ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಂಸದ ಡಿ.ಕೆ.ಸುರೇಶ್
ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿಕೆ ಸುರೇಶ್ ಕರ್ನಾಟಕ ಬಿಜೆಪಿ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ತಮ್ಮ ಸಹೋದರ ಕೆಪಿಸಿಸಿಗೆ ಸಮರ್ಥ ವ್ಯಕ್ತಿ ಎಂದೂ ಹೇಳಿದ್ದಾರೆ.
ರಾಮನಗರ [ಜ.18]: ಕೆಪಿಸಿಸಿಯಲ್ಲಿ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಬೇಕೆಂದು ವರಿಷ್ಠರಿಗೆ ಸಲಹೆ ನೀಡಿದ್ದೆ ಡಿ.ಕೆ.ಶಿವಕುಮಾರ್ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ.ಸುರೇಶ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆ ಶಿವಕುಮಾರ್ ಅವರಿಗೆ ಒಲಿಯಲಿದೆ ಎನ್ನುವ ಸೂಚನೆ ಇದ್ದು, ಅವರು ಅಧಿಕಾರ ನಿರ್ವಹಿಸಲು ಸಮರ್ಥರಿದ್ದಾರೆ. ಸಮರ್ಥರಿಗೆ ಹೈ ಕಮಾಂಡ್ ಅಧ್ಯಕ್ಷ ಸ್ಥಾನ ನೀಡಲಿದೆ ಎಂದು ಹೇಳಿದರು.
ಡೆಲ್ಲಿ ಸುದ್ದಿ: ಕೆಪಿಸಿಸಿ ಅಧ್ಯಕ್ಷ ಹೆಸರು ಪ್ರಕಟಿಸಲು ಕಾರ್ಯಾಧ್ಯಕ್ಷರೇ ಅಡ್ಡಿ!...
ಇನ್ನು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧವೂ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದು, ರಾಮನಗರಕ್ಕೆ ಮೈತ್ರಿ ಸರ್ಕಾರದ ಅವದಿಯಲ್ಲಿ ಮಂಜೂರಾಗಿದ್ದ ಎಲ್ಲಾ ಯೋಜನೆಗಳನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದರು.
ಡಿಕೆ ಶಿವಕುಮಾರ್‌ಗೆ KPCC ಅಧ್ಯಕ್ಷ ಪಟ್ಟ ಒಲಿಯಲು 5 ಕಾರಣಗಳು...
ರಾಮನಗರದ ಯೋಜನೆಗಳು ಮರು ಜಾರಿಯಾಗದೇ ಇದ್ದಲ್ಲಿ ಸದನದ ಒಳಗೂ ಹೊರಗೂ ಹೋರಾಟ ನಡೆಸಲಾಗುವುದು ಎಂದು ಡಿ.ಕೆ.ಸುರೇಶ್ ಹೇಳಿದರು.
ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಗೊಂದಲ ಸೃಷ್ಟಿಯಾಗಿದ್ದು ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಘೋಷಣೆಯೂ ಕೂಡ ವಿಳಂಬವಾಗುತ್ತಿದೆ.