Asianet Suvarna News Asianet Suvarna News

ಮಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಅಬ್ಬರ ಇಳಿಕೆ

ಬೆಳ್ತಂಗಡಿ ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳಿಂದ ಮತ್ತೆ ಜೋರಾಗಿ ಅಬ್ಬರಿಸಿದ್ದ ಮಳೆ ಇಳಿಮುಖವಾಗಿರುವುದು ಜನರಲ್ಲಿ ಸಂತಸ ತಂದಿದೆ. ನದಿ, ಹಳ್ಳಗಳಲ್ಲಿ ದಾಟಿಕೊಂಡು ಸಂಚರಿಸುವಷ್ಟು ನೀರು ಹರಿಯುತ್ತಿದೆ. ಬುಧವಾರ ನದಿಗಳಲ್ಲಿ ಉಕ್ಕಿದ ನೀರಿನೊಂದಿಗೆ ಬಂದಿದ್ದ ಹೂಳು ಮತ್ತೆ ತೋಟಗಳನ್ನು ಆವರಿಸಿದೆ.

Rain decreases in Mangalore
Author
Bangalore, First Published Sep 27, 2019, 2:20 PM IST

ಮಂಗಳೂರು(ಸೆ.27): ಬೆಳ್ತಂಗಡಿ ಭಾಗದಲ್ಲಿ ಬೆಳಗ್ಗಿನಿಂದಲೇ ಬಿಸಿಲಿನಿಂದ ಕೂಡಿದ ವಾತಾವರಣ ತಾಲೂಕಿನಲ್ಲಿತ್ತು. ಪ್ರವಾಹ ಬಾಧಿತ ಪ್ರದೇಶದಲ್ಲೂ ಮಳೆ ಅಬ್ಬರವಿಲ್ಲ. ನದಿ, ಹಳ್ಳಗಳಲ್ಲಿ ದಾಟಿಕೊಂಡು ಸಂಚರಿಸುವಷ್ಟು ನೀರು ಹರಿಯುತ್ತಿದೆ.

ಆದರೆ ಬುಧವಾರ ನದಿಗಳಲ್ಲಿ ಉಕ್ಕಿದ ನೀರಿನೊಂದಿಗೆ ಬಂದಿದ್ದ ಹೂಳು ಮತ್ತೆ ತೋಟಗಳನ್ನು ಆವರಿಸಿದೆ. ದಿಡುಪೆ ಕುಕ್ಕಾವು ಪರಿಸರದಲ್ಲಿ ಪ್ರವಾಹದ ಬಳಿಕ ತಾತ್ಕಾಲಿಕವಾಗಿ ಹೊಸದಾಗಿ ನಿರ್ಮಿಸಿದ್ದ ಕೆಲ ರಸ್ತೆಗಳು ಮತ್ತೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಮಂಗಳೂರು: ಅರಳಿದ ಮಲ್ಲಿಗೆ ಕೇಳಿದ ಬಾಲಿವುಡ್ ತಾರೆ..!

ಪಶ್ವಿಮ ಘಟ್ಟದಲ್ಲಿ ಭಾರಿ ಮಳೆಯಾಗಿದ್ದರಿಂದ ತಾಲೂಕಿನ ನೇತ್ರಾವತಿ ನದಿಯ ಉಪನದಿಗಳಲ್ಲಿ ಹಾಗೂ ಮೃತುಂಜಯ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಬುಧವಾರ ಸಂಜೆ ಜನರಲ್ಲಿ ಒಮ್ಮೆ ಆತಂಕ ಸೃಷ್ಟಿಯಾಗಿತ್ತು. ಆದರೆ ಗುರುವಾರ ನದಿಗಳಲ್ಲಿ ನೀರಿನ ಮಟ್ಟಇಳಿಕೆಯಾಗಿದೆ. ಹೊಳೆ ಬದಿಯಲ್ಲಿರುವ ತೋಟಗಳಿಗೆ ನೀರು ನುಗ್ಗಿದ್ದರಿಂದ ಮತ್ತೆ ಕೃಷಿ ಭೂಮಿಯಲ್ಲಿ ಮರಳು ತುಂಬಿಕೊಂಡಿದೆ.

ಮಂಗಳೂರು: ಗ್ರಾಮ ಪಂಚಾಯತಿಯಲ್ಲಿ ನಗದು ರಹಿತ ವ್ಯವಹಾರ

ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸಾಕಷ್ಟುಮಳೆ ಇರಲಿಲ್ಲ. ಬಿಸಿಲು ಹಾಗೂ ಮಳೆ ಇದ್ದರೂ ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ತಾಲೂಕಿನಲ್ಲಿ ಸಣ್ಣ ಮಟ್ಟದಲ್ಲಿ ಮಳೆ ಆರಂಭವಾಗಿತ್ತು. ಆದರೆ ಚಾರ್ಮಾಡಿ ಹಾಗೂ ದಿಡುಪೆ ಪ್ರದೇಶದ ನದಿ, ಹಳ್ಳಗಳಲ್ಲಿ ಮಾತ್ರ ನೀರು ಏಕಾಏಕಿಯಾಗಿ ಏರಿಕೆಯಾಗಿತ್ತು. ಸಂಜೆಯ ವೇಳೆ ಸುರಿದ ಭಾರಿ ಮಳೆಗೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಮಲವಂತಿಗೆ ಗ್ರಾಮದ ದಿಡುಪೆಯ ಬಾಳೆಹಿತ್ತಿಲು, ನೆಕ್ಕಿಲು, ಪುಣ್ಕೆದಡಿ, ದಡ್ಡುಗದ್ದೆ, ತೆಂಗೆತ್ತಮಾರು, ಮಿತ್ತಬಾಗಿಲು ಗ್ರಾಮದ ಕುಕ್ಕಾವು ಹಾಗೂ ಚಾರ್ಮಾಡಿಯ ಫರ್ಲಾಣಿ, ಅಂತರ, ಕೊಳಂಬೆ, ನಳ್ಳಿಲುಗಳಲ್ಲಿ ನದಿ, ಹಳ್ಳಗಳಲ್ಲಿ ನೀರಿನಮಟ್ಟಏಕಾಏಕಿ ಏರಿಕೆಯಾಗಿ, ತೋಟಗಳಿಗೆ ಮತ್ತೆ ನೀರು ನುಗ್ಗಿತ್ತು. ರಾತ್ರಿ ವೇಳೆಗೆ ನೀರಿನ ಮಟ್ಟಇಳಿಕೆಯಾಗಿ ಜನರು ನಿಟ್ಟುಸಿರು ಬಿಡುವಂತಾಗಿತ್ತು.

