ಬೆಂಗ್ಳೂರಲ್ಲಿ ಇಂದೂ ಕೂಡ ಮಳೆ ಆಗುವ ಸಾಧ್ಯತೆ
ಬೆಂಗಳೂರು ನಗರದಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ಹವಾಮಾನ ಇಲಾಖೆ
ಬೆಂಗಳೂರು(ಅ.08): ರಾಜಧಾನಿ ಬೆಂಗಳೂರಿನಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ಮುಂದುವರೆದಿದೆ. ಸೋಮವಾರ ನಗರದ ಬಹುತೇಕ ಕಡೆಗಳಲ್ಲಿ ಮುಂಜಾನೆಯಿಂದಲೂ ಮೋಡಕವಿದ ವಾತಾವರಣವಿತ್ತಾದರೂ, ಮಧ್ಯಾಹ್ನದ ವೇಳೆ ಬಿರುಬಿಸಿಲು ಕಂಡು ಬಂತು. ಆದರೆ, ರಾತ್ರಿ 8.30ರ ಸುಮಾರಿಗೆ ನಗರದ ಹಲವೆಡೆಗಳಲ್ಲಿ ಮಳೆ ಸುರಿಯಲು ಆರಂಭಿಸಿ ತಡರಾತ್ರಿವರೆಗೂ ಮುಂದುವರೆದಿತ್ತು.
ಬೊಮ್ಮನಹಳ್ಳಿ, ಚಂದಾಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ಕಾರ್ಪೋರೇಶನ್, ಜಿಗಣಿ, ಮೈಸೂರು ಬ್ಯಾಂಕ್ ಸರ್ಕಲ್, ಜೆ.ಪಿ.ನಗರ, ಜಯನಗರ 4ನೇ ಬ್ಲಾಕ್, ಹೆಬ್ಬಾಳ, ಚಾಮರಾಜಪೇಟೆ,ಯಶವಂತಪುರ, ಕೆ.ಆರ್. ಮಾರುಕಟ್ಟೆ, ಮೈಸೂರು ರಸ್ತೆ, ಶಿವಾನಂದ ವೃತ್ತ ಸೇರಿ ನಗರದ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು.
ಮಳೆ ಅವಾಂತರಕ್ಕೆ ನಲುಗಿದ ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ನೀರು, 600 ಬೈಕ್ ಮುಳುಗಡೆ
ನಗರದಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.