Asianet Suvarna News Asianet Suvarna News

ನಟ ಪುನೀತ್‌ ರಾಜ್‌ಕುಮಾರ್‌ ಮನೆಗೆ ರಾಹುಲ್‌ ಗಾಂಧಿ ಭೇಟಿ

*  ಪುನೀತ್‌ ರಾಜ್‌ಕುಮಾರ್‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ರಾಹುಲ್ ಗಾಂಧಿ
*  ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಜತೆ ಚರ್ಚೆ
*  ಪುನೀತ್‌, ಡಾ.ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಭಾವಚಿತ್ರಗಳಿಗೆ ನಮನ ಸಲ್ಲಿಸಿದ ರಾಹುಲ್
 

Rahul Gandhi Met Puneeth Rajkumar House in Bengaluru grg
Author
Bengaluru, First Published Apr 1, 2022, 6:49 AM IST | Last Updated Apr 1, 2022, 9:12 AM IST

ಬೆಂಗಳೂರು(ಏ.01):  ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ನಿಧನರಾದ ನಟ ದಿ. ಪುನೀತ್‌ ರಾಜ್‌ಕುಮಾರ್‌(Puneeth Rajkumar) ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬೆಂಗಳೂರಿನ ಸದಾಶಿವನಗರದ ಪುನೀತ್‌ ನಿವಾಸಕ್ಕೆ ಭೇಟಿ ನೀಡಿ ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌(Ashwini Puneet Rarjkumar) ಹಾಗೂ ಸಹೋದರ ರಾಘವೇಂದ್ರ ರಾಜ್‌ಕುಮಾರ್‌(Raghavendra Rajkumar) ಅವರೊಂದಿಗೆ ಚರ್ಚಿಸಿದರು. ಬಳಿಕ ಪುನೀತ್‌, ಡಾ.ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಭಾವಚಿತ್ರಗಳಿಗೆ ನಮನ ಸಲ್ಲಿಸಿದರು.

ಈ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಸಾಥ್‌ ಇದ್ದರು.

ಏ.14ಕ್ಕೆ ಸೋನಿ ಲೈವ್‌ ಓಟಿಟಿಯಲ್ಲಿ ಜೇಮ್ಸ್‌!

ನಟ ದಿ. ಪುನೀತ್‌ರಾಜ್‌ ಕುಮಾರ್‌ ಅವರ ಬೆಂಗಳೂರಿನ(Bengalur) ಸದಾಶಿವನಗರದ ಪುನೀತ್‌ ನಿವಾಸಕ್ಕೆ ಭೇಟಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ದ್ವೇಷ ನಿಲ್ಲಲಿ, ಭ್ರಾತೃತ್ವ ಹಬ್ಬಲಿ

ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ(Dr Shivakumar Swamiji) ಅವ​ರ 115ನೇ ಜಯಂತಿ ಹಿನ್ನೆ​ಲೆ​ಯಲ್ಲಿ ಸಿದ್ಧಗಂಗಾ ಮಠಕ್ಕೆ(Siddaganga Matha) ಗುರು​ವಾರ ಭೇಟಿ ನೀಡಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ(Rahul Gandhi) ಅವರು, ಶ್ರೀಗಳ ಗದ್ದುಗೆ ದರ್ಶನ ಪಡೆ​ದ​ರು. ಬಳಿಕ ಮಕ್ಕಳ ಮಧ್ಯೆ ಕೆಲ​ಕಾಲ ಕಳೆ​ದ​ರು.