ರಾಜ್ಯದ ಅತಿದೊಡ್ಡ ಕ್ಲಾಕ್‌ ಟವರ್‌ ‘ಟಿಕ್‌ ಟಿಕ್‌’ಗೆ ದಿನಗಣನೆ

ಪ್ರವಾಹದ ಬಳಿಕ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ನಾನಾ ತಾಲೂಕುಗಳ ವಿದ್ಯಾರ್ಥಿಗಳು, ಸಾವಿರಾರು ಮಂದಿ ಸ್ವಯಂಸೇವಕರು, ಸಾರ್ವಜನಿಕರು ಪ್ರವಾಹ ಬಾಧಿತ ಪ್ರದೇಶದಲ್ಲಿ ಶ್ರಮದಾನ ನಡೆಸಿದ್ದರು. ಚಾರ್ಮಾಡಿಯ ಕೊಳಂಬೆ ಹಾಗೂ ಅಂತರದಲ್ಲಿ ಉಜಿರೆಯ ರಾಜೇಶ್‌ ಪೈ ಹಾಗೂ ಮೋಹನ್‌ ಕುಮಾರ್‌ ನೇತೃತ್ವದ ಉದ್ಯಮಿಗಳ ತಂಡ ಇಲ್ಲಿನ ಜನರಿಗೆ ಬದುಕು ಕಟ್ಟುವ ಕೆಲಸಕ್ಕೆ ಕೈಜೋಡಿಸಿದ್ದರು.

ಮರಳು ತೆರವು ಕಾರ್ಯಾಚರಣೆ:

ಈ ಪರಿಸರದಲ್ಲಿ ತೋಟಗಳಿಗೆ ನುಗ್ಗಿದ ಮರಳು, ಭಾರಿ ಗಾತ್ರಗಳ ಮರಗಳ ತೆರವು ಮನೆಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಮುಂದುವರಿಯುತ್ತಿದೆ. ಆದರೆ ಬುಧವಾರ ಈ ಪ್ರದೇಶದ ತೋಟಗಳಿಗೆ ಮತ್ತೆ ನದಿಯ ಹೂಳು ನುಗ್ಗಿರುವುದು ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಅದೇ ರೀತಿ ದಿಡುಪೆ ಹಾಗೂ ಕುಕ್ಕಾವಿನಲ್ಲಿ ಶಾಸಕ ಹರೀಶ ಪೂಂಜ ಹಾಗೂ ತಾಲೂಕಾಡಳಿತದಿಂದ ನಿರ್ವಹಿಸಿದ ತುರ್ತು ಕಾಮಗಾರಿಗಳಿಗೂ ಹಾನಿಯಾಗಿದೆ.

ಹೂಳುಗಳೇ ಪ್ರವಾಹಕ್ಕೆ ಕಾರಣ?

ಮಳೆ ಆರಂಭವಾದ ಕೂಡಲೇ ನದಿ ದಡದಲ್ಲಿ ವಾಸಿಸುತ್ತಿರುವ ಜನರು ಭಯದಿಂದಲೇ ಇರುವಂತಾಗಿದೆ. ಪ್ರವಾಹದಲ್ಲಿ ಕೊಚ್ಚಿ ಬಂದ ಮರಳು ಕಲ್ಲುಗಳು ಹಾಗೂ ಮರಗಳಿಂದಾಗಿ ಬಹುತೇಕ ನದಿಗಳು ಹೂಳಿನಿಂದ ತುಂಬಿದೆ. ಕಿಂಡಿ ಅಣೆಕಟ್ಟುಗಳು ಹಾಗೂ ಕಿರು ಸೇತುವೆಗಳ ಸಮೀಪವೂ ಹೂಳು ತುಂಬಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲ. ನದಿಗಳಲ್ಲಿನ ಬಹುತೇಕ ಹೊಂಡಗಳು ತುಂಬಿದ್ದು ಮಳೆ ನೀರು ಒಡಲು ಸೇರಿಸಿಕೊಳ್ಳಲು ನದಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ನೀರು ನೇರವಾಗಿ ದಡಮೀರಿ ಹರಿಯುತ್ತಿದೆ. ನದಿಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸದಿದ್ದರೆ ಪ್ರತಿ ಮಳೆಗೂ ಇದೇ ರೀತಿಯ ಪ್ರವಾಹದ ಭೀತಿ ಎದುರಾಗಲಿದೆ.

Follow Us:
Download App:
  • android
  • ios