Raichur: ಹಸಿ ಕಸ - ಒಣ ಕಸ ವಿಂಗಡಿಸಿ ಕಸವನ್ನು ನೀಡುವಂತೆ ನಗರಸಭೆ ಸೂಚನೆ!

ರಾಯಚೂರು ನಗರ ಅಂದರೆ ಪ್ರತಿಯೊಬ್ಬರೂ ಕೊಳಚೆ ಮತ್ತು ‌ಕಸದ ಬಗ್ಗೆಯೇ‌ ಮಾತನಾಡುತ್ತಾರೆ. ನಗರದ ಯಾವ ಮೂಲೆಯಲ್ಲಿ ಹೋಗಿದ್ರೂ ಗಬ್ಬುನಾರು ಕಸದ ರಾಶಿಯೇ ಬಿದ್ದಿರುತ್ತೆ. ಇಂತಹ ಕಸವನ್ನು ಸಂಗ್ರಹಣೆ ‌ಮಾಡಲು  ರಾಯಚೂರು ನಗರಸಭೆ ಹೊಸ ಹೊಸ ಪ್ಲಾನ್ ಹಾಕಿಕೊಂಡು ‌ಕಸ ಸಂಗ್ರಹಣೆಗೆ ಮುಂದಾಗಿದೆ. 

Raichur Municipal Council instructed to separate raw garbage and dry garbage gvd

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜು.23): ರಾಯಚೂರು ನಗರ ಅಂದರೆ ಪ್ರತಿಯೊಬ್ಬರೂ ಕೊಳಚೆ ಮತ್ತು ‌ಕಸದ ಬಗ್ಗೆಯೇ‌ ಮಾತನಾಡುತ್ತಾರೆ. ನಗರದ ಯಾವ ಮೂಲೆಯಲ್ಲಿ ಹೋಗಿದ್ರೂ ಗಬ್ಬುನಾರು ಕಸದ ರಾಶಿಯೇ ಬಿದ್ದಿರುತ್ತೆ. ಇಂತಹ ಕಸವನ್ನು ಸಂಗ್ರಹಣೆ ‌ಮಾಡಲು  ರಾಯಚೂರು ನಗರಸಭೆ ಹೊಸ ಹೊಸ ಪ್ಲಾನ್ ಹಾಕಿಕೊಂಡು ‌ಕಸ ಸಂಗ್ರಹಣೆಗೆ ಮುಂದಾಗಿದೆ. 

ರಾಯಚೂರು ನಗರದಲ್ಲಿನ 35 ವಾರ್ಡ್‌ಗಳಲ್ಲಿ ಸುಮಾರು 3 ಲಕ್ಷ 40 ಸಾವಿರ ಜನರು ವಾಸವಾಗಿದ್ದಾರೆ. ನಿತ್ಯ ಒಂದು ಅಂದಾಜಿನ ಪ್ರಕಾರ 102 ಟನ್‌ನಷ್ಟು ‌ಕಸ ಉತ್ಪಾದನೆ ಆಗುತ್ತೆ. ಹೀಗೆ ‌ಉತ್ಪಾದನೆ ಆದ ಕಸದಲ್ಲಿ 72 ಟನ್‌ಗೂ ಅಧಿಕ ಹಸಿ ಕಸವೇ ಇರುತ್ತೆ. ನಗರಸಭೆಗೆ ಹಸಿ ಕಸದ ಜೊತೆಗೆ ಒಣ ಕಸ ಮತ್ತು ‌ಸಿಎಡ್ ವೆಸ್ಟ್ ‌ಕಲಬೆರಿಕೆ ಆಗುತ್ತಿರುವುದು ದೊಡ್ಡ ತಲೆನೋವು ‌ಆಗಿದೆ. ಹೀಗಾಗಿ ಜನರು ಕಸ ನೀಡುವಾಗ ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಿದ್ರೆ ಕಸ ವಿಲೇವಾರಿ ಮಾಡಲು ತುಂಬಾ ಅನುಕೂಲವಾಗುತ್ತೆ ಅಂತರೇ ರಾಯಚೂರು ‌ನಗರಸಭೆ ಕಮಿಷನರ್ ಕೆ.ಗುರುಲಿಂಗಪ್ಪ.

ಸಾರ್ವಜನಿಕರೇ ಬೀದಿಯಲ್ಲಿ ಕಸ ಬಿಸಾಕಬೇಡಿ!: ರಾಯಚೂರು ‌ನಗರದ ಯಾವ ಬೀದಿಯಲ್ಲಿ ಹೋದರೂ ಕಸ ಬಿದ್ದಿರುತ್ತೆ..ಬೆಳಗ್ಗೆ ನಗರಸಭೆ ಪೌರಕಾರ್ಮಿಕರು ಕೆಲಸ ಮಾಡಿ ಹೋಗಿರುತ್ತಾರೆ. ಕಾರ್ಮಿಕರು ಹೋದ ಬಳಿಕ ಸಾರ್ವಜನಿಕರು ಕಸವನ್ನು ರಸ್ತೆಯ ಬದಿಯಲ್ಲಿ ಬಿಸಾಕಿ ಹೋಗುವ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಕಸ ಮುಕ್ತ ನಗರ ಮಾಡಲು ಆಗುತ್ತಿಲ್ಲ. ಕಸ ಮುಕ್ತ ನಗರ ಮಾಡಲು ಸಾರ್ವಜನಿಕರು ಸಹ ಕೈ ಜೋಡಿಸಿ ಕಸವನ್ನು ನೀಡುವ ಮುನ್ನವೇ ವಿಂಗಡಣೆ ಮಾಡಿ ನೀಡಿದ್ರೆ ಹಸಿಕಸ ಮತ್ತು ಒಣಕಸ ಮಾಡಿ ನೀಡಬೇಕು. ಅಲ್ಲದೆ ಪೌರಕಾರ್ಮಿಕರು ಬಂದಾಗ ಕಸವನ್ನು ‌ನೀಡಬೇಕು. ಬೇಕಾಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ‌ಕಸವನ್ನು ಬಿಸಾಕುವುದು ಸಾರ್ವಜನಿಕರು ನಿಲ್ಲಿಸಬೇಕಾಗಿದೆ.

ಬರ್ತ್ ಡೇ ಹೆಸರಲ್ಲಿ ಬೇರೊಂದು ಕ್ಷೇತ್ರದಲ್ಲಿ ಬಲ ಪ್ರದರ್ಶನ, ಶಿವನಗೌಡ ರಾಜಕೀಯ ನಡೆ ಕುತೂಹಲ

ಕಸ ವಿಲೇವಾರಿಗಾಗಿ ಪ್ರತ್ಯೇಕ ವಾಹನಗಳ ಖರೀದಿ: ರಾಯಚೂರು ನಗರ ದಿನೇ ದಿನೇ ಬೆಳವಣಿಗೆ ‌ಆಗುತ್ತಿದೆ. ನಗರ ಬೆಳೆದಂತೆ ಕಸದ ಉತ್ಪಾದನೆಯೂ ಹೆಚ್ಚಾಗುತ್ತಿದೆ. ನಗರದ ಹತ್ತಾರು ಹೋಟೆಲ್‌ಗಳು, ಮಾರುಕಟ್ಟೆ ಪ್ರದೇಶ ಮತ್ತು ‌ಗಂಜ್ ಪ್ರದೇಶದಲ್ಲಿ ಅತೀ ಹೆಚ್ಚು ಕಸ ಸಂಗ್ರಹಣೆ ಆಗುತ್ತಿದೆ. ನಗರದ ಕಸ ಸಂಗ್ರಹಣೆ, ವಿಲೇವಾರಿಗಾಗಿ ಹೊಸದಾಗಿ 29 ಟಿಪ್ಪರ್ ಮಾದರಿಯ ಆಟೋಗಳನ್ನು ಖರೀದಿ ಮಾಡಲಾಗಿದೆ. 6 ಪರಿಸರ ಸ್ನೇಹಿ ಬ್ಯಾಟರಿ ರಿಕ್ಷಾ ಹಾಗೂ ‌5 ಟ್ರಾಕ್ಟರ್ ಮತ್ತು 12 ಹಳೆ ಟ್ರಾಕ್ಟರ್‌ಗಳು ಹಾಗೂ ಒಂದು ಜೆಸಿಬಿ ಕಸ ವಿಲೇವಾರಿಗಾಗಿ ಬಳಕೆ ಮಾಡಲಾಗುತ್ತಿದೆ. ಅಷ್ಟೇ ರಾಯಚೂರು ನಗರದ ಶಾಸಕ ಡಾ.ಶಿವರಾಜ್ ಪಾಟೀಲ್ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪೌರಕಾರ್ಮಿಕರ ಕಸ ವಿಲೇವಾರಿ ವೀಕ್ಷಣೆ ಮಾಡಿದರು.

