ಚಿನ್ನದ ನಾಡಿನಲ್ಲಿ ಹಿಂದು-ಮುಸ್ಲಿಮರ ಸಾಮರಸ್ಯ ಮೂಡಿಸಿದ ವಿಘ್ನನಿವಾರಕ
ನಮ್ಮ ನೆಲದ ಸತ್ವವೇ ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆಯಿಂದ ಬಾಳುವುದು. ಮುಸ್ಲಿಮರು ಹಬ್ಬದಲ್ಲಿ ಹಿಂದೂಗಳು ಭಾಗಿಯಾಗಿರುವುದು ಸರ್ವೇ ಸಾಮಾನ್ಯ. ಇದು ಕಾಲಕಾಲಾಂತರದಿಂದ ನಡೆದುಕೊಂಡು ಬಂದ ಭಾವನಾತ್ಮಕ ಬೆಸುಗೆ. ಸೂಫಿ ಸಂತರು, ಶರಣರು ನಡೆದಾಡಿರುವ ಈ ನೆಲದಲ್ಲಿ ದ್ವೇಷ ಅಸೂಹೆಗೆ ಜಾಗವಿಲ್ಲ ಎನ್ನುವುದನ್ನು ರಾಯಚೂರು ಜಿಲ್ಲೆಯ ಲಿಂಗಸೂರಿನ ಯುವಕರು ಸಾಬೀತುಪಡಿಸಿದ್ದಾರೆ.
ರಾಯಚೂರು, (ಸೆ.05): ಚಿನ್ನದನಾಡು ಲಿಂಗಸುಗೂರಿನಲ್ಲಿ ವಿಘ್ನನಿವಾರಕ ಹಿಂದು-ಮುಸ್ಲಿಮರ ಸಾಮರಸ್ಯ ಮೂಡಿಸಿದ್ದಾನೆ. ಇತ್ತೀಚೆಗೆ ನಡೆದ ಹಿಂದು-ಮುಸ್ಲಿಂ ಕಹಿ ಘಟನೆ ಮರೆತು ರಾಮ-ರಹೀಮರ ಸಂಘ ಕಟ್ಟಿಕೊಂಡು ಗಣೇಶನನ್ನ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಬೆಳಗಾವಿ : ದೇವಾಲಯ ಶುಚಿಗೊಳಿಸಿದ ಮುಸ್ಲಿಂ ಸಮುದಾಯ - ನೆರೆ ಸಂತ್ರಸ್ತರಿಗೆ ನೆರವು
ಲಿಂಗಸೂರಿನ ಇಂದಿರಾ ಪಾರ್ಕ್ ನಲ್ಲಿ ರಾಮ-ರಹೀಮ ಯುವಕ ಮಂಡಳಿ ಗೆಳೆಯರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ
ಯಾಕಂದ್ರೆ ಮೊನ್ನೆ ಅಷ್ಟೇ ತಾಲೂಕಿನಲ್ಲಿ ಹಿಂದು-ಮುಸ್ಲಿಂ ಯುವಕರ ನಡುವೆ ನಡೆದಿದ್ದ ಗಲಾಟೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದನ್ನು ಮುಂದುವರಿಸುವುದು ಬೇಡ ಎನ್ನುವ ದೃಷ್ಟಿಯಿಂದ ಹಿಂದು-ಮುಸ್ಲಿಂ ಯುವಕರು ಸೇರಿಕೊಂಡು ರಾಮ್ ರಹೀಮ್ ಹೆಸರಿನಲ್ಲಿ ಸಂಘ ಕಟ್ಟಿಕೊಂಡು ವಿಜೃಂಭಣೆಯಿಂದ ಗಣೇಶ ಉತ್ಸವ ಆಚರಿಸಿದ್ದಾರೆ.
ಈ ಮೂಲಕ ಎಲ್ಲರೂ ಒಂದೇ ಎನ್ನುವುದನ್ನು ಸಾರಿದ್ದಾರೆ. ಇನ್ನು ರಾಮ್-ರಹೀಮ್ ಗೆಳೆಯರ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಸ್ಥಳಕ್ಕೆ ಸಿಪಿಐ ಯಶವಂತ ಬಿಸ್ನಳ್ಳಿ ಭೇಟಿ ನೀಡಿ, ಯುವಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಹಿಂದು-ಮುಸ್ಲಿಂ ಯುವಕರಲ್ಲಿ ವಿಘ್ನನಿವಾರಕ ಸಾಮರಸ್ಯ, ಸೌಹಾರ್ದತೆ ಮೂಡಿಸಿದ್ದಾನೆ.