‘ಅಯೋಧ್ಯೆ ಬಳಿಕ ಮುಂದಿನ ಗುರಿ ಮಥುರಾ ಮತ್ತು ಕಾಶಿ’
ಅಯೋಧ್ಯೆಯ ಬಳಿಕ ಮಥುರಾ ಮತ್ತು ಕಾಶಿಗೆ ಬಿಡುಗಡೆ ಎಂದು ಬಿಜೆಪಿನಾಯಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಗೋ ಮಧುಸೂದನ್ ಹೇಳಿಕೆ ನೀಡಿದ್ದಾರೆ.
ಉಡುಪಿ[ನ.28] ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲಾಸಿದ್ಧತೆಗಳು ನಡೆಯುತ್ತಿವೆ. ಇನ್ನು ನಮ್ಮ ಮುಂದಿನ ಗುರಿ ಮಥುರಾದಕೃಷ್ಣ ಹಾಗೂ ಕಾಶಿಯ ವಿಶ್ವನಾಥನ ಬಿಡುಗಡೆಯಾಗಿದೆ ಎಂದು ಗೋ ಮಧುಸೂದನ್ ಉಡುಪಿಯಲ್ಲಿ ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಎರಡನೇ ಪರ್ಯಾಯದ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ತಗಡುಹೊದಿಸುವ ಕಾರ್ಯಕ್ಕೆ ಇಂದು ರಾಜಾಂಗಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಹಿಂದುಗಳ ಬಹುಕಾಲದ ನಿರೀಕ್ಷೆಯಾದ ಅಯೋಧ್ಯೆಯಲ್ಲಿ ರಾಮನಿಗೆ ಭವ್ಯ ಮಂದಿರ ಕಟ್ಟಲು ಎಲ್ಲಾ ವ್ಯವಸ್ಥೆ ಪೂರ್ಣಗೊಳ್ಳುವಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ರಾಮಜನ್ಮಭೂಮಿಗೆ ಈಗಾಗಲೇ ಮುಕ್ತಿ ಸಿಕ್ಕಿದೆ. ದೇಶದ ಸಾಧು-ಸಂತರು,ಜನಸಾಮಾನ್ಯರು ಅಲ್ಲಿ ಮಂದಿರ ನಿರ್ಮಾಣದ ಸಂಕಲ್ಪತೊಟ್ಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ. `ಮೊದಲುರಾಮಮಂದಿರ, ಬಳಿಕ ಚುನಾವಣೆ' ಎಂದು ಸ್ಪಷ್ಟವಾಗಿತಿಳಿಸಲಾಗಿದೆ ಎಂದು ಗೋ ಮಧುಸೂದನ ತಿಳಿಸಿದರು.
ಮುಂದೆ ನಾವು ಕೃಷ್ಣನ ಜನ್ಮಸ್ಥಾನಕ್ಕೆ ಹಾಗೂಕಾಶಿಗೆ ಜೈ ಕೂಗುತ್ತೇವೆ. ಈ ಮೂರು ದೇವಸ್ಥಾನಗಳು ನಮಗೆ ಬೇಕೇಬೇಕು. ರಾಮ-ಕೃಷ್ಣರು ನಮಗೆ ಕೇವಲರಾಜರಲ್ಲ, ದೇವರು, ಭಗವಂತ, ಸೃಷ್ಟಿಕರ್ತ. ಅವರುನಮ್ಮ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಜೊತೆ ಜೊತೆಗೆಶ್ರೀಕೃಷ್ಣ ಹಾಗೂ ಕಾಶಿ ವಿಶ್ವನಾಥರ ಬಿಡುಗಡೆ ನಮ್ಮಮುಂದಿನ ಗುರಿ. ಕೃಷ್ಣನ ಜನ್ಮಸ್ಥಾನದಲ್ಲಿರುವ ಔರಂಗಜೇಬನ ಮಸೀದಿ ಹಾಗೂ ಕಾಶಿ ವಿಶ್ವನಾಥನ ಜ್ಯೋತಿರ್ಲಿಂಗದಲ್ಲಿರುವ ಮಸೀದಿ ಎರಡೂ ಹೋಗಬೇಕಾಗಿದೆ ಎಂದು ಹೇಳಿದ್ದಾರೆ.