ಸಂಜೆ 5.50 ಕ್ಕೆ ಸಿದ್ಧಗಂಗಾ ಮಠಕ್ಕೆ ಆಗ​ಮಿ​ಸಿದ ರಾಹುಲ್‌ ನೇರವಾಗಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ಪೂಜೆ ಸಲ್ಲಿ​ಸಿ​ದರು. ಬಳಿಕ ಸಿದ್ಧಲಿಂಗ ಸ್ವಾಮೀಜಿ ಅವರ ಕಚೇರಿಗೆ ತೆರಳಿ ಸ್ವಾಮೀಜಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು. ನಂತರ ಉಪಹಾರ ಸೇವಿಸಿ ಸಾಮೂಹಿಕ ಪ್ರಾರ್ಥನಾ ಸಭಾಂಗಣಕ್ಕೆ ಬರುತ್ತಿದ್ದಂತೆ ಮಠದ ವಿದ್ಯಾರ್ಥಿಗಳು(Students) ಭಾರೀ ಕರತಾಡನದೊಂದಿಗೆ ಸ್ವಾಗ​ತಿ​ಸಿ​ದ​ರು. ಸುಮಾರು 15 ನಿಮಿಷ ಕಾಲ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ​ರು. ಮಠ​ದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಳೆ​ದ ರಾಹುಲ್‌ ನಂತರ ಕಾರಿ​ನಲ್ಲಿ ಬೆಂಗಳೂರಿಗೆ ವಾಪ​ಸಾ​ದರು.

ದ್ವೇಷ ನಿಲ್ಲ​ಲಿ:

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು,ದೇಶದಲ್ಲಿ ದ್ವೇಷ ಹರಡುವುದನ್ನು ನಿಲ್ಲಿಸಬೇಕು, ಭ್ರಾತೃತ್ವ ಭಾವನೆ ಹರಡಬೇಕು. ಬಸವಣ್ಣನವ(Basavanna) ಜಾತ್ಯತೀತ ಮನೋಭಾವ, ಅವರ ವಚನಗಳ ಆಶಯ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದು ಹೇಳಿ​ದ​ರು.

Puneeth Rajkumar: ನಮ್ಮ ದೃಷ್ಟಿ- ನಮ್ಮ ಕರ್ನಾಟಕ ಅಭಿಯಾನಕ್ಕೆ ಸಿಎಂ ಚಾಲನೆ

ಸಿದ್ಧ​ಗಂಗಾ ಮಠ ಹಾಗೂ ನಮ್ಮ ಕುಟುಂಬಕ್ಕೂ ಹಿಂದಿನಿಂದಲೂ ಅವಿನಾಭಾವ ಹಾಗೂ ಗೌರವಯುತ ಸಂಬಂಧವಿದೆ. ನಮ್ಮ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್‌ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ(Sonia Gandhi) ಅವರು ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದರು. ಈಗ ನಾನು ಮಠಕ್ಕೆ ಬಂದಿರುವುದು ವೈಯಕ್ತಿಕವಾಗಿ ಬಹಳ ಸಂತೋಷ ಕೊಟ್ಟಿದೆ. ಸಿದ್ಧಗಂಗಾ ಮಠ ಶಿಕ್ಷಣ, ದಾಸೋಹಕ್ಕೆ ಪ್ರಸಿದ್ಧಿ, ಬಸವಣ್ಣನವರ ಜಾತ್ಯತೀತ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ. ಹಿಂದೆ ತಾವು ಮಠಕ್ಕೆ ಭೇಟಿ ನೀಡಿದ್ದಾಗ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೆ. ಈ ಬಾರಿ ಅವರಿಲ್ಲದಿರುವುದು ಬೇಸರದ ಸಂಗತಿ ಎಂದರು.

ಅವರು ಹಾಕಿ ಕೊಟ್ಟಿರುವ ಮಾರ್ಗ ನಮಗೆ ದಾರಿದೀಪ. ಭ್ರಾತೃತ್ವ, ಸೋದ​ರತ್ವ, ಸಾಮರಸ್ಯವನ್ನು ಪ್ರಚಾರ ಮಾಡುವ ಕೆಲಸವನ್ನು ಸಿದ್ಧಗಂಗಾ ಮಠ ಮಾಡುತ್ತಿದೆ. ಇದಕ್ಕಾಗಿ ನಾವು ಸಿದ್ಧಗಂಗಾ ಮಠ ಹಾಗೂ ಶ್ರೀಗಳನ್ನು ಅಭಿನಂದಿಸುತ್ತೇವೆ ಎಂದರು. ಮಾಜಿ ಸಿಎಂ ಸಿದ್ದ​ರಾ​ಮ​ಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌, ಈಶ್ವರ ಖಂಡ್ರೆ ಲಕ್ಷ್ಮೇ ಹೆಬ್ಬಾಳಕರ್‌ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios