ಧಾರವಾಡ(ಜೂ. 10)  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಾರಂಭವಾದ ಕಾರಣಕಕ್ಕೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು 500 ಬಾರಿ ಶ್ರೀರಾಮ ಜಯ ರಾಮ ಜೈ ಜೈರಾಮ ಎಂಬ ಮಂತ್ರವನ್ನು ಜಪಿಸಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದರು.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆರಂಭವಾಗಿದ್ದು ಧಾರವಾಡದಲ್ಲಿ ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.   ಹಿಂದೂ ಸಮಾಜದ ಜನರ ಪರವಾಗಿ ಪ್ರಮೋದ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯಾವ ಮಾದರಿಯಲ್ಲಿರಲಿದೆ ರಾಮಮಂದಿರ

ಸತತ ಹೋರಾಟಕ್ಕೆ ಜಯ ಸಿಕ್ಕಿದೆ ಹಿಂದೂತ್ವ ಗೆಲುವು ಕಂಡಿದೆ. ನಾವೆಲ್ಲ ಐನೂರು ಬಾರಿ ಶ್ರೀರಾಮ್ ಜಯರಾಮ್ ಜೈ ಜೈ ರಾಮ ಎಂದು ಜಪ ಮಾಡಿ ಬೆಂಬಲಿಸಿದ್ದೆವೆ, ಹಾಗೆ ಜನರು ಕೂಡಾ ಬೆಂಬಲಿಸಲಿ ಎಲ್ಲ ಹಿಂದೂಗಳು ಜಪವನ್ನ ಮಾಡಿ ವಿಶೇಷ ಪೂಜೆಯನ್ನ ಮಾಡಬೇಕು. ಜನರು ತಮ್ಮ ಅನೂಕೂಲ ತಕ್ಕಂತೆ ಹೋಮ ಹವನ ವನ್ನ ಮಾಡಿಸಬಹುದು.

ಸುಪ್ರೀಂ ಕೋರ್ಟ ಅದೇಶಕ್ಕೆ‌ ಎಲ್ಲರೂ ತಲೆ ಬಾಗಲೆಬೇಕು. ನವಂಬರ್ 10 ರಂದು ಹಿಂದೂ ಸ್ಥಾನ ಎಂದು ನ್ಯಾಯಾಲಯದಿಂದ‌ ನ್ಯಾಯ ಸಿಕ್ಕಿದೆ. ಶ್ರೀರಾಮನ ಜನ್ಮ‌ ಸ್ಥಾನದಲ್ಲಿ ರಾಮ‌ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.  ಕರ್ನಾಟಕದ ಹಿಂದೂಗಳಿಗೆ ಜಪ ಮಾಡುವಂತೆ ಹೇಳಿದ್ದೇವೆ. 

ಅಯೋಧ್ಯೆ ನಾನಾ ಕಾರಣಗಳಿಂದ ಪ್ರಸಿದ್ದ ಸ್ಥಳವಾಗಿದೆ  ಇದು ದೀರ್ಘ ಕಾಲದಿಂದ‌ ಇರುವುದರಿಂದ‌ ಇದಕ್ಕೆ‌ ಇತಿಹಾಸವಿದೆ. ಸದ್ಯ ವಿವಾದ ಹುಟ್ಟು ಹಾಕುವ ಅವಶ್ಯಕತೆ ಇಲ್ಲ, ಯಾವುದೆ‌ ಅಡ್ಡಿ ಇಲ್ಲ, ಇನ್ನು‌ ಮುಂದೆ‌‌ ಅಯೋಧ್ಯೆ ರಾಮ‌ ಮಂದಿರ ಮುಗಿದ ಅಧ್ಯಾಯ ಎಂದು ಮುತಾಲಿಕ್ ಹೇಳಿದ್ದಾರೆ.