ನಗರದ ಸ್ವಚ್ಚತೆಗಾಗಿ ಪೌರಕಾರ್ಮಿಕರ ನಿಯೋಜನೆ: ರಾಯಚೂರು ‌ನಗರದಲ್ಲಿ ಈಗ ನಿತ್ಯ 270 ದಿನಗೂಲಿ  ನೌಕರರು ಹಾಗೂ 154 ಜನರು ಖಾಯಂ ನೌಕರರು ನಗರದ ಸ್ವಚ್ಚತೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರಸಭೆ ಸಿಬ್ಬಂದಿಗಾಗಿ ಪ್ರತಿ ತಿಂಗಳು ಕನಿಷ್ಠ 50 ಲಕ್ಷ ರೂಪಾಯಿ ಕಸ ವಿಲೇವಾರಿಗಾಗಿ ವೆಚ್ಚ ಮಾಡಲಾಗುತ್ತಿದೆ. ಇಷ್ಟು ವೆಚ್ಚ ಮಾಡಿದ್ರೂ ನಗರದಲ್ಲಿ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ‌ಮಾಡಲು ಆಗುತ್ತಿಲ್ಲ. ಹೀಗಾಗಿ ನಿತ್ಯ ಬೆಳಗ್ಗೆ ‌ಜೊತೆಗೆ ಮುಂದಿನ ದಿನಗಳಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಮತ್ತು ವಿಲೇವಾರಿ ‌ಮಾಡಬೇಕು ಎಂಬ ದೂರುಗಳು ಬಂದಿವೆ. ಆ ಬಗ್ಗೆ ಚಿಂತನೆ ‌ನಡೆದಿದೆ ಎಂದು ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ತಿಳಿಸಿದರು.

ಆಜಾದಿ ಕಾ ಅಮೃತ್ ಮಹೋತ್ಸವ: ರಾಯಚೂರು ಯುವಕರಿಂದ ವಿನೂತನ ಜಾಗೃತಿ ಜಾಥಾ

ಒಟ್ಟಿನಲ್ಲಿ ಕಸದಿಂದ ಗಬ್ಬುನಾರುತ್ತಿರುವ ರಾಯಚೂರು ನಗರವನ್ನು ಸ್ವಚ್ಚ ಮಾಡಲು ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ , ನಗರಸಭೆ ಅಧ್ಯಕ್ಷ ಲಲಿತಾ ಆಂಜನೇಯ ಕಡಗೋಲ್ ಹಾಗೂ ನಗರ ಸಭೆಯ ಪೌರಾಯುಕ್ತ ಗುರುಲಿಂಗಪ್ಪ ಹಾಗೂ ಎಲ್ಲಾ ಸದಸ್ಯರು ತೀರ್ಮಾನಿಸಿ ಹೊಸ ವಾಹನಗಳು ಖರೀದಿ ಮಾಡಿ ಕಸ ಸಂಗ್ರಹಣೆ ‌ನಡೆಸಿದ್ದಾರೆ. ಇದಕ್ಕೆ ಸಾರ್ವಜನಿಕರು ‌ಸಹಕಾರ‌ ನೀಡಿದ್ರೇ ಮುಂದಿನ ದಿನಗಳಲ್ಲಿ ‌ರಾಯಚೂರು ಕಸ ಮುಕ್ತ ನಗರವಾಗುವುದರಲ್ಲಿ ಅನುಮಾನವೇ ಇಲ್ಲ.

Latest Videos
Follow Us:
Download App:
  • android
  • ios