Asianet Suvarna News Asianet Suvarna News

ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಗೆ ಹೆಚ್ಚು ಬರುತ್ತಿಲ್ಲ| ವಯಸ್ಸಿನ ಕಾರಣ ಹಾಗೂ ಹೆಚ್ಚಿನ ಜವಾಬ್ದಾರಿಗಳಿರುವ ಕಾರಣ ಅವರಿಗೆ ಬರಲು ಆಗುತ್ತಿಲ್ಲ| ನಮ್ಮ ಜಿಲ್ಲೆಯ ಶಾಸಕರಿಗೆ ಮಂತ್ರಿ ಮಾಡಿ ಉಸ್ತುವಾರಿ ಕೊಡಿ ಎಂದು ಮನವಿ ಮಾಡಿಕೊಳ್ಳಲು ಶೀಘ್ರದಲ್ಲೇ ತೆರಳುತ್ತಿದ್ದೇವೆ ಎಂದ ರಾಜಕುಮಾರ ಪಾಟೀಲ್ ತೇಲ್ಕೂರ| 

Rajkumar Patil Telkur Talks Over Minister Post to Kalaburagi District grg
Author
Bengaluru, First Published Dec 2, 2020, 2:33 PM IST

ಕಲಬುರಗಿ(ಡಿ. 02):  ಕಲಬುರಗಿ ಜಿಲ್ಲೆಗೆ ಒಂದೇ ಒಂದು ಮಂತ್ರಿ ಸ್ಥಾನ ನೀಡಿದ್ದಕ್ಕೆ ಅಸಮಾಧಾನ, ಅಸಮತೋಲನ ಜನರಲ್ಲಿ ಹೆಚ್ಚುತ್ತಿದೆ. ಹಾಗಾಗಿ ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವಂತೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಹೈಕಮಾಂಡ್ ಬಳಿ ಪಕ್ಷದ ಶಾಸಕರು, ಸಂಸದರ ನಿಯೋಗ ತೆಗೆದುಕೊಂಡು ಹೋಗುತ್ತೇವೆ ಎಂದು ಸೇಡಂ ಬಿಜೆಪಿ ಶಾಸಕ ಹಾಗೂ NEKRTC ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಶಾಸಕರಿಂದ ಸಿಎಂ ಬಿಎಸ್‌ವೈ ಮೇಲೆ ಒತ್ತಡ ಹೇರಲಾಗುವುದು. ಈ ಬಾರಿ ಜಿಲ್ಲೆಗೆ ಒಂದಾದ್ರೂ ಮಂತ್ರಿ ಸ್ಥಾನ ನೀಡಬೇಕು. ಎಂದು ಹೇಳುವ ಮೂಲಕ ಅಸಮಾಧಾನವನ್ನ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. 

'ಸಿದ್ದರಾಮಯ್ಯ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಮಾತನಾಡಬೇಕು'

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಗೆ ಹೆಚ್ಚು ಬರುತ್ತಿಲ್ಲ. ವಯಸ್ಸಿನ ಕಾರಣ ಹಾಗೂ ಹೆಚ್ಚಿನ ಜವಾಬ್ದಾರಿಗಳಿರುವ ಕಾರಣ ಅವರಿಗೆ ಬರಲು ಆಗುತ್ತಿಲ್ಲ. ಕಾರಣ ನಮ್ಮ ಜಿಲ್ಲೆಯ ಶಾಸಕರಿಗೆ ಮಂತ್ರಿ ಮಾಡಿ ಉಸ್ತುವಾರಿ ಕೊಡಿ ಎಂದು ಮನವಿ ಮಾಡಿಕೊಳ್ಳಲು ಶೀಘ್ರದಲ್ಲೇ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios