Asianet Suvarna News Asianet Suvarna News

ರಾಮನಗರಕ್ಕೆ ಬೆಂಗ್ಳೂರು ಬ್ರಾಂಡ್ ಬೇಕಿಲ್ಲ: ಮಾಜಿ ಸಚಿವ ಅಶ್ವತ್ಥನಾರಾಯಣ

ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತವರ ರಾಮನಗರ ಮುಖಂಡರ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿರುವ ಕೋರಿಕೆಯನ್ನು ಯಾರೂ ಒಪ್ಪುವಂತಹದ್ದಲ್ಲ. ಹೆಸರು ಬದಲಾವಣೆಗೆ ರಿಯಲ್ ಎಸ್ಟೇಟ್ ಕಾರಣ ನೀಡಲಾಗಿದೆ. ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕೊಡುಗೆಯನ್ನು ನೀಡದೆ ಕೇವಲ ರಾಜಕೀಯ ಉದ್ದೇಶಕ್ಕಾಗಿ ಜಿಲ್ಲೆಯ ಹೆಸರು ಬಳಸಿಕೊಳ್ಳಲಾಗುತ್ತಿದೆ' ಎಂದು ಟೀಕಾಪ್ರಹಾರ ನಡೆಸಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ 
 

ramanagara does not need the bengaluru brand Says former minister dr cn ashwath narayan grg
Author
First Published Jul 10, 2024, 12:28 PM IST | Last Updated Jul 10, 2024, 12:36 PM IST

ಬೆಂಗಳೂರು(ಜು.10):  ರಾಮನಗರಕ್ಕೆ ರಾಮನ ಬ್ಯಾಂಡ್ ಇದ್ದು, ಬೆಂಗಳೂರು ಬ್ರಾಂಡ್ ಅಗತ್ಯವಿಲ್ಲ. ರಾಮ ನಗರ ಜಿಲ್ಲೆ ಹೆಸರು ಬದಲಾವಣೆಗೆ ಯಾವುದೇ ಕಾರಣಕ್ಕೂ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವು ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆಗೆ ಮುಂದಾದರೆ ಬಿಜೆಪಿ- ಜೆಡಿಎಸ್‌ ಜಂಟಿಯಾಗಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. 'ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತವರ ರಾಮನಗರ ಮುಖಂಡರ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿರುವ ಕೋರಿಕೆಯನ್ನು ಯಾರೂ ಒಪ್ಪುವಂತಹದ್ದಲ್ಲ. ಹೆಸರು ಬದಲಾವಣೆಗೆ ರಿಯಲ್ ಎಸ್ಟೇಟ್ ಕಾರಣ ನೀಡಲಾಗಿದೆ. ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕೊಡುಗೆ ಯನ್ನು ನೀಡದೆ ಕೇವಲ ರಾಜಕೀಯ ಉದ್ದೇಶಕ್ಕಾಗಿ ಜಿಲ್ಲೆಯ ಹೆಸರು ಬಳಸಿಕೊಳ್ಳಲಾಗುತ್ತಿದೆ' ಎಂದು ಟೀಕಾಪ್ರಹಾರ ನಡೆಸಿದರು.

ಗೆದ್ದ ಬಳಿಕ ಮತ್ತೆ ರಾಮನಗರ ಎಂದು ನಾಮಕರಣ: ಕುಮಾರಸ್ವಾಮಿ

ಉಪ ಮುಖ್ಯಮಂತ್ರಿಗಳು ಜಿಲ್ಲೆಗೆ ಹೆಸರು ಬದಲಾವಣೆ ಮಾಡುವುದೇ ಸಾಧನೆ ಎಂದುಕೊಂಡು ತುಷ್ಟಿಕರಣ ನೀತಿ ಅನುಸರಿಸುತ್ತಿದ್ದಾರೆ. ಭ್ರಷ್ಟಾಚಾರ, ಹಣ ಮಾಡು ವುದು ಬಿಟ್ಟರೆ ಅವರಿಗೆ ಬೇರೇನೂ ಬರುವುದಿಲ್ಲ. ಅಲ್ಲದೇ, ರಾಮನಗರ ಜಿಲ್ಲೆಯ ಹೆಸ ರನ್ನು ಬದಲಿಸಲು ಅಲ್ಲಿನ ಜನ ಒಪ್ಪುವುದಿಲ್ಲ. ರಾಜ್ಯ ಸರ್ಕಾರವು ಹಲವು ಹಗರಣಗಳಲ್ಲಿ ತೊಡಗಿದ್ದು, ಅವುಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದರ ದಿಕ್ಕು ತಪ್ಪಿಸಲು ರಾಮನಗರ ವಿಚಾರವನ್ನು ತೆಗೆದುಕೊಂಡು ಬರಲಾಗಿದೆ' ಎಂದು ಟೀಕಿಸಿದರು.

Latest Videos
Follow Us:
Download App:
  • android
  • ios