ಮಲೆನಾಡಿನಲ್ಲಿ ಹೈಫೈ ರಾಜಸ್ಥಾನಿ ಹುಡ್ಗೀರ ಗ್ಯಾಂಗ್‌: ಹತ್ತಿಪ್ಪತ್ತು ಬೇಡ್ವಂತೆ 100 ರೂ. ಬೇಕಂತೆ

ಮಲೆನಾಡು ಚಿಕ್ಕಮಗಳೂರಿನಲ್ಲಿ ಬಿಡು ಬಿಟ್ಟಿರುವ ಹೈಫೈ ರಾಜಸ್ಥಾನಿ ಹುಡುಗಿರಯರು ಜನರ ಬಳಿ 100, 200 ರೂ. ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

Rajasthani girls group begging money at Karnataka roads sat

ಚಿಕ್ಕಮಗಳೂರು (ಮೇ 24): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿರುವ ಸುಮಾರು 15ಕ್ಕೂ ಅಧಿಕ ರಾಜಸ್ಥಾನಿ ಹುಡುಗಿಯರ ಗುಂಪು ನಗರದಾದ್ಯಂತ ನಾವು ಅನಾಥರು, ಮನೆಯನ್ನು ಕಟ್ಟಿಕೊಳ್ಳಲು ಹಣವನ್ನು ನೀಡಿ ಎಂದು ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದಿದೆ. ಹೈಫೈ ಜೀನ್ಸ್‌ ಪ್ಯಾಂಟ್‌, ಟೈಟ್‌ ಟೀಶರ್ಟ್‌ ಹಾಕೊಂಡು ರಸ್ತೆಗಿಳಿಯೋ ಹುಡ್ಗೀರು ಪ್ರಕೃತಿ ವಿಕೋಪದಲ್ಲಿ ನಮ್ಮ ಮನೆ, ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಹಣ ನೀಡುವಂತೆ ಅನುಕಂಪದಿಂದಲೇ ಡಿಮ್ಯಾಂಡ್‌ ಮಾಡ್ತಾರೆ. ನಂತರ ಜನರು 10-20 ರೂ. ಕೊಟ್ಟರೆ ತೆಗೆದುಕೊಳ್ಳದೇ 100- 200 ರೂ. ಕೊಡುವಂತೆ ದುಂಬಾಲು ಬೀಳ್ತಾರೆ. 

11 ವರ್ಷದ ಬಾಲಕಿಯ ಮೇಲೆ ನಾಲ್ವರ ಅತ್ಯಾಚಾರ, ಕ್ಲಾಸ್‌ಮೇಟ್‌ ಕೂಡ ಭಾಗಿ!

ದುಡಿಯೋಕೆ ನೂರು ದಾರಿಗಳಿದ್ದರೂ ಸೋಂಬೇರಿ ಮನಸ್ಸು ಸುಲಭವಾಗಿ ಹಣಗಳಿಸುವ ಮಾರ್ಗವನ್ನೇ ಅನುಕರಣೆ ಮಾಡುತ್ತದೆಂತೆ. ನೋಡೋಕೆ ದಷ್ಟಪುಷ್ಟವಾಗಿ ಇದ್ದರೂ ಕೂಡ ಕಾಲೇಜು ಓದೋ ಹುಡ್ಗೀರ ತರ ಇರೋ ರಾಜಸ್ಥಾನಿ ಹುಡ್ಗೀರ ಗುಂಪು ನಾವು ಅನಾಥರು ಎಂದು ಹೇಳಿಕೊಂಡು ಚಿಕ್ಕಮಗಳೂರು ನಗರ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷಾಟನೆಗೆ ಮುಂದಾಗಿದ್ದಾರೆ. ಬಸ್‌ ನಿಲ್ದಾಣ, ಮಾರುಕಟ್ಟೆಗಳು, ಪ್ರಮುಖ ಬೀದಿಗಳು ಹಾಗೂ ಮನೆ-ಮನೆಗೆ ಹೋಗಿ ಭಿಕ್ಷಾಟನೆ ಮಾಡುತ್ತಿದ್ದು, ಅವರ ಮೇಲೆ ಅನುಮಾನ ಹುಟ್ಟಿಸುವಂತಿದೆ. ಸುಮಾರು 12 ವರ್ಷದಿಂದ 25 ವರ್ಷದ ಆಸುಪಾಸಿನ 15ಕ್ಕೂ ಅಧಿಕ ಹುಡುಗಿಯರು ನಗರದಾದ್ಯಂತ ಭಿಕ್ಷಾಟನೆ ಮಾಡುತ್ತಿರುವುದು ಕಂಡುಬರುತ್ತಿದೆ. 

