ರಾಯಚೂರು : BJP ಶಾಸಕ ಶಿವರಾಜ್ ಪಾಟೀಲ್ ವಿಡಿಯೋ ವೈರಲ್
- ಜಿಲ್ಲೆ ಅಭಿವೃದ್ಧಿಯಿಂದ ವಂಚಿತಗೊಂಡಿದೆ, ಸರ್ಕಾರಕ್ಕೆ ನಮ್ಮ ಧ್ವನಿ ಕೇಳಿಸುತ್ತಿಲ್ಲ.
- ರಾಯಚೂರನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿಬಿಡಿ ಎಂದು ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್
ರಾಯಚೂರು (ಅ.13): ಜಿಲ್ಲೆ ಅಭಿವೃದ್ಧಿಯಿಂದ ವಂಚಿತಗೊಂಡಿದೆ, ಸರ್ಕಾರಕ್ಕೆ ನಮ್ಮ ಧ್ವನಿ ಕೇಳಿಸುತ್ತಿಲ್ಲ. ಒಂದು ಕೆಲಸ ಮಾಡಿ ರಾಯಚೂರನ್ನು (Raichur) ತೆಲಂಗಾಣ (Telangana) ರಾಜ್ಯಕ್ಕೆ ಸೇರಿಸಿಬಿಡಿ ಎಂದು ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ (Shivaraj Patil) ಅವರ ಅಸಮಾಧಾನದ ಮಾತುಗಳ ವಿಡಿಯೋ (Video) ಇದೀಗ ವೈರಲ್‌ಗೊಂಡಿದೆ.
ಕಳೆದ ಅ.7ರಂದು ತಾಲೂಕಿನ ಮಲಿಯಾಬಾದ್‌ನಲ್ಲಿರುವ ಗೋಶಾಲೆ ಅಭಿವೃದ್ಧಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ ಮುಂದೆ ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಶಾಸಕ ಶಿವರಾಜ್ ಪಾಟೀಲ್
ರಾಜ್ಯದಲ್ಲಿ ಉತ್ತರ ಕರ್ನಾಟಕವೆಂದರೆ (North karnataka) ಹುಬ್ಬಳ್ಳಿ-ಧಾರವಾಡ (Hubli Dharwad), ಕಲ್ಯಾಣ ಕರ್ನಾಟಕವೆಂದರೆ ಕಲಬುರಗಿ (kalaburagi), ಬೀದರ್ ಜಿಲ್ಲೆಗಳಾಗಿವೆ. ಆದರೆ ರಾಯಚೂರಿಗೆ ಯಾವುದೇ ರೀತಿಯ ಮಾನ್ಯತೆ ಸಿಗುತ್ತಿಲ್ಲ, ಅಭಿವೃದ್ಧಿಯ ಕೆಲಸಗಳು ನಡೆಯುತ್ತಿಲ್ಲ. ಅರಚಿದರೂ ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ತಾವು (ಪ್ರಭು ಚವ್ಹಾಣ) ಹಿರಿಯರಿದ್ದೀರಿ, ಸಚಿವ ಸಂಪುಟದಲ್ಲಿ ಸ್ಥಾವನ್ನು ಪಡೆದಿದ್ದೀರಿ. ನಮ್ಮ ಮೇಲೆ ಕಣ್ಣು ತೆಗೆಯಿರಿ, ಸತ್ತ ಹೆಣಗಳಾಗಿರುವ ನಮಗೆ ಜೀವತುಂಬುವ ಕೆಲಸ ಮಾಡಿ, ನಮಗೆ ಹೋರಾಟವೊಂದೇ ದಾರಿಯಾಗಿದ್ದು, ನಮ್ಮನ್ನು ಸಹ ಕೈ ಹಿಡಿದುಕೊಂಡು ಕರೆದುಕೊಂಡು ಹೋಗಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಪಟ್ಟಿರುವ ರಾಯಚೂರು ಜಿಲ್ಲೆಯ ಅಭಿವೃದ್ಧಿ ವಿಷಯವನ್ನು ಶಾಸಕರು ಈ ರೀತಿಯಾಗಿ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಬಿಡಿ ಎನ್ನುವ ಮಾತನ್ನು ಶಾಸಕರು ನುಡಿಯುತ್ತಿದ್ದಂತೆಯೇ ಸಭಿಕರು ಜೋರಾಗಿ ಚಪ್ಪಾಳಿ ತಟ್ಟಿದ್ದಾರೆ. ಶಾಸಕರ ಈ ನೋವಿನ, ಅತಾಶಯದ ನುಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಗೊಂಡಿದೆ.
