ರಾಮಮಂದಿರದೊಂದಿಗೆ ರಾಮರಾಜ್ಯ ಸ್ಥಾಪನೆಯಾಗಬೇಕು - ಪೇಜಾವರ ಶ್ರೀ
ರಾಮ ಮಂದಿರ ನಿರ್ಮಾಣ ಮಾಡುವುದು ದೊಡ್ಡ ಸಾಧನೆ ಅಲ್ಲ, ರಾಮಮಂದಿರದ ನಂತರ ರಾಮ ರಾಜ್ಯವೂ ಸ್ಥಾಪನೆಯಾಗಬೇಕಾಗಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾಗಿರುವ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
ಉಡುಪಿ (ನ.8) : ರಾಮ ಮಂದಿರ ನಿರ್ಮಾಣ ಮಾಡುವುದು ದೊಡ್ಡ ಸಾಧನೆ ಅಲ್ಲ, ರಾಮಮಂದಿರದ ನಂತರ ರಾಮ ರಾಜ್ಯವೂ ಸ್ಥಾಪನೆಯಾಗಬೇಕಾಗಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾಗಿರುವ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
ವೃತ್ತಿಯನ್ನೇ ದೇವರಂತೆ ಪೂಜಿಸಿ; ಪೇಜಾವರಶ್ರೀ
ಆಯೋಧ್ಯ ಪ್ರಭು ಶ್ರೀರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆ ಉಡುಪಿಗೆ ಆಗಮಿಸಿತು, ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀಗಳು ಸಾನಿಧ್ಯ ವಹಿಸಿ ಸಂದೇಶ ನೀಡಿದರು.
ನಮ್ಮ ಸುಖ ಇನ್ನೊಬ್ಬರಿಗೆ ಕಷ್ಟವಾಗದಂತೆ ಬದುಕುವುದೇ ರಾಮನ ಆದರ್ಶವಾಗಿತ್ತು. ಈ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ರಾಮರಾಜ್ಯ ಸ್ಥಾಪನೆಯಾಗುತ್ತದೆ, ಇದು ತದ್ವಿರುದ್ಧವಾದರೇ ರಾವಣ ರಾಜ್ಯವಾಗುತ್ತದೆ ಎಂದವರು ಎಚ್ಚರಿಸಿದರು.
ದೇಶದಾದ್ಯಂತ ಸಂಚರಿಸುತ್ತಿರುವ ಈ ರಥವನ್ನು ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಸಾವಿರಾರು ಮಂದಿ ಭಕ್ತರು ಭವ್ಯವಾಗಿ ಭಕ್ತಿಯಿಂದ ಸ್ವಾಗತಿಸಿದರು. ನಂತರ ಗೋಪೂಜೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ರಥಯಾತ್ರೆಯೊಂದಿಗೆ ಆಗಮಿಸಿದ ಅಖಿಲ ಬಾರತ ಸಂತ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಶಕ್ತಿಶಾಂತಾನಂದ ಮಹರ್ಷಿ ಉಪಸ್ಥಿತರಿದ್ದರು. ರಾ.ಸ್ವ.ಸೇ.ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಸ್ವಾಗತ ಸಮಿತಿಯ ಅದ್ಯಕ್ಷ ಆನಂದ ಶೆಟ್ಟಿ, ಉದ್ಯಮಿ ಹರಿಯಪ್ಪ ಕೊಟ್ಯಾನ್ ಮತ್ತು ಪುರುಷೋತ್ತಮ ಶೆಟ್ಟಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಹಿಳಾ ಸಮಿತಿ ಪ್ರಮುಖ್ ತಾರಾ ಉಮೇಶ್ ಆಚಾರ್ಯ, ಪ್ರ. ಕಾರ್ಯದರ್ಶಿ ವಿಜಯಕುಮಾರ್ ಕೊಡವೂರು ವೇದಿಕೆಯಲ್ಲಿದ್ದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಸಭೆಯಲ್ಲಿದ್ದರು.
Viral video: ಪೇಜಾವರ ಶ್ರೀಗಳ ಎದೆಗೆ ಕಾಲಿಟ್ಟು ಮೇವು ತಿನ್ನುವ ಆಡು!
ಈ ಸಂದರ್ಭದಲ್ಲಿ ಶ್ರೀರಾಮದೇವರ ವಿಗ್ರಹಕ್ಕೆ ನೂರಾರು ಮಾತೆಯರಿಂದ ಹಾಲಿನ ಅಭಿಷೇಕ ನಡೆಯುತು. ನಂತರ ಸಾವಿರಾರು ವಾಹನಗಳ ಜಾಥಾದ ಮೂಲಕ ರಥಯಾತ್ರೆಯೂ ಉಚ್ಚಿಲ ಮಹಾಲಕ್ಷ್ಮೀ ದೇವಾಲಯಕ್ಕೆ ಆಗಮಿಸಿತು. ಅಲ್ಲಿ ನಾಡೋಜ ಜಿ.ಶಂಕರ್ ಅವರು ರಥಯಾತ್ರೆಯನ್ನು ಸ್ವಾಗತಿಸಿದರು. ಅಲ್ಲಿಂದ ರಥಯಾತ್ರೆಯು ದ.ಕ. ಜಿಲ್ಲೆಯನ್ನು ಪ್ರವೇಶಿಸಿತು.