ಔಷಧಿ ಮಾರಾಟ ಮಳಿಗೆ ಮೇಲೆ ದಾಳಿ: ನಿಷೇಧಿತ ಕೀಟನಾಶಕ ಪತ್ತೆ

ತಾಲೂಕಿನ ವೈ,ಎನ್‌.ಹೊಸಕೋಟೆ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಭಾಗ್ಯಲಕ್ಷ್ಮೀ ಏಜೆನ್ಸೀಸ್‌ ಕೀಟನಾಶಕ ಔಷಧಿ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿದ್ದು ನಿಯಮ ಉಲ್ಲಾಂಘಿಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 13 ಸಾವಿರ ಮೌಲ್ಯದ ನಿಷೇಧಿತ ಕೀಟನಾಶಕ ಔಷಧಿಗಳ ಮಾರಾಟದ ವಿರುದ್ಧ ಸೂಕ್ತ ಕ್ರಮವಹಿಸಿರುವುದಾಗಿ ಇಲ್ಲಿನ ತುಮಕೂರು ಜಿಲ್ಲಾ ಜಂಟಿ ಕೃಷಿ ಇಲಾಖೆಯ ಪರಿವೀಕ್ಷಕ ಹಾಗೂ ಜಾರಿದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

Raid on drug store: Banned pesticide found snr

 ಪಾವಗಡ : ತಾಲೂಕಿನ ವೈ,ಎನ್‌.ಹೊಸಕೋಟೆ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಭಾಗ್ಯಲಕ್ಷ್ಮೀ ಏಜೆನ್ಸೀಸ್‌ ಕೀಟನಾಶಕ ಔಷಧಿ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿದ್ದು ನಿಯಮ ಉಲ್ಲಾಂಘಿಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 13 ಸಾವಿರ ಮೌಲ್ಯದ ನಿಷೇಧಿತ ಕೀಟನಾಶಕ ಔಷಧಿಗಳ ಮಾರಾಟದ ವಿರುದ್ಧ ಸೂಕ್ತ ಕ್ರಮವಹಿಸಿರುವುದಾಗಿ ಇಲ್ಲಿನ ತುಮಕೂರು ಜಿಲ್ಲಾ ಜಂಟಿ ಕೃಷಿ ಇಲಾಖೆಯ ಪರಿವೀಕ್ಷಕ ಹಾಗೂ ಜಾರಿದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು ಸಾರ್ವಜನಿಕ ಮಾಹಿತಿ ಮೇರೆಗೆ ಶನಿವಾರ ತಾಲೂಕಿನ ವೈ.ಎನ್‌.ಹೊಸಕೋಟೆಯ ಶ್ರೀ ಭಾಗ್ಯಲಕ್ಷ್ಮೀ ಕೀಟನಾಶಕ ಔಷಧಿ ಮಾರಾಟ ಮಳಿಗೆ ಮೇಲೆ ನಿಯ ಮನುಸಾರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರ ಕಚೇರಿ ಜಾರಿದಳದ ಅದಿಕಾರಿಗಳಿಂದ ದಾಳಿ ನಡೆಸಿ ಪರಿಶೀಲಿಸಲಾಗಿದ್ದು, ಈ ವೇಳೆ ಕೀಟನಾಶಕ ಕಾಯ್ದೆಯ ನಿಯಮ ಉಲ್ಲಾಂಘಿಸಿ 13 ಸಾವಿರ ಮೌಲ್ಯದ ನಿಷೇಧಿತ ಕೀಟನಾಶಕ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ.

ಇದರಲ್ಲಿ 9.5 ಲೀಟರ್‌ನಷ್ಟುಕೀಟನಾಶಕ ಖರೀದಿಸಿ ಮಾರಾಟ ಮಾಡಿದ್ದು, ಸದರಿ ಮಾಲೀಕರು ನಿಯಮ ಉಲ್ಲಂಘಿಸಿ ಈಗಾಗಲೇ 84 ಸಾವಿರ ಬೆಲೆಬಾಳುವ 110ಲೀಟರ್‌ ಪ್ರಮಾಣದ ನಿಷೇಧಿತ ಕೀಟನಾಶಕ ಮಾರಾಟ ಮಾಡಿದ್ದಾರೆ. ಮಜರ್‌ ಮೂಲಕ ಉಳಿಕೆಯ ನಿಷೇಧಿತ ಕೀಟನಾಶಕ ಔಷಧಿಯನ್ನು ವಶಕ್ಕೆ ಪಡೆದಿದ್ದು, ಸದರಿ ನಿಯಮ ಪಾಲಿಸುವಲ್ಲಿ ಉದಾಶೀನತೆ ತೋರಿದ್ದು ವ್ಯವಸ್ಥಿತ ರೀತಿಯ ದಾಖಲೆಗಳಾಗಲಿ,ಕೃಷಿ ಪರಿಕರ ನಿರ್ವಹಣೆ ಹಾಗೂ ದಾಸ್ತಾನು ದರಪಟ್ಟಿಪ್ರದರ್ಶನವಾಗಲಿ ಮಳಿಗೆಯಲ್ಲಿ ಕೈಗೊಂಡಿರುವುದಿಲ್ಲ ಎಂದು ಅವರು ತಿಳಿಸಿದರು.

ನಿಷೇಧಿತ ಔಷಧಿ ಮಾರಾಟ ಕುರಿತು ನಿಯಮ ಉಲ್ಲಂಘನೆ ವಿರುದ್ಧ ಮಾರಾಟಗಾರರಿಗೆ ಕಾರಣ ಕೇಳಿ ನೋಟಿಸ್‌ ಜಾರಿಪಡಿಸಿದ್ದು, ಒಂದು ವಾರದೊಳಗೆ ಸೂಕ್ತ ಮಾಹಿತಿಯೊಂದಿಗೆ ಸಮಾಜಾಯಿಸಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಸಂಷದ್‌ ಉನ್ನಿಸಾ ಹಾಗೂ ವೈ.ಎನ್‌.ಹೊಸಕೋಟೆಯ ರೈತ ಸಂಪರ್ಕ ಕೇಂದ್ರದ ಯಲ್ಲಪ್ಪ ಕೃಷಿ ಸಂಜೀವಿನಿ ತಜ್ಞ ಜೆ.ಚನ್ನಕೇಶವ,ಎಟಿಎಂ ಆತ್ಮ ಯೋಜನೆಯ ಅಧಿಕಾರಿಗಳಿದ್ದರು.

Latest Videos
Follow Us:
Download App:
  • android
  • ios