ಶಿರಾ (ಸೆ.22):  ಹುಲಿಕುಂಟೆ ಹೋಬಳಿಯ ಕರೆಕಲ್ಲಹಟ್ಟಿಸುತ್ತಮುತ್ತ ಸುಮಾರು 80 ರಿಂದ 100 ಎಕರೆ ಪ್ರದೇಶದಲ್ಲಿ ಹಾಗೂ ಗೌಡಗೆರೆ ಹೋಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆ ಮಳೆಗೆ ಸಿಲುಕಿ ನಷ್ಟವಾಗಿದೆ. 

ಲಕ್ಷಾಂತರ ರು.ಗಳ ನಷ್ಟವಾಗಿದ್ದು, ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಕೃಷಿ ಕಾಯಿದೆ ಗುಟ್ಟುಗಳೇನು? ರೈತ ವಿರೋಧಿಯಾ-ಸ್ನೇಹಿಯಾ? ...

ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆಯು ಕೊಳೆರೋಗ ಬಂದು ನೆಲಕಚ್ಚಿದೆ ಸರಕಾರ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಲ್ಲಿಸಿದ್ದು ಒಂದು ಕಡೆ ರೈತರನ್ನು ಕಂಗಾಲಾಗಿಸಿದರೆ ಇನ್ನೊಂದು ಕಡೆ ಮಳೆ ಆತಂಕಕ್ಕೆ ಈಡು ಮಾಡಿದೆ