ಬಸನಗೌಡ ಪಾಟೀಲ್ ಯತ್ನಾಳ್ ದಿಲ್ಲಿಯಲ್ಲಿ ಪ್ರತ್ಯಕ್ಷ: ರಾಜ್ಯ ರಾಜಕಾರಣದಲ್ಲಿ ಸಂಚಲನ

* ಸಿಎಂ ವಿರುದ್ಧ ತಿರುಗಿಬಿದ್ದಿರುವ ಯತ್ನಾಳ್ ದೆಹಲಿ ಯಾತ್ರೆ
* ದೆಹಲಿಗೆ ಆಗಮಿಸಿರುವ ಬಸವನಗೌಡ ಪಾಟೀಲ್ ಯತ್ನಾಳ್
* ಸಿಎಂ ವಿರುದ್ಧ ಬಂಡಾಯ ಎದ್ದಿರುವ ಯತ್ನಾಳ್ ಹೈಕಮಾಂಡ್ ನಾಯಕರನ್ನು ಭೇಟಿ ಸಾಧ್ಯತೆ

Vijayapura BJP MLA basanagouda patil yatnal In delhi rbj

ನವದೆಹಲಿ, (ಜುಲೈ.09): ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ದೆಹಲಿಗೆ ತೆರಳಿರುವುದು ಮತ್ತೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಇತ್ತೀಚೆಗಷ್ಟೇ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಶುಕ್ರವಾರ) ಬಸವನಗೌಡ ಪಾಟೀಲ್ ಯತ್ನಾಳ್ ಆಗಮಿಸಿದ್ದು, ಭಾರೀ ಕುತೂಹಲ ಮೂಡಿಸಿದೆ.

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ : ಯತ್ನಾಳ್‌

ನಾಯಕತ್ವ ಬದಲಾವಣೆ ಮತ್ತು ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಯತ್ನಾಳ್ ಹಲವು ಬಾರಿ ಮಾತನಾಡಿದ್ದರು. ಅವರು ಇದೇ ವಿಚಾರಕ್ಕೆ ದೆಹಲಿ ಆಗಮಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

 ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಯತ್ನಾಳ್, ಹಲವು ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.  ಆದ್ರೆ, ನೂತನ ಕೇಂದ್ರ ಸಚಿವರಿಗೆ ಶುಭಾಶಯ ಕೋರಲು ಆಗಮಿಸಿರುವುದಾಗಿ ಮೇಲ್ನೋಟಕ್ಕೆ ಹೇಳಿದ್ದಾರೆ.

ಒಟ್ಟಿನಲ್ಲಿ ರೆಬೆಲ್ ಶಾಸಕ ಯತ್ನಾಳ್ ದೆಹಲಿ ಭೇಟಿ ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆಯೋ ಎನ್ನುವುದನ್ನು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios