Asianet Suvarna News Asianet Suvarna News

'ಒಗ್ಗಟ್ಟು ಇಲ್ಲ​ದಿ​ರು​ವುದೇ ಜೆಡಿ​ಎಸ್‌ ಸಂಘ​ಟ​ನೆಗೆ ಕಷ್ಟ'

*  ಶಿರಸಿ-ಸಿದ್ದಾಪುರ ಕ್ಷೇತ್ರದ ಜೆಡಿಎಸ್‌ ವೀಕ್ಷಕಿ ರಾಜೇಶ್ವರಿ ಹೆಗಡೆ
*  ಅಧಿಕಾರಕ್ಕಾಗಿ ಮಾತ್ರ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌
*  ಪಕ್ಷದಲ್ಲಿ ಸಣ್ಣಪುಟ್ಟ ಒಡಕುಗಳು ಇರುವುದು ಸಹಜ

Rajeshwari Hegde Talks Over JDS grg
Author
Bengaluru, First Published Oct 18, 2021, 11:51 AM IST

ಸಿದ್ದಾಪುರ(ಅ.18): ಪಕ್ಷದಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದ ಪಕ್ಷ ಸಂಘಟನೆ ಕಷ್ಟವಾಗಿದೆ ಎಂದು ಜೆಡಿಎಸ್‌(JDS) ಪಕ್ಷದ ಶಿರಸಿ-ಸಿದ್ದಾಪುರ(Sirsi-Siddapur) ಕ್ಷೇತ್ರದ ವೀಕ್ಷಕಿ ರಾಜೇಶ್ವರಿ ಹೆಗಡೆ(Rajeshwari Hegde) ಅವರು ಹೇಳಿದ್ದಾರೆ. 

ಪಟ್ಟಣದ ಬಾಲ ಭವನದಲ್ಲಿ ನಡೆದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ನಾಯಕರ ಹಾಗೂ ಪಕ್ಷದ ಸಂಘಟನೆ ಕುರಿತು ಕಾರ್ಯಕರ್ತರ ಜೊತೆ ಹಮ್ಮಿಕೊಂಡ ಚರ್ಚೆ ಸಭೆಯಲ್ಲಿ ಅವರು ಮಾತ​ನಾ​ಡಿ​ದರು. ಎಷ್ಟೊಂದು ಹಾಸ್ಯಾಸ್ಪದ ಎಂದರೆ ನಾನು ಬ್ರಾಹ್ಮಣ(Brahmin) ಮನೆತನದಿಂದ ಬಂದವರಾದರೂ ನನ್ನ ಭಾಗದಲ್ಲಿ ಮಠದವರು ಹಾಗೂ ನಮ್ಮ ಬ್ರಾಹ್ಮಣ ಸಮುದಾಯವರು ನನ್ನನ್ನು ಬ್ರಾಹ್ಮಣ ಎಂದು ಗುರುತಿಸುವುದಿಲ್ಲ. ನನ್ನನ್ನು ನಾನು ಗೌಡರ ಪಕ್ಷದಲ್ಲಿರುವುದರಿಂದ ನನ್ನನ್ನು ಗೌಡ ಅಂತಲೇ ಗುರುತಿಸುತ್ತಾರೆ. ಆದರೆ ಈ ಪಕ್ಷದಲ್ಲಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ನಮ್ಮ ಜೆಡಿಎಸ್‌ ಪ್ರಾದೇಶಿಕ ಪಕ್ಷವಾದರೂ ಇಂದಿನ ಮುಖ್ಯಮಂತ್ರಿ(Chief Minister), ಹಿಂದಿನ ಹಲವಾರು ಮಾಜಿ ಮುಖ್ಯಮಂತ್ರಿಗಳು ನಮ್ಮ ಪಕ್ಷದಲ್ಲಿ ಮುತ್ಸದ್ದಿಗಳಾಗಿ ನಮ್ಮ ನಾಯಕರುಗಳಿಂದ ಮಾರ್ಗದರ್ಶನ ಪಡೆದು ಶಿಸ್ತಿನ ಪಕ್ಷದಲ್ಲಿ ಇಂದು ಮುಖ್ಯಮಂತ್ರಿಗಳಾಗಿದ್ದಾರೆ ಎಂದರೆ ನಮಗೆ ಹೆಮ್ಮೆಯ ವಿಷಯ. ಆದ್ದರಿಂದ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಮನಸ್ತಾಪ ಇದ್ದರೂ ಹಿರಿಯರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳೋಣ. ಆಗಬೇಕಾದ ಕ್ರಮಗಳನ್ನು ಕೈಗೊಳ್ಳುವ ಹಲವಾರು ದಿನಗಳಿಂದ ಪಕ್ಷ ಸಂಘಟನೆಯಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತಿವೆ. ನಾವು ಕೊನೆಯವರೆಗೂ ಪಕ್ಷದ ಅಭಿಮಾನಿಗಳಾಗಿರುತ್ತವೆ ಎಂಬುದಕ್ಕೆ ಇಲ್ಲಿ ಸೇರಿರುವ ಕೆಲವು ಹಿರಿಯ ನಾಯಕರೇ ಸಾಕ್ಷಿಯಾಗಿದ್ದಾರೆ. ಗ್ರಾಪಂ, ಜಿಪಂ, ತಾಪಂ, ಬೈ ಎಲೆಕ್ಷನ್‌ ಹೀಗೆ ಹಲವಾರು ಚುನಾವಣೆಗಳನ್ನು(Election) ನಾವು ನೋಡಿದ್ದೇವೆ.