ಯತ್ನಾಳ್ ಬಗ್ಗೆ ಗುಡುಗಿದ್ದ ಪಾಟೀಲ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರು ಕಾಂಗ್ರೆಸ್ ಪಕ್ಷದವರಂತೆ ವರ್ತಿಸುತ್ತಿದ್ದಾರೆ ಎಂದು ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ್ ಹೇಳಿದ್ದರು.
ತಾಲೂಕಿನ ಆನೆಗೊಂದಿಗೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿರುವ ಯತ್ನಾಳ್ ವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊಗಳುವುದನ್ನು ನೋಡಿದರೆ ಯತ್ನಾಳ್ ಯಾವ ಪಕ್ಷದವರು ಎಂದು ಗೊತ್ತಾಗುತ್ತಿಲ್ಲ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಸುಮ್ಮನೆ ಕುಳಿತಿದ್ದಾರೆ. ನಮ್ಮ ಪಕ್ಷದಲ್ಲಿ ಇಬ್ಬರು-ಮೂವರು ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಸಮಸ್ಯೆ ಇದ್ದರೆ ಕುಳಿತು ಮಾತನಾಡಲಿ. ಮಾಧ್ಯಮದಲ್ಲಿ ಹೇಳಿಕೆ ನೀಡಿದರೆ ಹಿರೋ ಆಗುವುದಿಲ್ಲ. ನಮ್ಮ ಕ್ಯಾಪಿಸಿಟಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ದಿಲ್ಲಿಯಲ್ಲಿ ಪ್ರತ್ಯಕ್ಷ: ರಾಜ್ಯ ರಾಜಕಾರಣದಲ್ಲಿ ಸಂಚಲನ
ಯಡಿಯೂರಪ್ಪ ಅವರಿಗೆ ಒಬ್ಬರು ಇಬ್ಬರು ವಿರೋಧ ಮಾಡಿದರೆ ಅವರನ್ನು ತೆಗೆದು ಹಾಕಲು ಆಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಲು ಯಡಿಯೂರಪ್ಪ ಅವರೇ ಕಾರಣ. ಯಾರಿಗೆ ಮುಖ್ಯಮಂತ್ರಿ ಮೇಲೆ ವಿಶ್ವಾಸ ಇಲ್ಲವೋ ಅವರು ರಾಜೀನಾಮೆ ಕೊಡುವುದು ಒಳಿತು. ಅಂಥವರ ಬಗ್ಗೆ ವರಿಷ್ಠರಿಗೆ ದೂರು ಸಲ್ಲಿಸಲಾಗುತ್ತದೆ. ಬಿಜೆಪಿ ಬಗ್ಗೆ ಮಾತನಾಡುವುದಿದ್ದರೆ ಸರ್ಕಾರದಿಂದ ಹೊರ ಬಂದು ಮಾತನಾಡಲಿ. ಅವರೆಲ್ಲ ಉಂಡು ಮನೆಗೆ ಬೆಂಕಿ ಇಡುವ ವ್ಯಕ್ತಿಗಳು ಎಂದ ಶಿವರಾಜ್ ಪಾಟೀಲ್ ಹೇಳಿದರು. ಅವಧಿ ಮುಗಿಯವವರಿಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.