Mysuru Dasara; ದಸರಾ ಆಚರಣೆಯಲ್ಲಿ ಮರುಕಳಿಸಲಿದೆ ರಾಜ್ ಕುಟುಂಬದ ನೆನಪು

ಅರಮನೆ ನಗರಿ  ಮೈಸೂರಿನಲ್ಲಿ ನಡೆಯಲಿರುವ ದಸರಾ ಆಚರಣೆಯಲ್ಲಿ ರಾಜ್ ಕುಟುಂಬದ ನೆನಪು ಮರುಕಳಿಸುತ್ತಿದೆ. ವಿದ್ಯುತ್ ದೀಪಾಲಂಕಾರದಿಂದ ವಸ್ತು ಪ್ರದರ್ಶನದವರೆಗೆ ಅಗಲಿದ ರಾಜ್ ಕುಟುಂಬದ ಸದಸ್ಯರ ಪ್ರತಿಮೆಗಳ ಪ್ರದರ್ಶನದ ಮೂಲಕ ಸರ್ಕಾರ  ಗೌರವ ಸಲ್ಲಿಸಲು ಮುಂದಾಗಿದೆ.

Rajkumar family members memory in Mysuru Dasara Exhibition gow

ಮೈಸೂರು (ಸೆ.16): ಅರಮನೆ ನಗರಿ  ಮೈಸೂರಿನಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ನೆನಪು ಜೋರಾಗಿದೆ. ದಸರಾ ಆಚರಣೆಯಲ್ಲಿ ರಾಜ್ ಕುಟುಂಬದ ನೆನಪು ಮರುಕಳಿಸುತ್ತಿದೆ. ವಿದ್ಯುತ್ ದೀಪಾಲಂಕಾರದಿಂದ ವಸ್ತುಪ್ರದರ್ಶನದ ವರೆಗೆ ಅಗಲಿದ ರಾಜ್ ಕುಟುಂಬದ ಸದಸ್ಯರ ಪ್ರತಿಮೆಗಳ ಪ್ರದರ್ಶನದ ಮೂಲಕ ಸರ್ಕಾರ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಕಳೆಗಟ್ಟುತ್ತಿದೆ. ಅರಮನೆ ನಗರಿಯಲ್ಲಿ ಒಂದೊಂದೇ ದಸರಾ ಕಾರ್ಯಕ್ರಮ ಆರಂಭ ಆಗ್ತಿವೆ. ಇತ್ತ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಅಗಲಿದ ನಾಯಕ ಡಾ.ಪುನೀತ್‌ರಾಜ್‌ಕುಮಾರ್ ನೆನಪಿನಾರ್ಥ ಮರಳು ಕಲಾಕೃತಿ ತಯಾರಾಗಿದೆ. ಮೈಸೂರು ದಸರಾದಲ್ಲಿ ದಿವಂಗತ ಡಾ.ಪುನೀತ್‌ ರಾಜ್‌ಕುಮಾರ್ ವರ್ಷದ ನೆನಪಿಗಾಗಿ ಮರಳು ಕಲಾಕೃತಿ ರೆಡಿಯಾಗಿದೆ. ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮರಳಿನಲ್ಲಿ ಅರಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಲಾಕೃತಿ ಕಣ್ಮನ ಸೆಳೆಯುತ್ತಿದೆ. ಪುನೀತ್ ಜೊತೆ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಮರಳು ಕಲಾಕೃತಿ ಕೂಡ ಮೂಡಿ ಬಂದಿದೆ. 350 ಟನ್ ಎಂ ಸ್ಯಾಂಡ್ ಬಳಸಿ ಕಾಲಾಕೃತಿ ರಚಿಸಿದ್ದಾರೆ. ಮೈಸೂರಿನ ಮರಳು ಕಲಾವಿದೆ ಗೌರಿ. ಪುನೀತ್‌ರಾಜ್‌ಕುಮಾರ್ ಕೊನೆಯ ಚಿತ್ರ ಜೇಮ್ಸ್, ಬಾಲ ನಟನೆಯ ಆರಂಭಿಕ ಚಿತ್ರದ ಪಾತ್ರಗಳನ್ನು ಬಿಡಿಸಿದ್ದಾರೆ.

ಸೈನಿಕನ ಪಾತ್ರದಲ್ಲಿ ಸೆಲ್ಯೂಟ್ ಹೊಡೆಯುತ್ತಿರುವ ಕಲಾಕೃತಿ, ಡಾ.ರಾಜ್ ಕುಮಾರ್, ಪಾವರ್ತಮ್ಮ ರಾಜ್ ಕುಮಾರ್, ಎರಡು ನಕ್ಷದ ಚಿತ್ರದ ದ್ವಿಪಾತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದ ಪುನೀತ್, ಭಕ್ತಪ್ರಹ್ಲಾದ್ ಸಿನಿಮಾದಲ್ಲಿ ಶಿವನಿಗೆ ಕೈ ಮುಗಿದ ಭಂಗಿ, ಹಾಗೂ ರಾಜಕುಮಾರ ಸಿನಿಮಾದಲ್ಲಿ ಸೂಟ್ ಧರಿಸಿ ಪಾರಿವಾಳ ಜೊತೆಗಿರುವ ಕಲಾಕೃತಿಗಳ ರಚನೆ ಸೋಗಸಾಗಿ ಕಂಡಿದೆ.
 
