Asianet Suvarna News Asianet Suvarna News

ಕಾಫಿನಾಡು, ಉತ್ತರ ಕನ್ನಡದಲ್ಲಿ ಮಳೆ ಅಬ್ಬರ; ಇನ್ನೆಷ್ಟು ದಿನ?

ರಾಜ್ಯದ ಹಲವು ಕಡೆ ಸೋಮವಾರ ಮಳೆ/ ಹೋಳಿ ಸಂಭ್ರಮದಲ್ಲಿದ್ದವರಿಗೆ ವರುಣನ ಸಿಂಚನ/ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ/ ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆರಾಯ

Rain In Chikkamagaluru Uttara Kannada weather forecast Karnataka mah
Author
Bengaluru, First Published Mar 29, 2021, 9:59 PM IST

ಬೆಂಗಳೂರು/ ಚಿಕ್ಕಮಗಳೂರು/ಉತ್ತರ ಕನ್ನಡ(ಮಾ.  29)  ಚಿಕ್ಕಮಗಳೂರು ಜಿಲ್ಲೆ  ಕಳಸ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಯ ನಂತರ ಧಾರಾಕಾರ ಮಳೆ ಸುರಿದಿದೆ.

ಬೆಳಗ್ಗೆ ಯಿಂದಲೂ ಮೋಡಕವಿದ ವಾತವರಣ ಇತ್ತು. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರಣ ತಂಪು ಎರಚಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ,ಹೊರನಾಡು, ಹಳ್ಳುವಳ್ಳಿ, ಹಿರೇಬೈಲು ಸುತ್ತಮುತ್ತ ಭಾರಿ ಮಳೆಯಾಗಿದೆ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ.

ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ..ಗುಡುಗು ಸಿಡಿಲು

ಉತ್ತರಕನ್ನಡ ಜಿಲ್ಲೆಯ ಮಲೆನಾಡು, ಬಯಲುಸೀಮೆ ಭಾಗದಲ್ಲಿ ಭಾರೀ ಮಳೆಯಾಗಿದೆ.  ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ ಭಾಗಗಳಲ್ಲಿ ಗುಡುಗು, ಮಿಂಚು, ಗಾಳಿ ಸಹಿತ  ಮಳೆ ಅಬ್ಬರಿಸಿದೆ. ಸಿದ್ಧಾಪುರ ಭಾಗದ ಕೆಲವೆಡೆ ಆಲಿಕಲ್ಲು ಮಳೆ ಸುರಿದಿದೆ.  ಮುಂಡಗೋಡ ತಾಲೂಕಿನ ಸಿಂಗನಳ್ಳಿ ಬಳಿ ಸಿಡಿಲು ಬಡಿದು ಸ್ಥಳದಲ್ಲಿಯೇ 17 ಕುರಿಗಳು ಸಾವು ಕಂಡಿವೆ. ಮಾನು ನಾಗು ಶಳಕೆ  ಎಂಬವರಿಗೆ ಸೇರಿದ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಅದೃಷ್ಟವಷಾತ್ ಕುರಿಗಾಯಿ ಈ ಸ್ಥಳದಿಂದ ದೂರವಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಂಠಿ, ಭತ್ತ ಕೊಯ್ಲು ಮಾಡಿದ್ದ ರೈತರಿಗೆ  ಈ ಮಳೆ ಸಂಲಕಷ್ಟ ತಂದಿದೆ.  ಕೆಲ ಭಾಗದ ಮಾವಿನ ಫಸಲಿನ ಮೇಲೂ ಕೆಟ್ಟ ಪರಿಣಾಮ ಬೀರಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಮಾರ್ಚ್ 30ರ ನಂತರವೂ ಎರಡು ದಿನ ಭಾರಿ ಮಳೆಗುವ ಸಾಧ್ಯತೆ ಇದೆ.

 

Follow Us:
Download App:
  • android
  • ios