ​ದರು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಅನೂಪ್‌ ಎ. ಶೆಟ್ಟಿ ಗೈರಾದ ಘಟನೆ ನಡೆಯಿತು.
 

Ramanagara SP Anoop Shetty Absence To ZP Meeting
Author
Bengaluru, First Published Jan 19, 2020, 9:14 AM IST
  • Facebook
  • Twitter
  • Whatsapp

ರಾಮ​ನ​ಗರ [ಜ.19]:  ಜಿಲ್ಲೆ​ಯಲ್ಲಿ ಅಪ​ರಾಧ ಪ್ರಕ​ರ​ಣ​ಗ​ಳನ್ನು ತಡೆ​ಯಲು ಪೊಲೀಸ್‌ ಇಲಾಖೆ ಕೈಗೊಂಡಿ​ರುವ ಕ್ರಮ​ಗಳ ಕುರಿತು ಮಾಹಿತಿ ಪಡೆ​ಯಲು ಸಂಸದ ಡಿ.ಕೆ.​ ಸು​ರೇಶ್‌ ದಿಶಾ ಸಭೆಗೆ ಆಗ​ಮಿ​ಸು​ವಂತೆ ಸೂಚನೆ ನೀಡಿ​ದರು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಅನೂಪ್‌ ಎ. ಶೆಟ್ಟಿಗೈರಾದ ಪ್ರಸಂಗ ನಡೆ​ಯಿತು.

ನಗ​ರದ ಜಿಲ್ಲಾ ಪಂಚಾ​ಯಿತಿ ಸಭಾಂಗ​ಣ​ದಲ್ಲಿ ಸಂಸದ ಡಿ.ಕೆ. ​ಸು​ರೇಶ್‌ ಅಧ್ಯ​ಕ್ಷ​ತೆ​ಯಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತ ರಾಮನಗರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಅನೂಪ್‌ ಎ. ಶೆಟ್ಟಿಗೈರಾ​ಗಿ​ದ್ದರು.

ಸಭೆ​ಯಲ್ಲಿ ಚರ್ಚೆ ವೇಳೆ ಸಂಸದರು, ಪೊಲೀಸ್‌ ಇಲಾಖೆ ವರದಿ ಮೇರೆಗೆ ರಾಷ್ಟ್ರೀಯ ಹೆದ್ದಾ​ರಿ​ಯ ಬದಿ​ಯಲ್ಲಿನ ಹೋಟೆಲ್‌, ಅಂಗಡಿ ಮುಂಗ​ಟ್ಟು​ಗ​ಳನ್ನು ರಾತ್ರಿ 11ಗಂಟೆ​ಯೊ​ಳಗೆ ಮುಚ್ಚಲು ಆದೇಶ ಹೊರ​ಡಿ​ಸಿ​ದ್ದೀರಿ. ಜಿಲ್ಲೆ​ಯಲ್ಲಿ ಅಪ​ರಾಧ ಪ್ರಕ​ರ​ಣ​ಗಳು ಎಷ್ಟುಕಡಿ​ಮೆ​ಯಾ​ಗಿವೆ, ಅವು​ಗ​ಳನ್ನು ತಡೆ​ಯಲು ಏನೆಲ್ಲ ಕ್ರಮ​ಗ​ಳನ್ನು ಕೈಗೊಂಡಿ​ದ್ದಾರೆ ಎಂಬು​ದರ ಮಾಹಿತಿ ಬೇಕಿದೆ. ಜಿಲ್ಲಾ ಎಸ್ಪಿ ಅವ​ರಿಗೆ ಸಭೆ​ಯಲ್ಲಿ ಪಾಲ್ಗೊ​ಳ್ಳಲು ತಿಳಿಸುವಂತೆ ಜಿಲ್ಲಾ​ಧಿ​ಕಾರಿ ಅರ್ಚನಾ ಅವ​ರಿಗೆ ಸೂಚನೆ ನೀಡಿ​ದರು.