 ದರ ಜೊತೆಗೆ ವಿದ್ಯುತ್ ದೀಪಾಲಂಕಾರದ ವೇಳೆ ವೃತ್ತ ಒಂದರಲ್ಲಿ ಪುನೀತ್ ರಾಜ್‍ಕುಮಾರ್ ಕಲಾಕೃತಿ ಕೂಡ ಇರಿಸಲಾಗುತ್ತಿದೆ. ಒಟ್ಟಾರೆ ಕಳೆಗಟ್ಟಿದ ಮೈಸೂರು ದಸರಾದಲ್ಲಿ ಪುನೀತ್ ಕಲಾಕೃತಿಗಳು ರಂಜಿಸುತ್ತಿರೋದು ಅಭಿಮಾನಿಗಳ ಸಂತಸ ಹಿಮ್ಮಡಿ ಮಾಡಿದೆ.

ಲಕ್ಷ್ಮೇ ಆನೆಗೆ ಜನಿಸಿದ ಮರಿಗೆ ದತ್ತಾತ್ರೇಯ ಹೆಸರು
ಮೈಸೂರು: ದಸರಾಗೆ ಆಗಮಿಸಿರುವ ಗಜಪಡೆಯ ಸದಸ್ಯೆ ಲಕ್ಷ್ಮೇ ಆನೆಗೆ ಜನಿಸಿದ ಗಂಡು ಮರಿಗೆ ಶ್ರೀದತ್ತಾತ್ರೇಯ ಎಂದು ಅರಣ್ಯ ಇಲಾಖೆ ನಾಮಕರಣ ಮಾಡಿದೆ. ಮೈಸೂರು ಅರಮನೆ ಆವರಣದಲ್ಲಿ 21 ವರ್ಷದ ಲಕ್ಷ್ಮೇ ಆನೆಯು ಸೆ.13ರ ಮಂಗಳವಾರ ರಾತ್ರಿ ಗಂಡು ಮರಿಯಾನೆಗೆ ಜನ್ಮ ನೀಡಿತ್ತು. ಅರಮನೆ ಆವರಣದಲ್ಲಿ ಜನ್ಮ ನೀಡಿದ್ದರಿಂದ ಡಿಸಿಎಫ್‌ ಡಾ.ವಿ.ಕರಿಕಾಳನ್‌ ಆನೆ ಮರಿಗೆ ಸೂಕ್ತ ಹೆಸರಿಡುವಂತೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರನ್ನು ಕೋರಿದ್ದರು. ಅವರು ಶ್ರೀದತ್ತಾತ್ರೇಯ ಎಂದು ಸೂಚಿಸಿದ್ದರಿಂದ ಗುರುವಾರ ನಾಮಕರಣ ಮಾಡಲಾಗಿದೆ. 

Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ

ಸೆ.13ರಂದು ತಾಲೀಮಿನಲ್ಲಿ ಪಾಲ್ಗೊಂಡಿದ್ದ ಆನೆಯು ಸಹಜವಾಗಿಯೇ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆಯೇ ಅದರ ವರ್ತನೆಯಲ್ಲಿ ಬದಲಾವಣೆ ಗಮನಿಸಿದ ಕವಾಡಿಗಳು ಮತ್ತು ಮಾವುತರು ವೈದ್ಯರ ಗಮನಕ್ಕೆ ತಂದರು. ಆನೆಯನ್ನು ಪರೀಕ್ಷಿಸಿದ ವೈದ್ಯರು ಲಕ್ಷ್ಮೀಯು ಗರ್ಭವತಿ ಆಗಿರುವುದನ್ನು ಖಚಿತಪಡಿಸಿದರು.

ದಸರಾಗೆ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ

ಸೆ.13ರ ಮಂಗಳವಾರ ರಾತ್ರಿ 8.10ರ ಸುಮಾರಿನಲ್ಲಿ ಆನೆ ಮರಿಗೆ ಜನ್ಮ ನೀಡಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 14 ಆನೆಗಳು ಆಗಮಿಸಿದ್ದವು. ಈಗ ಲಕ್ಷ್ಮೀ ಆನೆ ಮತ್ತು ಮರಿಯನ್ನು ಅರಮನೆ ಆವರಣದಲ್ಲಿಯೇ ಪ್ರತ್ಯೇಕವಾಗಿರಿಸಿ, ಆರೈಕೆ ಮಾಡಲಾಗುತ್ತಿದೆ. ಬಂಡೀಪುರ ರಾಂಪುರ ಆನೆ ಶಿಬಿರದಿಂದ ಬಂದ ಲಕ್ಷ್ಮೀ ಬರುವಾಗಲೇ ಗರ್ಭಿಣಿಯಾಗಿದ್ದ ವಿಚಾರ ತಿಳಿದಿರಲಿಲ್ಲ ಎಂದು ಡಿಸಿಎಫ್‌ ಕರಿಕಾಳನ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios