ರಾಮನಗರ (ಅ.04):  ಹಿಂದುಳಿದ ವರ್ಗಗಳ ಮುಖಂಡ ವಿ.ರಾಜು ಮತ್ತೆ ಮಾತೃ ಪಕ್ಷ ಬಿಜೆಪಿಗೆ ಮರಳಿದ್ದು, ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು.

ನಗರದ ಅರ್ಕೇಶ್ವರ ಬಡಾವಣೆಯಲ್ಲಿನ ತಮ್ಮ ನಿವಾಸದಲ್ಲಿ ಬಿಜೆಪಿ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ರಾಜು, ಕಳೆದ ಮೂವತ್ತು ವರ್ಷಗಳಿಂದಲೂ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತನಾಗಿ ದುಡಿದಿದ್ದೇನೆ ಎಂಬ ಹೆಮ್ಮೆ ನನ್ನ ಪಾಲಿಗೆ ಇದ್ದು, ಎರಡು ವರ್ಷ ಮಾತ್ರ ಅನ್ಯ ಪಕ್ಷಕ್ಕೆ ಹೋಗಿದ್ದು, ಅದೊಂದು ಕೆಟ್ಟಕನಸಂತೆ ನನ್ನನ್ನು ಕಾಡುತ್ತಿತ್ತು.

ರಾತ್ರೋ ರಾತ್ರಿ RR ನಗರದಲ್ಲಿ ಡಿಕೆ ಬ್ರದರ್ಸ್: ಅಚ್ಚರಿ ಅಭ್ಯರ್ಥಿ ಮನೆಗೆ ಭೇಟಿ...!

ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಮಾತೃಪಕ್ಷ ಬಿಜೆಪಿ ಸೇರಿದ್ದೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಹುಲು​ವಾಡಿ ದೇವ​ರಾಜು ಅವರು ಪಕ್ಷದ ಬಾವುಟ ನೀಡುವ ಮೂಲಕ ವಿ.ರಾಜು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆಂಗೇರಿ ಸುರೇಶ್‌, ನಗರ ಮಂಡಲ ಅಧ್ಯಕ್ಷ ಪಿ.ಶಿವಾನಂದ್‌, ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಮಾದಾಪುರ ಜಗದೀಶ್‌ ಉಪಸ್ಥಿತರಿದ್ದರು.