Asianet Suvarna News Asianet Suvarna News

ತುಮಕೂರಿನಲ್ಲಿ ತತ್ತರಿಸಿದ ಜನಕ್ಕೆ ತಂಪೆರೆದ ವರುಣ

ಕಳೆದ ಎರಡು ದಿವಸಗಳಿಂದ ತುಂತುರು ಮಳೆ ಬೀಳುತ್ತಿದ್ದ ತುಮಕೂರಿನಲ್ಲಿ ಬುಧವಾರ ಸಂಜೆ ಕೊಂಚ ಜೋರು ಮಳೆ ಸುರಿಯಿತು.ಸಂಜೆ 7.15 ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗಳ ಕಾಲ ಸುರಿಯಿತು. ದಿಢೀರ್‌ ಸುರಿದ ಮಳೆಯಿಂದಾಗಿ ಜನರು ಅಂಗಡಿ, ಮುಂಗಟ್ಟುಗಳ ಮುಂದೆ ಆಶ್ರಯ ಪಡೆದರೆ ಮತ್ತೆ ಕೆಲವರು ಮೇಲ್ಸೇತುವೆ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರು.

Rain in Tumkur snr
Author
First Published Oct 12, 2023, 9:50 AM IST | Last Updated Oct 12, 2023, 9:50 AM IST

 ತುಮಕೂರು :  ಕಳೆದ ಎರಡು ದಿವಸಗಳಿಂದ ತುಂತುರು ಮಳೆ ಬೀಳುತ್ತಿದ್ದ ತುಮಕೂರಿನಲ್ಲಿ ಬುಧವಾರ ಸಂಜೆ ಕೊಂಚ ಜೋರು ಮಳೆ ಸುರಿಯಿತು.ಸಂಜೆ 7.15 ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗಳ ಕಾಲ ಸುರಿಯಿತು. ದಿಢೀರ್‌ ಸುರಿದ ಮಳೆಯಿಂದಾಗಿ ಜನರು ಅಂಗಡಿ, ಮುಂಗಟ್ಟುಗಳ ಮುಂದೆ ಆಶ್ರಯ ಪಡೆದರೆ ಮತ್ತೆ ಕೆಲವರು ಮೇಲ್ಸೇತುವೆ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರು.

5  ತಿಂಗಳು ಮೊದಲೆ ಬೇಸಿಗೆ ಶೆಕೆ

ಬೆಂಗಳೂರು(ಅ.11): ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆಯ ಕೊರತೆ ಪರಿಣಾಮ ಗರಿಷ್ಠ ಉಷ್ಣಾಂಶದಲ್ಲಿ ವಾಡಿಕೆಗಿಂತ ಸರಾಸರಿ 3 ರಿಂದ 4 ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾಗಿದ್ದು, ಇದರಿಂದ ರಾಜ್ಯದ ಹಲವು ಜಿಲ್ಲೆಗಳ ಜನ- ಜಾನುವಾರು ತತ್ತರಿಸಿ ಹೋಗಿವೆ. ಹೀಗಾಗಿ ಬೇಸಿಗೆಗೆ 5 ತಿಂಗಳು ಮೊದಲೇ ರಾಜ್ಯದಲ್ಲಿ ಭಾರೀ ಸೆಖೆಯ ವಾತಾವರಣ ನಿರ್ಮಾಣವಾಗಿದೆ.

ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಕಾರ ರಾಜ್ಯದಲ್ಲಿ 85.2 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ 63.5 ಸೆಂ.ಮೀ. ಮಳೆಯಾಗಿದ್ದು, ಶೇ.25ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ ಅ.10ರವರೆಗೆ ವಾಡಿಕೆ ಪ್ರಕಾರ 5.9 ಸೆಂ.ಮೀ. ಮಳೆಯ ಬದಲು 2.2 ಸೆಂ.ಮೀ ಮಾತ್ರ ಮಳೆಯಾಗಿದ್ದು, ಶೇ.62 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ರಾಜ್ಯದ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ.

ಶೇ.32ರಷ್ಟು ಮಳೆ ಕೊರತೆ: ಈ ವರ್ಷದ ಆಗಸ್ಟ್‌ನದ್ದು 122 ವರ್ಷಗಳಲ್ಲೇ ಭೀಕರವೆನಿಸಿದ ಬರ!

ಬೆಂಗಳೂರು ಸೇರಿದಂತೆ ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹೊನ್ನಾವರ, ಕಲಬುರಗಿ, ಮಂಡ್ಯ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ಬಾದಾಮಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ.