Mandya : JDS ಶಾಸಕರು, ಮುಖಂಡರ ಪಕ್ಷ ತೊರೆಯುವ ಸುಳಿವು ನೀಡಿ ಎಚ್ಚರಿಸಿದ ಮುಖಂಡ

ಬಹಳ ವರ್ಷಗಳ ನಂತರ ಇಲ್ಲಿ ನಾವು ಸಂಘಟನೆಯಲ್ಲಿ ಪಾಲ್ಗೊಂಡಿದ್ದೇವೆ. ಗಣಪೆ ಗೌಡರ ಅಧ್ಯಕ್ಷತೆಯಲ್ಲಿ ನಮ್ಮ ಪಕ್ಷದಿಂದ ಹಿಂದೆ ಕುಮಟಾದಿಂದ ದಿನಕರ ಶೆಟ್ಟಿ ಹಾಗೂ ಹಳಿಯಾಳದಿಂದ ಸುನೀಲ ಹೆಗಡೆ ಇಬ್ಬರು ಶಾಸಕರನ್ನು ನೀಡಿದ್ದೇವೆ. ಪಕ್ಷ ಎನ್ನುವ ಹೆಮ್ಮೆ ನಮ್ಮಲ್ಲಿ ಎಲ್ಲಿವರೆಗೆ ಇದೆಯೋ ಅಲ್ಲಿಯವರೆಗೆ ನಮಗೆ ಸ್ಥಾನಮಾನ ಹುದ್ದೆ ಸಿಗದೇ ಇದ್ದರೂ ಸಹ ಪಕ್ಷಕ್ಕಾಗಿ ದುಡಿಯೋಣ ಎಂದರು

ಜೆಡಿಎಸ್‌ ಜಿಲ್ಲಾ ವೀಕ್ಷಕರಾದ ಎಂ. ಗಂಗಣ್ಣ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಒಡಕುಗಳು ಇರುವುದು ಸಹಜ. ನಮ್ಮನಮ್ಮಲ್ಲಿ ಮನಸ್ತಾಪ ವಿದ್ದರೆ ಪಕ್ಷ ಸಂಘಟನೆ ಮಾಡುವುದು ಸಾಧ್ಯವಿಲ್ಲ ಆದ್ದರಿಂದ ನಮ್ಮಲ್ಲಿರುವ ವೈಮನಸ್ಸು ಬಿಟ್ಟು ಮುಂಬರುವ ಚುನಾವಣೆಗಳಲ್ಲಿ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಗೆಲುವು ಸಾಧಿಸುವ ಎಂದರು.

ಜೆಡಿಎಸ್‌ನ ಪ್ರಮುಖರಾದ ಇಲಿಯಾಸ ಶೇಖ್‌ ಮಾತನಾಡಿ, ಪಕ್ಷ ಸಂಘಟನೆಯ ಕುರಿತು ಕುಮಟಾದಲ್ಲಿ ಅಲ್ಪಸಂಖ್ಯಾತ ಘಟಕದ ಸಭೆ ನಡೆದಾಗ ಕೆಲವೇ ಕೆಲವು ಮಂದಿ ಹಾಜರಿದ್ದರು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರಿರುವುದು ನಮಗೆ ಸಹಕಾರ ನೀಡುತ್ತಿರುವುದು ತುಂಬಾ ಸಂತೋಷವಾಗಿದೆ.

ಜೆಡಿಎಸ್‌ ಪಕ್ಷದಲ್ಲಿ ಬೆಳೆದು ಹಲವಾರು ಅಲ್ಪಸಂಖ್ಯಾತರು ಕಾಂಗ್ರೆಸ್‌(Congress) ಹಾಗೂ ಇತರ ಪಕ್ಷಗಳಲ್ಲಿ ಸೇರ್ಪಡೆಗೊಂಡಿದ್ದಾರೆ ಅಲ್ಪಸಂಖ್ಯಾತರಾದ(Minorities) ನಾವು ಅವರನ್ನು ಒಪ್ಪಬಾರದು. ಕಾಂಗ್ರೆಸ್‌ ಪಕ್ಷದವರು ಕೇವಲ ಅಧಿಕಾರಕ್ಕಾಗಿ ಮಾತ್ರ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುತ್ತಿದ್ದಾರೆ. ಜಾತ್ಯತೀತ ಪಕ್ಷದ ಮುಖಂಡರಾದ ಕುಮಾರಣ್ಣ(HD Kumaraswamy) ಅವರನ್ನು 2023ರ ಚುನಾವಣೆಯಲ್ಲಿ ಗೆಲ್ಲಿಸಿ ಮುಖ್ಯಮಂತ್ರಿ ಮಾಡೋಣ. ಆ ಕುರಿತು ಇಂದಿನಿಂದ ಪಕ್ಷದ ಸಂಘಟನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಎಂದರು ಈ ಸಂದರ್ಭದಲ್ಲಿ ಜಿ.ಕೆ. ಪಟಗಾರ ಜಿಲ್ಲಾ ಉಪಾಧ್ಯಕ್ಷರು, ರಾಘವೇಂದ್ರ ಕೋರೆರ್ಕ ರಾಜ್ಯ ಯುವ ಘಟಕದ ಕಾರ್ಯದರ್ಶಿ, ಅರುಣ್‌ಗೌಡ ಜಿಲ್ಲಾ ಯುವ ಘಟಕದ ಅಧ್ಯಕ್ಷ, ರಜಕ್‌ಸಾಬ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಶಿರಸಿ, ಪಿ.ಟಿ. ನಾಯ್ಕ, ಸೇರಿದಂತೆ ಜೆಡಿಎಸ್‌ ಪ್ರಮುಖರು ಉಪಸ್ಥಿತರಿದ್ದರು.
 

Follow Us:
Download App:
  • android
  • ios