Asianet Suvarna News Asianet Suvarna News

Puneeth Rajkumar: ನಮ್ಮ ದೃಷ್ಟಿ- ನಮ್ಮ ಕರ್ನಾಟಕ ಅಭಿಯಾನಕ್ಕೆ ಸಿಎಂ ಚಾಲನೆ

ನಟ ಪುನೀತ್‌ ರಾಜ್‌ಕುಮಾರ್‌ ಅವರು ನೇತ್ರದಾನ ಮಾಡುವ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದು, ಅವರನ್ನು ‘ನಮ್ಮ ದೃಷ್ಟಿ-ನಮ್ಮ ಕರ್ನಾಟಕ’ ಅರಿವು ಅಭಿಯಾನದ ರಾಯಭಾರಿಯಾಗಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

cm basavaraj bommai inaugurates for namma drushiti namma karnataka awareness campaign gvd
Author
Bangalore, First Published Mar 30, 2022, 9:56 AM IST | Last Updated Mar 30, 2022, 9:56 AM IST

ಬೆಂಗಳೂರು (ಮಾ.30): ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರು ನೇತ್ರದಾನ ಮಾಡುವ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದು, ಅವರನ್ನು ‘ನಮ್ಮ ದೃಷ್ಟಿ-ನಮ್ಮ ಕರ್ನಾಟಕ’ ಅರಿವು ಅಭಿಯಾನದ ರಾಯಭಾರಿಯಾಗಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಆರೋಗ್ಯ ಇಲಾಖೆ, ಡಾ.ರಾಜ್‌ಕುಮಾರ್‌ ಟ್ರಸ್ಟ್‌ (Dr Rajkumar Trust), ಎಸ್ಸಿರ್ಲಾ ವಿಷನ್‌ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನಮ್ಮ ದೃಷ್ಟಿ-ನಮ್ಮ ಕರ್ನಾಟಕ’ (Namma Drushiti Namma Karnataka) ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಪ್ರತಿಬಾರಿ ಪುನೀತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಹೊಸ ಸ್ಫೂರ್ತಿ ದೊರೆಯುತ್ತದೆ. ವ್ಯಕ್ತಿಯೊಬ್ಬ ಸಾಧನೆ ಮಾಡಲು ಬಹಳ ವರ್ಷ ಕಾಯಬೇಕಿಲ್ಲ. ಆತ್ಮಶುದ್ದಿ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಪುನೀತ್‌ ರಾಜ್‌ಕುಮಾರ್‌ ನಿರೂಪಿಸಿದ್ದಾರೆ. ಸಾವಿನ ನಂತರವೂ ನಮ್ಮ ನಡುವೆಯೇ ಬದುಕುತ್ತಿರುವ ಪುನೀತ್‌ ಅವರು ಜನರ ಮೇಲೆ ಬೀರಿರುವ ಪ್ರಭಾವ ವಿಸ್ಮಯಕಾರಿಯಾಗಿದೆ ಎಂದು ಹೇಳಿದರು.

ಡಾ.ರಾಜ್‍ಕುಮಾರ್ ಅವರು ಮೇರು ನಟ ಅಷ್ಟೇ ಅಲ್ಲ, ಅವರೊಬ್ಬ ಅತ್ಯುತ್ತಮ ವ್ಯಕ್ತಿಯೂ ಆಗಿದ್ದರು. ಅವರಲ್ಲಿದ್ದ ಉದಾತ್ತತೆ, ದಯೆ, ಅಳತೆ ಮಾಡದಷ್ಟು ದೊಡ್ಡದಾಗಿತ್ತು. ಅವರಷ್ಟು ಸೂಕ್ಷ್ಮಮತಿಗಳನ್ನು ಕಾಣುವುದು ಕಷ್ಟ. ಅವರು ಪ್ರತಿ ಮಾತು ಆಡುವಾಗಲೂ ಇನ್ನೊಬ್ಬರಿಗೆ ನೋವಾಗಬಾರದೆಂದು ಯೋಚಿಸಿ ಮಾತನಾಡುತ್ತಿದ್ದರು. ಡಾ: ರಾಜ್ ಕುಮಾರ್ ಮುಗ್ಧತೆಗೆ ಮತ್ತೊಂದು ಹೆಸರು. ಡಾ. ರಾಜ್‍ಕುಮಾರ್ - ಪುನೀತ್ ರಾಜ್‍ಕುಮಾರ್ ಅವರು ದೇವರ ಕೊಡುಗೆ, ಅಂತಹ ವ್ಯಕ್ತಿ ಮತ್ತೊಮ್ಮೆ ಸಿಗುವುದಿಲ್ಲ ಎಂದು ಸಿಎಂ ಸ್ಮರಿಸಿದರು. ನಾವು ದಯೆ, ಕರುಣೆಯನ್ನು ಸಮಾಜಕ್ಕೂ ನೀಡಬೇಕು. ಕಣ್ಣಿನ ದಾನ ಮಾಡಿ ಪುನೀತ್‌ ಸಾವಿರಪಟ್ಟು ಪ್ರೇರಣೆ ನೀಡಿದ್ದಾರೆ. 