ಭಾರೀ ಏರಿಕೆ:

ಉತ್ತರ ಒಳನಾಡಿನಲ್ಲಿ ಮುಂಗಾರು ಅವಧಿಯಲ್ಲಿ ಉಂಟಾದ ಮಳೆ ಕೊರತೆ ಈಗಲೂ ಮುಂದುವರೆದಿದೆ. ಬಾಗಲಕೋಟೆಯಲ್ಲಿ ಮಂಗಳವಾರ ವಾಡಿಕೆಗಿಂತ ಐದು ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಿದೆ. ಬಾಗಲಕೋಟೆಯಲ್ಲಿ ಅಕ್ಟೋಬರ್‌ನ ವಾಡಿಕೆ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಶಿಯಸ್‌ ಆಗಿದೆ.

ಮಲೆನಾಡಲ್ಲೂ ಬಿಸಿಲ ಬೇಗೆ:

ಮಲೆನಾಡು ಭಾಗದಲ್ಲಿ ಮುಂಗಾರು ಆರಂಭದಿಂದಲೂ ಭಾರಿ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಕಳೆದ ಮೂರು ತಿಂಗಳಲ್ಲಿ ಜುಲೈನಲ್ಲಿ ಸ್ವಲ್ಪ ಮಳೆಯಾಗಿರುವುದನ್ನು ಬಿಟ್ಟರೆ ಮಳೆ ಕೊರತೆಯಾಗಿದೆ. ಹೀಗಾಗಿ, ಹಾಸನದಲ್ಲಿ ಸೋಮವಾರ 28.4 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದ್ದು, ವಾಡಿಕೆಗಿಂತ ಐದು ಡಿಗ್ರಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಮಂಗಳವಾರ ವಾಡಿಕೆಗಿಂತ ಮೂರು ಡಿಗ್ರಿ ಸೆಲ್ಶಿಯಸ್‌ ಏರಿಕೆ ಕಂಡು ಬಂದಿದೆ. ಉಳಿದಂತೆ ಗದಗ, ಚಿತ್ರದುರ್ಗದಲ್ಲಿ ವಾಡಿಕೆ ಪ್ರಮಾಣಕ್ಕಿಂತ ನಾಲ್ಕು ಡಿಗ್ರಿ ಸೆಲ್ಶಿಯಸ್‌ ಏರಿಕೆಯಾಗಿದೆ. ಕಲಬುರಗಿ, ಮಂಡ್ಯ, ರಾಯಚೂರು ಹಾಗೂ ವಿಜಯಪುರದಲ್ಲಿ ವಾಡಿಕೆ ಪ್ರಮಾಣಕ್ಕಿಂತ 3 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾದರೆ, ಬೆಳಗಾವಿ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ, ಹೊನ್ನಾವರ ಹಾಗೂ ಕಾರವಾರದಲ್ಲಿ ತಲಾ 2 ಡಿಗ್ರಿ ಸೆಲ್ಶಿಯಸ್‌ ಕಳೆದ ಮೂರು-ನಾಲ್ಕು ದಿನದಲ್ಲಿ ಹಚ್ಚಳವಾದ ವರದಿಯಾಗಿದೆ.

ಕನಿಷ್ಠ ಉಷ್ಣಾಂಶವೂ ಇಳಿಕೆ:

ಇದೇ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ ವಾಡಿಕೆಗಿಂತ ಅತಿ ಕಡಿಮೆ ದಾಖಲಾಗಿದೆ. ಬಾಗಲಕೋಟೆಯಲ್ಲಿ ಕಳೆದ ಭಾನುವಾರ ವಾಡಿಕೆ ಪ್ರಮಾಣಕ್ಕಿಂತ 7 ಡಿಗ್ರಿ ಸೆಲ್ಶಿಯಸ್‌, ಸೋಮವಾರ 6 ಡಿ.ಸೆ. ಕಡಿಮೆ ಉಷ್ಣಾಂಶ ದಾಖಲಾಗಿದೆ. ವಿಜಯಪುರದಲ್ಲಿ ಭಾನುವಾರ 6 ಡಿ.ಸೆ. ಮಂಗಳವಾರ 5 ಡಿ.ಸೆ. ಕಡಿಮೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎರಡು ದಿನ ಈ ಜಿಲ್ಲೆಗಳಲ್ಲಿ ಹೆಚ್ಚು ತಾಪ

ವಿಜಯಪುರ, ಗದಗ, ಧಾರವಾಡ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ವಾಡಿಕೆ ಪ್ರಮಾಣಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಿನ ಪ್ರಮಾಣದ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Latest Videos
Follow Us:
Download App:
  • android
  • ios