11 ವರ್ಷದ ಬಾಲಕಿಯ ಮೇಲೆ ನಾಲ್ವರ ಅತ್ಯಾಚಾರ, ಕ್ಲಾಸ್‌ಮೇಟ್ ಕೂಡ ಭಾಗಿ!
ರೇಪ್‌ನ ಕುರಿತಾಗಿ ಅದೆಷ್ಟೇ ಸುದ್ದಿಗಳು, ಎಷ್ಟೇ ಕಠಿಣ ಕಾನೂನು ಬಂದಿದ್ದರೂ, ಈ ನೀಚ ಕೃತ್ಯ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಚಂಡೀಗಢದಲ್ಲಿ 7ನೇ ತರಗತಿಯ ಬಾಲಕಿಯ ಮೇಲೆ ಆಕೆಯ ಸಹಪಾಠಿ ಹಾಗೂ ಇತರ ಮೂವರಿಂದ ಅತ್ಯಾಚಾರ ನಡೆದ ಘಟನೆ ನಡೆದಿದೆ.
ನವದೆಹಲಿ (ಮೇ.24): ಉತ್ತರ ಭಾರತದ ಚಂಡಿಗಢದಲ್ಲಿ ಅಮಾನುಷ ಅತ್ಯಾಚಾರ ಘಟನೆ ನಡೆದಿದೆ. 11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತರು ಗ್ಯಾಂಗ್‌ರೇಪ್ ಮಾಡಿದ ಘಟನೆ ನಡೆದಿದೆ. 11 ವರ್ಷದ ಬಾಲಕಿ 7ನೇ ತರಗತಿಯಲ್ಲೊ ಓದುತ್ತಿದ್ದು, ರೇಪ್ ಮಾಡಿದ ಅಪ್ರಾಪ್ತ ಬಾಲಕರಲ್ಲಿ ಆಕೆಯ ಕ್ಲಾಸ್‌ಮೇಟ್ ಕೂಡ ಸೇರಿದ್ದಾನೆ ಎಂದು ವರದಿಯಾಗಿದೆ. ಉಳಿದ ಮೂವರು ಆರೋಪಿಗಳು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಎನ್ನಲಾಗಿದೆ. ಆರೋಪಿಗಳು ಕಳೆದ ಆರು ತಿಂಗಳಿನಿಂದ ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಹದಿನೈದು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನಾಲ್ವರು ಅಪ್ರಾಪ್ತರು ತನ್ನ ಮಗಳನ್ನು ಶಾಲೆಯ ಹೊರಗಿನ ಪೊದೆಗಳಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಅಪ್ರಾಪ್ತರು ಬಾಲಕಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಶಾಲಾ ಆಡಳಿತ ಮಂಡಳಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಅತ್ಯಾಚಾರದಿಂದ ಆಘಾತಕ್ಕೆ ಒಳಗಾಗಿದ್ದ ಹುಡುಗಿ ಒಂದು ದಿನ ತನ್ನ ತಾಯಿಗೆ ಈ ಘಟನೆಯನ್ನು ತಿಳಿಸಿದ್ದಾಳೆ. ಸಂತ್ರಸ್ತೆಯ ತಾಯಿ ತರಗತಿ ಶಿಕ್ಷಕರನ್ನು ಭೇಟಿಯಾಗಿದ್ದರೆ, ಅವರು ಮಗುವಿನ ಸಹಾಯವಾಣಿಗೆ ಕರೆ ಮಾಡಿದರು. ಅದರಂತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ.
ಬಾಯ್‌ಫ್ರೆಂಡನ್ನು ಮರಕ್ಕೆ ಕಟ್ಟಿ ಯುವತಿ ಮೇಲೆ ಇಬ್ಬರು ಕಾಮುಕರಿಂದ ರೇಪ್
ಸಂತ್ರಸ್ಥ ಬಾಲಕಿಯ ತಾಯಿ ಶಾಲೆಯ ಪ್ರಿನ್ಸಿಪಾಲ್‌ಗೆ ಘಟನೆಯ ವಿವರಗಳನ್ನು ತಿಳಿಸಿದ್ದಾಳೆ. ಅಂದಾಜು 15 ದಿನಗಳ ಹಿಂದೆ ಈ ಘಟನೆ ನಡೆದಿದೆ. ನಾಲ್ವರು ಆರೋಪಿಗಳು ಆಕೆಯನ್ನು ಶಾಲೆಯ ಹೊರಗಡೆ ತಡೆದಿದ್ದಾರೆ. ಬಳಿಕ ಶಾಲೆಯ ಬಳಿಯೇ ಇರುವ ಪೊದೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಹಾಗೇನಾದರೂ ಅತ್ಯಾಚಾರದ ಬಗ್ಗೆ ಯಾರಿಗಾದರೂ ತಿಳಿಸಿದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Maharashtra: 16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ; 8 ಮಂದಿ ಬಂಧನ