Puneeth Rajkumar: ಅಪ್ಪು ಅಗಲಿ 5 ತಿಂಗಳು: ಸಮಾಧಿಗೆ ಆರ್‌ಜಿವಿ ನಮನ

ಸರ್ಕಾರ ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ ಅಂಗಾಂಗ ದಾನಕ್ಕೆ ಹೊಸ ಘಟಕವನ್ನು ಯೂನಿಟ್‌ ಸ್ಥಾಪಿಸಲು ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿದೆ. ರಾಜ್ಯದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ನೇತ ತಪಾಸಣೆ, ಕನ್ನಡಕ ನೀಡಲು ಅನುದಾನವನ್ನು ಮೀಸಲಿರಿಸಲಾಗಿದೆ. ನಮ್ಮ ದೃಷ್ಟಿನಮ್ಮ ಕರ್ನಾಟಕ ಮತ್ತು ಸರ್ವರಿಗೂ ದೃಷ್ಟಿನೀಡುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಸಾಮ್ಯತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಸಕ್ಕರೆ ಸಚಿವ ಶಂಕರಪಾಟೀಲ್‌ ಮುನೇನಕೊಪ್ಪ, ನಟ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar), ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini Puneeth Rajkumar) ಇತರರು ಉಪಸ್ಥಿತರಿದ್ದರು.

ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ: ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಅಪ್ಪು ಅವರ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಲ್ಕನೇ ತರಗತಿ ಕನ್ನಡ ವಿಷಯದ ಪರೀಕ್ಷೆಯಲ್ಲಿ ಅಪ್ಪು ಬಗ್ಗೆ ಕೇಳಲಾಗಿದೆ. ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಿದ್ದರು, ಅವರ ತಂದೆಯ ಹೆಸರೇನು, ಪುನೀತ್ ಯಾವಾಗ ಜನಿಸಿದರು ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕಿದೆ. ಈ ಪ್ರಶ್ನೆಪತ್ರಿಕೆ ನೋಡಿದ ಅಭಿಮಾನಿಗಳು ಸಂತಸ ಹೊರಹಾಕುತ್ತಿದ್ದಾರೆ. 

Puneeth Rajkumar: ಸೆಲೆಬ್ರಿಟಿಗಳ ಪ್ರತಿಮೆ ಗುಚ್ಛ ಸೇರಿದ ಪವರ್ ಸ್ಟಾರ್ ಡಾ.ಅಪ್ಪು

ಶಾಲೆಗೆ ಧನ್ಯವಾದ ತಿಳಿಸುತ್ತಿದ್ದಾರೆ. ಮಕ್ಕಳ ಪಠ್ಯಪುಸ್ತಕದಲ್ಲಿ ಪುನೀತ್ ಬಗ್ಗೆ ಪಾಠ ಸೇರಿಸಬೇನ್ನುವ ಮಾತು ಸಹ ಕೇಳಿಬರುತ್ತಿದೆ. ಪುನೀತ್ ರಾಜ್ ಕುಮಾರ್ ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಅನೇಕ ಶಾಲೆಗಳಿಗೆ ನೆರವು ನೀಡಿದ್ದಾರೆ. ಆದರೆ ಇದೆಲ್ಲಿಯೂ ಬಹಿರಗವಾಗದಂತೆ ನೋಡಿಕೊಂಡಿದ್ದರು. ಪುನೀತ್ ಅವರನ್ನು ದೇವರಂತೆ ಕಾಣಲು ಇಂತ ಕೆಲಸಗಳೇ ಕಾರಣ. ಇತ್ತೀಚಿಗಷ್ಟೆ ಪುನೀತ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರ್ ನೀಡಿದೆ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಡಾಕ್ಟರೇಟ್ ಸ್ವೀಕರಿಸಿದರು. ಈ ಸಮಯದಲ್ಲಿ ಇಡೀ ರಾಜ್ ಕುಟುಂಬ ಹಾಜರಿತ್ತು. ಈ ವೇಳೆ ಅಶ್ವಿನಿ ಭಾವುಕರಾಗಿದ್ದರು.

Latest Videos
Follow Us:
Download App:
  • android
  • ios