10, 20 ಕೊಟ್ರೆ ಮುಟ್ಟಲ್ಲ, 100, 200 ರೂಪಾಯಿಯನ್ನೇ ಕೊಡ್ಬೇಕು: ನಗರದಲ್ಲಿ ಸ್ಟ್ರೈಲಾಗಿ ಡ್ರೆಸ್ ಮಾಡ್ಕೊಂಡು ಬಂದು ಹಣ ವಸೂಲಿ ಮಾಡ್ತಿರೋ ಲೇಡಿಸ್ ಬ್ಯಾಚ್, ಚಿಕ್ಕಮಗಳೂರು ನಗರದ ಮನೆ-ಅಂಗಡಿಗಳಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಕನ್ನಡ ಮಾತನಾಡಲು ಬರ ಇವರು ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂದು ಇಂಗ್ಲೀಷ್‌ನ ಒಂದು ಪ್ಯಾರಾವನ್ನು ಟೈಪ್‌ ಮಾಡಿಸಿಕೊಂಡು ಅದನ್ನೇ ಎಲ್ಲರೂ ಜೆರಾಕ್ಸ್‌ ಮಾಡಿಸಿಕೊಂಡು ಇಟ್ಟುಕೊಂಡಿದ್ದಾರೆ. ಎಲ್ಲರೂ ಇಂಗ್ಲೀಷ್‌ ಮುದ್ರಣದ ಪ್ರತಿಯನ್ನು ತೋರಿಸಿ ಹಿಂದಿ ಮತ್ತು ರಾಜಸ್ಥಾನಿ ಭಾಷೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಇನ್ನು ಜನರು ಮನಸ್ಸು ಕರಗಿ 10- 20 ರೂ.ಗಳನ್ನು ಕೊಟ್ಟರೆ ತೆಗೆದುಕೊಳ್ಳದೇ, ತಮಗೆ 100-200 ರೂ. ನೆರವು ನೀಡುವಂತೆ ದುಂಬಾಲು ಬೀಳುತ್ತಾರೆ. ಯಾರಾದರೂ ಪ್ರಶ್ನೆ ಮಾಡಿದರೆ, ಕೆಲಸ ಕೊಡ್ತೀವಿ ಮಾಡ್ತೀರಾ ಎಂದು ಕೇಳಿದರೆ ಅಲ್ಲಿಂದ ಕಾಲ್ಕೀಳುತ್ತಾರೆ.

ಮಲಗಿದ್ದಾಗ ಹಾವು ಕಚ್ಚಿದೆ ಅಂದ್ರೂ ಆಸ್ಪತ್ರೆಗೆ ಸೇರಿಸಲಿಲ್ಲ: ಎದ್ದೇಳುವಷ್ಟರಲ್ಲಿ ಹೆಣವಾಗಿದ್ದ ಮಗಳು

ಅನುಕಂಪ ಗಿಟ್ಟಿಸುವ ತಂತ್ರವೇ ರೋಚಕ:  ರಾಜಸ್ಥಾನದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಮನೆ-ಆಸ್ತಿ ಎಲ್ಲವೂ ನಷ್ಟವಾಗಿದೆ. ಮನೆ ಬಿದ್ದು ಹೋಗಿದೆ. ಪ್ರತಿನಿತ್ಯ ಬೆಳಗಾದರೆ ಧರಿಸೋದಕ್ಕೆ ಬಟ್ಟೆ ಇಲ್ಲ. ಎಲ್ಲವನ್ನೂ ಕಳೆದುಕೊಮಡು ಬೀದಿಗೆ ಬಂದಿದ್ದೇವೆ. ನೀವೇ ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳುತ್ತಾರೆ. ಒಂದೊಂದು ಸ್ಥಳದಲ್ಲಿ ಐವರು ಯುವತಿಯರ ಗುಂಪು ಭಿಕ್ಷಾಟನೆಗೆ ಮುಂದಾಗಿದ್ದಾರೆ. ಇನ್ನು ಅಲ್ಲಿ ಹಣ ಕೊಡುವವರಿಂದ ಹಣ ಪಡೆದು, ಪ್ರಶ್ನೆ ಮಾಡುವವರ ಸಂಖ್ಯೆ ಯಾವಾಗ ಹೆಚ್ಚಾಗುತ್ತದೆಯೋ ಆಗ ಅಲ್ಲಿಂದ ಆಟೋ ಹತ್ತಿಕೊಂಡು ಬೇರೆಡೆ ಹೋಗುತ್ತಾರೆ.

Latest Videos
Follow Us:
Download App:
  • android
  • ios