ಜೂ.7ರವರೆಗೆ ಮಳೆ: ಗೋವಿಂದಗೌಡ
ರೋಹಿಣಿ ಮಳೆಯು ಜೂನ್ 7ರವರೆಗೆ ಬರಲಿದ್ದು ಜಿಲ್ಲೆಯಾದ್ಯಂತ ಉತ್ತಮ ಮಳೆಯ ಅವಕಾಶವಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿ ಡಾ.ವಿ.ಗೋವಿಂದಗೌಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಪಟೂರು: ರೋಹಿಣಿ ಮಳೆಯು ಜೂನ್ 7ರವರೆಗೆ ಬರಲಿದ್ದು ಜಿಲ್ಲೆಯಾದ್ಯಂತ ಉತ್ತಮ ಮಳೆಯ ಅವಕಾಶವಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿ ಡಾ.ವಿ.ಗೋವಿಂದಗೌಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಮೇ 24 ರಿಂದ ಮೇ 28ರವರಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದ್ದು ಗಾಳಿಯ ವೇಗ ಹಾಗೂ ಉಷ್ಣಾಂಶ ಹೆಚ್ಚಿರುವ ಸಾಧ್ಯತೆ ಇದೆ. ಮೇ 26ರಂದು ಸಾಧಾರಣದಿಂದ ಭಾರೀ ಮಳೆ, ಗಾಳಿಯ ವೇಗವು ಹೆಚ್ಚಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಮಾಹಿತಿ ನೀಡಿದೆ. ಮಳೆಯ ಏರುಪೇರಿಗೆ ಸುಸ್ತಿರ ಆದಾಯಕೋಸ್ಕರ ಜಮೀನಿನ ಬದುಗಳ ಮೇಲೆ ಹೆಬ್ಬೇವು, ಮಹಾಘನಿ ಮತ್ತು ತೇಗ ಮರಗಳನ್ನು ನೆಡುವುದು ಸೂಕ್ತ. ಬದುಗಳ ಸುತ್ತಲು ಮೇವಿನ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಿ ಇದರಿಂದ ಬದುಗಳು ಭದ್ರವಾಗಿರುವುದಲ್ಲದೆ ಜಮೀನುಗಳಲ್ಲಿ ನೀರಿನ ತೇವಾಂಶವನ್ನು ಕಾಪಾಡುತ್ತದೆ ಮತ್ತು ಜಾನುವಾರುಗಳಿಗೆ ಹಸಿರು ಹುಲ್ಲು ಲಭ್ಯವಾಗುತ್ತದೆ. ಈಗಾಗಲೇ ಬಿತ್ತನೆ ಮಾಡಿರುವ ಹೊಲದಲ್ಲಿ ನಿಂತಂತಹ ಮಳೆ ನೀರನ್ನು ಕಾಲುವೆ ಮಾಡುವುದರ ಮೂಲಕ ಹೊರ ಹರಿಯಬೇಕಾಗಿದೆ ಹೀಗೆ ಮಾಡುವುದರ ಮೂಲಕ ಸಸಿಗಳ ಬೇರು ಕೊಳೆಯುವುದನ್ನು ತಡೆಯಬಹುದಾಗಿದೆ. ಮಣ್ಣಿನ ತೇವಾಂಶದ ಆಧಾರದ ಮೇಲೆ ಕೃಷಿ ಬೆಳೆಗಳಾದ ತೊಗರಿ, ಹೆಸರು, ಉದ್ದು, ಹಲಸಂದಿ, ಹರಳು, ಎಳ್ಳು ಬಿತ್ತನೆ ಮಾಡಬಹುದಾಗಿದೆ. ವಾಣಿಜ್ಯ ಕೋಳಿಗಳಿಗೆ ಆಹಾರ ಸೇವನೆ ಸರಿಯಾದ ಪ್ರಮಾಣದಲ್ಲಿದ್ದರೂ ದಿನದ ತಂಪಾದ ಹೊತ್ತಿನಲ್ಲಿ ಅಂದರೆ ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಆಹಾರ ಒದಗಿಸುವುದು ಸೂಕ್ತ. ಕೋಳಿ ಶೆಡ್ ಮತ್ತು ರೇಷ್ಮೆ ಹುಳು ಘಟಕಗಳ ಕೋಣೆಯಲ್ಲಿ ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕು. ಹಾಲಿನ ಗುಣಮಟ್ಟಕಾಪಾಡಲು ಹೈನುರಾಸುಗಳಿಗೆ ಸಮತೋಲನ ಆಹಾರ ಪೂರೈಕೆ ಅತ್ಯವಶ್ಯಕ ಎಂದು ಡಾ. ವಿ. ಗೋವಿಂದಗೌಡರು ತಿಳಿಸಿದ್ದಾರೆ.
ಡಾ. ವಿ. ಗೋವಿಂದಗೌಡರ ಫೋಟೋ 24-ಟಿಪಿಟಿ5ರಲ್ಲಿ ಕಳುಹಿಸಲಾಗಿದೆ.