ಆಗ ಜಿಲ್ಲಾ​ಧಿ​ಕಾ​ರಿ​ಗಳು, ಮಧ್ಯಾಹ್ನ 1 ಗಂಟೆ​ಯಾ​ಗಿದೆ. ಈಗ ಬರಲು ಹೇಳ​ಬೇಕೇ ಎಂದು ಕೇಳಿ​ದರು. ಇದಕ್ಕೆ ಸಂಸ​ದರು, ಮಧ್ಯಾಹ್ನ 3 ಗಂಟೆ​ಯಾ​ದರೂ ಪರ​ವಾ​ಗಿಲ್ಲ ಬರಲು ಹೇಳು​ವಂತೆ ತಿಳಿ​ಸಿ​ದರು. ಅದ​ರಂತೆ ಜಿಲ್ಲಾ​ಧಿ​ಕಾ​ರಿ​ಗಳು ದೂರ​ವಾಣಿ ಮೂಲ​ಕ ಎಸ್ಪಿ ಅವ​ರನ್ನು ಸಂಪ​ರ್ಕಿಸಿ ಸಭೆಗೆ ಆಗ​ಮಿ​ಸು​ವಂತೆ ಹೇಳಿ​ದರು.

ರಾಮನಗರದಲ್ಲಿ ಡಿಕೆಸು ಎದುರೆ ಶಾಸಕ-ಜಿಲ್ಲಾಧಿಕಾರಿ ಜಟಾಪಟಿ.

ಟ್ರಕ್‌ ಚಾಲ​ಕರು, ಕೂಲಿ ಕಾರ್ಮಿ​ಕರಂತಹ ಬಡ​ವರು ರಾತ್ರಿ ವೇಳೆ ವಾಹ​ನ​ಗ​ಳಲ್ಲಿ ಸಂಚ​ರಿ​ಸು​ತ್ತಾರೆ. ರಾತ್ರಿ 11 ಗಂಟೆ​ಯೊ​ಳಗೆ ಹೋಟೆಲ್‌ಗಳನ್ನು ಮುಚ್ಚಿ​ಸಿ​ದರೆ ಅವ​ರೆ​ಲ್ಲರೂ ಏನು ಮಾಡ​ಬೇಕು. ಬಡ​ವರ ಹೊಟ್ಟೆಮೇಲೆ ಹೊಡೆ​ಯು​ವುದು ಸರಿ​ಯಲ್ಲ. ಯಾವು​ದಾ​ದರು ಹೋಟೆಲ್‌ , ಅಂಗ​ಡಿ​ಗಳ ಬಳಿ ಅಪ​ರಾಧ ಪ್ರಕ​ರ​ಣ​ಗಳು ನಡೆ​ದಿ​ದ್ದರೆ ಅದರ ಮಾಲೀ​ಕ​ರಿಗೆ ಎಚ್ಚ​ರಿಕೆ ನೀಡಬೇಕು ಎಂದು ಶಾಸಕ ಎ.ಮಂಜು​ನಾಥ್‌ ಸಲಹೆ ನೀಡಿ​ದರು.

ಸಂಸದ ಡಿ.ಕೆ.​ಸು​ರೇಶ್‌ , ಹೆದ್ದಾರಿ ಬದಿ​ಯಲ್ಲಿ ಹೋಟೆಲ್‌ಗಳನ್ನು ಮುಚ್ಚಿ​ಸಿ​ದಾ​ಕ್ಷ​ಣಕ್ಕೆ ಅಪ​ರಾಧ ಪ್ರಕ​ರ​ಣ​ಗಳ ಸಂಖ್ಯೆ ಕಡಿ​ಮೆ​ಯಾ​ಗುತ್ತದೆ. ಈಗಾ​ಗಲೇ ಸಾಕಷ್ಟನ್ನು ನಿಯಂತ್ರಣ ಮಾಡ​ಲಾ​ಗಿದೆ ಎಂದು ತಿಳಿ​ದಿ​ದ್ದೇನೆ. ಅದರ ಸಮಗ್ರ ಮಾಹಿತಿಯನ್ನು ಎಸ್ಪಿ ಅವರೇ ಬಂದು ಹೇಳಲಿ ಎಂದರು. ಆದರೆ, ಸಭೆ ಮುಗಿ​ದರೂ ಎಸ್ಪಿ ಅನೂಪ್‌ ಶೆಟ್ಟಿಮಾತ್ರ ಬರಲೇ ಇಲ್ಲ.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಂಸದ ಡಿ.ಕೆ.ಸುರೇಶ್..

