ಕೊಪ್ಪಳ(ಡಿ.21): ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಅಶ್ಲೀಲ ಪದ ಬಳಸಿ ಹಿಂದುತ್ವ ಪೋಸ್ಟ್ ಪ್ರದರ್ಶನ ಮಾಡಿದವರು ಯಾರು, ಮಂಗಳೂರಿನಲ್ಲಿ ಯಾರು ಕಲ್ಲು ಹೊಡೆದಿದ್ದಾರೆ. ಜಾಮೀಯಾದಲ್ಲಿ ಯಾರು ಕಲ್ಲು ಬಿಸಾಕಿದ್ದಾರೆ ಎಂಬುದರ ತನಿಖೆ ಆಗಲಿ ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.  

ಶನಿವಾರ ನಗರದಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರೇ ಗಲಾಟೆ ಮಾಡಿಸುತ್ತಾರೆ. ಜನರನ್ನು  ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ಪೌರತ್ವ ಕಾಯ್ದೆ ತಿದ್ದುಪಡಿ ತಂದಿರುವುದೇ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಪ್ರತಿಯೊಂದು ಬಿಲ್ ತಂದಿರುವುದು ವೋಟ್ ಬ್ಯಾಂಕ್‌ಗಾಗಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪುಲ್ವಾಮಾ ದಾಳಿಯ ತನಿಖೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ ನಾಸೀರ್ ಹುಸೇನ್, ಗೋದ್ರಾ ಘಟನೆಗೆ ಸಂಬಂಧಿಸಿದಂತೆ ಒಬ್ಬರಿಗೂ ಶಿಕ್ಷೆ ಕೊಡಲು ಆಗಿಲ್ಲ ಎಂದು ಹೇಳಿದ್ದಾರೆ. ಮಂಗಳೂರಿಗೆ ಕಾಂಗ್ರೆಸ್ ನಿಯೋಗ ಹೋದ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಈ ದೇಶದ ಪ್ರತಿಯೊಬ್ಬ ನಾಗರಿಕರ ಜೊತೆಗೆ ಇರುತ್ತಾರೆ. ನಮ್ಮ ಪಕ್ಷದಲ್ಲಿ ದಲಿತರು, ಬ್ರಾಹ್ಮಣರು, ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಇದ್ದಾರೆ. ಎಲ್ಲಿ ಅಶಾಂತಿ ಆಗುತ್ತೋ ಅಲ್ಲಿಗೆ ಹೋಗ್ತೇವೆ ಸಾಂತ್ವಾನ ಹೇಳುತ್ತೇವೆ. ಸಿಸಿಎ ಹಾಗೂ ಎಮ್ ಆರ್ ಸಿ ಅಸಂವಿಧಾನಿಕ ಕಾಯ್ದೆಯಾಗಿದೆ. ಇದರ ವಿರುದ್ಧ ನಮ್ಮ ಪಕ್ಷದ ನಾಯಕರು ನಿಂತುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.