ಕಳೆದ ದಿಶಾ ಸಭೆ​ಯ​ಲ್ಲಿಯೂ ಸಂಸದ ಡಿ.ಕೆ.​ ಸು​ರೇಶ್‌ ಅವರು ಎಸ್ಪಿ ಅನೂಪ್‌ ಶೆಟ್ಟಿವಿರುದ್ಧ ಕಿಡಿ ಕಾರಿ​ದ್ದರು. ಇಂದಿನ ಸಭೆ​ಯ​ಲ್ಲಿಯೂ ಎಸ್ಪಿ​ರ​ವರು ಗೈರಾ​ಗಿದ್ದಕ್ಕೆ ಸಂಸ​ದರು ಕಿಡಿ ​ಕಾ​ರಿ​ದರು.

ಮೊಬೈಲ್‌ನಲ್ಲಿ ಕಾಲ​ಹ​ರಣ:  ದಿಶಾ ಸಭೆ​ಯಲ್ಲಿ ಸಂಸದ ಡಿ.ಕೆ. ​ಸು​ರೇಶ್‌ ಅಭಿ​ವೃದ್ಧಿ ವಿಚಾ​ರ​ವಾಗಿ ಅಧಿ​ಕಾ​ರಿ​ಗ​ಳಿಂದ ಮಾಹಿತಿ ಪಡೆದು ಚರ್ಚೆ ನಡೆ​ಸು​ತ್ತಿ​ದ್ದರೆ ಮತ್ತೊಂದೆಡೆ ಕೆಲ ಅಧಿ​ಕಾ​ರಿ​ಗಳು ಮೊಬೈಲ್‌ನಲ್ಲಿ ತಲ್ಲೀ​ನ​ರಾಗಿ ಕಾಲ​ಹ​ರಣದಲ್ಲಿ ತೊಡ​ಗಿ​ದ್ದರು.

ಕೆಲ ಇಲಾ​ಖೆ​ಗಳ ಅಧಿ​ಕಾ​ರಿ​ಗಳು ಅಮೆ​ಜಾನ್‌ನಲ್ಲಿ ವಸ್ತು​ಗಳ ಖರೀ​ದಿ​ಯಲ್ಲಿ ಬ್ಯುಸಿ​ಯಾ​ಗಿ​ದ್ದರೆ, ಇನ್ನು ಕೆಲ​ವರು ವಾಟ್ಸ್‌ ಆಪ್‌ ನಲ್ಲಿ ಚಾಟಿಂಗ್‌ನಲ್ಲಿ ತೊಡ​ಗಿ​ದ್ದರು. ಈ ವಿಚಾ​ರ​ವನ್ನು ತಾಲೂಕು ಪಂಚಾ​ಯಿತಿ ಅಧ್ಯಕ್ಷ ಗಾಣ​ಕಲ್‌ ನಟ​ರಾಜು ಸಂಸ​ದರ ಗಮ​ನಕ್ಕೆ ತಂದರು.

ಆಗ ಸಂಸದ ಡಿ.ಕೆ.​ ಸು​ರೇಶ್‌ ಅವರು ಮುಂದಿನ ದಿಶಾ ಸಭೆಗೆ ಬರು​ವಾಗ ಅಧಿ​ಕಾ​ರಿ​ಗಳು ತಮ್ಮ ಮೊಬೈಲ್‌ಗಳನ್ನು ಕಚೇ​ರಿ​ಯಲ್ಲಿ ಇಟ್ಟು ಬರ​ಬೇಕು. ಇಲ್ಲವೇ ಜಿಲ್ಲಾ​ಧಿ​ಕಾ​ರಿ​ಗಳು ಅವ​ರೆ​ಲ್ಲರ ಮೊಬೈಲ್‌ಗಳನ್ನು ಒಂದೆಡೆ ಸಂಗ್ರ​ಹಿಸಲು ಸೂಚನೆ ನೀಡ​ಬೇಕು ಎಂದು ಖಡಕ್‌ ವಾರ್ನಿಂಗ್‌ ನೀಡಿ​ದ​ರು.

Follow Us:
Download App:
  • android
  • ios